ಕ್ಷೇತ್ರಕ್ಕೆ ಎರಡು ಮಂಡಲ ರಚನೆಗೆ ರಾಜ್ಯಾಧ್ಯಕ್ಷರಲ್ಲಿ ಮನವಿ: ಸಾಸನೂರ

ಕ್ಷೇತ್ರಕ್ಕೆ ಎರಡು ಮಂಡಲ ರಚನೆಗೆ ರಾಜ್ಯಾಧ್ಯಕ್ಷರಲ್ಲಿ ಮನವಿ: ಸಾಸನೂರ  Appeal to the State President to form two mandals for the constituency: Sasanura

ದೇವರಹಿಪ್ಪರಗಿ 09: ವಿಧಾನಸಭಾ ಕ್ಷೇತ್ರ ಸುತ್ತಲೂ 135ಕಿ.ಮೀ ಉದ್ದ ಅಗಲವಿದ್ದು ಬಿಜೆಪಿ ಪಕ್ಷದ ಸಂಘಟನೆಗಾಗಿ ದೇವರ ಹಿಪ್ಪರಗಿ ಹಾಗೂ ಹೂವಿನ ಹಿಪ್ಪರಗಿ ಎರಡು ಮಂಡಲ ರಚನೆಗೆ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜೇಂದ್ರ ಅವರಿಗೆ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಅವರು ಮನವಿ ಪತ್ರ ಸಲ್ಲಿಸಿದ್ದೇನೆ ಎಂದು ಹೇಳಿದರು. 

ಈ ಕುರಿತು ಶುಕ್ರವಾರದಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಂಬರುವ ತಾಪಂ, ಜಿಪಂ, ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಹಿತ ದೃಷ್ಟಿಯಿಂದ ಪಕ್ಷದ ಸಂಘಟನೆಗೆ ಅನುಕೂಲವಾಗಲು ಹಾಗೂ ಕಾರ್ಯಕರ್ತರ, ಮುಖಂಡರ ಸಭೆ ಮಾಡಲು ಅನುಕೂಲವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಪಕ್ಷ ಸಂಘಟನೆ ಕುರಿತು ಬೆಂಗಳೂರಿನಲ್ಲಿ ಸಭೆ ನಡೆಸಿದ ರಾಜ್ಯದ್ಯಕ್ಷರಿಗೆ ಪಕ್ಷದ ಸಂಘಟನೆಯ ದೃಷ್ಟಿಯಿಂದ ಸುಮಾರು ನಾಲ್ಕು ತಾಲೂಕಿನ ಜನರ ಸಂಪರ್ಕ ಮಾಡಬೇಕಾಗಿದೆ ಹೀಗಾಗಿ ಎರಡು ಮಂಡಲ ರಚನೆ ಮಾಡುವುದರಿಂದ ಆ ಭಾಗದ ಜನರು ಭಾಗವಹಿಸಲು ಸಮಯ ಹಾಗೂ ಸಂಘಟನೆಗೆ ಅನುಕೂಲವಾಗುತ್ತದೆ. ಈಗಾಗಲೇ ದೇವರಹಿಪ್ಪರಗಿ ಮಂಡಲ ರಚನೆಯಾಗಿದ್ದು, ಹೂವಿನ ಹಿಪ್ಪರಗಿ ಮಂಡಲ ರಚನೆಯಾದರೆ ಆ ಭಾಗದ ನಾಲ್ಕು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ ಎಂದು ರಾಜ್ಯಾಧ್ಯಕ್ಷರಿಗೆ ಮನವರಿಕೆ ಮಾಡಿಕೊಡಲಾಗಿದೆ.  

ನಮ್ಮ ಮನವಿಗೆ ರಾಜ್ಯಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪಿ. ರಾಜೀವ ಹಾಗೂ ಪ್ರೀತಮಗೌಡ ಅವರಿಗೂ ಮನವಿ ಪತ್ರ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಸಿಂದಗಿ ಮಾಜಿ ಶಾಸಕರಾದ ರಮೇಶ ಭೂಸನೂರ, ದೇವರಹಿಪ್ಪರಗಿ ಮಂಡಲ ಅಧ್ಯಕ್ಷರಾದ ಅವ್ವಣ ಗ್ವಾತಗಿ, ಸಿಂದಗಿ ಮಂಡಲ ಅಧ್ಯಕ್ಷರಾದ ಸಂತೋಷ ಪಾಟೀಲ(ಡಂಬಳ), ಮುಖಂಡರುಗಳಾದ ಸಾಬು ಮಾಶ್ಯಾಳ, ಸಿದ್ರಾಮಯ್ಯ ಮಠ, ಮಂಜುನಾಥ ಬಡಿಗೇರ, ಶಿವಾನಂದ ಹುಲ್ಲೂರ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.