ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ದಾಳಿ ಖಂಡಿಸಿ ರಾಷ್ಟ್ರಪತಿಗಳಿಗೆ ಮನವಿ

 ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ದಾಳಿ ಖಂಡಿಸಿ ರಾಷ್ಟ್ರಪತಿಗಳಿಗೆ ಮನವಿ Appeal to the President condemning shoe attack on Chief Justice of the Supreme Court

ಲೋಕದರ್ಶನ ವರದಿ 

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ದಾಳಿ ಖಂಡಿಸಿ ರಾಷ್ಟ್ರಪತಿಗಳಿಗೆ ಮನವಿ 

ಗದಗ 10: ಭಾರತದ ಸುಪ್ರೀಂ ಕೋರ್ಟ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಮೇಲೆ ಶೂ ಎಸದಿರುವ ಘಟನೆಯನ್ನು ಖಂಡಿಸಿ ಈ ಘಟಣೆಗೆ ಕಾರಣರಾದ ಸಂವಿಧಾನ ವಿರೋಧಿ ವಕೀಲರಾದ ರಾಕೇಶ ಕಿಸೋರ ಮೇಲೆ ದೇಶದ್ರೋಹಿ ಪ್ರಕರಣದಡಿಯಲ್ಲಿ ಗಡಿಪಾರು ಮಾಡಲು ಆಗ್ರಹಿಸಿ ಗದಗ-ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.  

ವೇದಿಕೆ ಮುಖಂಡರಾದ ಮಹ್ಮದಯುಸುಫ ನಮಾಜಿ ಮಾತನಾಡಿ ಭಾರತದ ಸುಪ್ರೀಂ ಕೋರ್ಟ ನ್ಯಾಯಮೂರ್ತಿಗಳಾದ ಬಿ.ಅರ್‌.ಗವಾಯಿ ಅವರ ಮೇಲೆ ಕೋಮುವಾದಿ, ಜಾತಿವಾದಿ ಮತ್ತು ನಮ್ಮ ದೇಶದ ಸಂವಿಧಾನ ವಿರೋಧಿ ವಕೀಲ ರಾಕೇಶ ಕಿಶೋರ ಇವನು ನ್ಯಾಯಾಲದಲ್ಲಿ ಕಲಾಪ ನಡೆಯುವ ಸಂದರ್ಭಲ್ಲಿ ನ್ಯಾಯಮೂರ್ತಿ ಅವರ ಮೇಲೆ ಶೂ ಎಸದಿರುವ ಘಟನೆ ದೇಶದ್ರೋಹಿ ಮತ್ತು ಪ್ರಜಾಪ್ರಭುತ್ವದ ವಿರೋಧಿಯಾಗಿದೆ. ಈ ಘಟನೆಯನ್ನು ಗದಗ-ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆಯಿಂದ ನಾವು ಖಂಡಿಸುತ್ತೇವೆ. ಈ ಕೃತ್ಯಯು ಭಾರತ ದೇಶದ 140 ಕೋಟಿ ಬಾರತೀಯರ ಗೌರವಕ್ಕೆ ತೀವ್ರ ಧಕ್ಕೆ ತಂದಿದೆ. ಈ ಘಟನೆಯು ಪ್ರಜಾಪ್ರಭುತ್ವದ ಮೇಲೆ ನಡೆದ ನೇರ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.  

ಈ ಸಂದರ್ಭದಲ್ಲಿ ಬಾಬಾಜಾನ ಬಳಗಾನೂರ, ಅಷ್ಫಾಕಅಲಿ ಹೊಸಳ್ಳಿ ಇಂಜಿನಿಯರ್, ಅನ್ವರ ಶಿರಹಟ್ಟಿ, ಉಮರಫಾರುಖ ಹುಬ್ಬಳ್ಳಿ, ಮುಜಮ್ಮಿಲ್ ಬಳ್ಳಾರಿ, ರಫೀಕ ಜಮಾಲಖಾನವರ, ಮುನ್ನಾ ಶೇಖ, ಮುಜಫರ್ ಮುಲ್ಲಾ, ಸಾಧಿಕ ನರೇಗಲ್ಲ, ಮೆಹಬೂಬ ಮುಲ್ಲಾ, ರಜಾಕ ಸೂಡಿ, ರಿಯಾಜ ಪಾಮಡಿ, ಮಹ್ಮದಶಫಿ ಮುಲ್ಲಾ, ಮೆಹಬೂಬಸಾಬ ಬಳ್ಳಾರಿ, ಖಾಜಾಸಾಬ ಇಸ್ಮಾಯಿಲನವರ, ಮೌಲಾಸಾಬ ಗಚ್ಚಿ, ಗೌಸಸಾಬ ಅಕ್ಕಿ, ಸಲೀಂ ಹರಿಹರ, ಖಾಜೇಸಾಬ ಬಳ್ಳಾರಿ ಹಾಗೂ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.