ತಹಶೀಲ್ದಾರ ಭಾಗವಾನ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ

ತಹಶೀಲ್ದಾರ ಭಾಗವಾನ್ ಅವರ  ಮೂಲಕ ರಾಜ್ಯಪಾಲರಿಗೆ ಮನವಿ Appeal to the Governor through Tahsildar Bhagwan

ರಾಣಿಬೆನ್ನೂರು:30 ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಸ್ವಜನ ಪಕ್ಷಪಾತ ಮಿತಿ ಮೀರಿದ್ದು ಕಾಂಗ್ರೆಸ್  ಸಚಿವರ ವಿರುದ್ಧವೇ ಸ್ವಪಕ್ಷೀಯ ಶಾಸಕರುಗಳೇ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದು ದಕ್ಷ ಆಡಳಿತ ನಡೆಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಇಲ್ಲಿನ ಜೆಡಿಎಸ್ ಪಕ್ಷದ ತಾಲೂಕು ಘಟಕದ ವತಿಯಿಂದ ಸೋಮವಾರದಂದು ನಗರದಲ್ಲಿ ಪ್ರತಿಭಟಿಸಿ ನಂತರ ತಹಶೀಲ್ದಾರ ಭಾಗವಾನ್ ಅವರ  ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. 

ಪ್ರತಿಭಟನೆ ನೇತೃತ್ವ ವಹಿಸಿದ್ದ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ರಾಜ್ಯ ಸರ್ಕಾರ ಬಡವರಿಗೆ ಯಾವುದೇ ಯೋಜನೆಗಳ ಅನುಷ್ಠಾನ ಮಾಡದೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಅಭಿವೃದ್ಧಿಗೆ ಯಾವುದೇ ಅನುದಾನ ಸಿಗುತ್ತಿಲ್ಲ ಮತ್ತು ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಶಾಸಕರೇ ನೇರವಾಗಿ ದಾಖಲೆಗಳ ಸಮೇತ ಮಾಧ್ಯಮಗಳ ಮೂಲಕ ಆರೋಪಿಸಿದ್ದಾರೆ ಎಂದರು. 

ರಾಜ್ಯದಲ್ಲಿ ವಸತಿ ಯೋಜನೆ ಆಗಲಿ ರಸ್ತೆ ಚರಂಡಿ ಕಾಮಗಾರಿಗಳಾಗಲಿ ಅಭಿವೃದ್ಧಿ ಕಾರ್ಯಗಳಾಗದೆ ಜನ ಸಾಮಾನ್ಯರ ಮೇಲೆ ದರ ಏರಿಕೆಯ ಹೊರೆಯನ್ನು ಹೊರಿಸಿ ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಜನ ವಿರೋಧಿ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. 

 ಜೆಡಿಎಸ್ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಮಹೇಶ್ ಹೊನ್ನಜ್ಜೇರ, ಉಪಾಧ್ಯಕ್ಷ ಮಲ್ಲಿಕಾರ್ಜುನ ಹಲಗೇರಿ, ನಗರ ಘಟಕದ ಅಧ್ಯಕ್ಷ ರಮೇಶ ಮಾಕನೂರ, ಉಪಾಧ್ಯಕ್ಷ ದಾವುಲ್ ಮಲ್ಲಿಕ್, ಮೌನೇಶ್ ಮನ್ವಾಚಾರಿ, ಮೌನೇಶ ಬಡಿಗೇರ, ಮೌನೇಶ ಕಮ್ಮಾರ ,ಚನ್ನವೀರ​‍್ಪ ಬಡಿಗೇರ, ಎಂ ಬಿ ಕಂಬಳಿ, ಸಿದ್ದಪ್ಪ ಗುಡಿಮುಂದ್ಲರ , ನಿಂಗಪ್ಪ ಸಣ್ಣ ಕೊಟ್ರ​‍್ಪನವರ, ಬಸವರಾಜ ದೇವರಮನಿ, ಸುನ್ನಾಖಾನ್ ಮುನ್ನಾ, ಇಬ್ರಾಹಿಂ ಯಲಗಚ್ಚಿ , ಚನ್ನವೀರ​‍್ಪ ವೈ ಟಿ ಹೊನ್ನತ್ತಿ, ಕಿರಣ ಕುಮಾರ ಗೌಡರ್ , ರಮೇಶ ಕನ್ನಪ್ಪಳವರ, ವಿಠಲ್ ಸುಣಗಾರ, ನಾಗರಾಜ ಅಜ್ಜನವರ, ಬೋದಣ್ಣ ಮಾಕನೂರ, ಹನುಮಂತಪ್ಪ ಬಿಷ್ಟಣ್ಣನವರ, ನಾಗರಾಜ ಅಣ್ಣೇರ, ಈರಣ್ಣ ಆಣೂರ , ತಮ್ಮಣ್ಣ ತುಮ್ಮಿನಕಟ್ಟಿ, ರವೀಂದ್ರ ಶಿವಪ್ಪನವರ, ಮಹಿಳಾ ಘಟಕದ ಅಧ್ಯಕ್ಷೆ ಉಷಾ ಜಾಡಮಲಿ, ದೀಪಾ ದಳವಾಯಿ, ಕಸ್ತೂರಿ ಅರ್ಕಾಸಾಲಿ, ಐಶ್ವರ್ಯ ಮಡಿವಾಳರ ಸೇರಿದಂತೆ ಜೆಡಿಎಸ್ ಪಕ್ಷದ ಹಲವಾರು ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.