ಬಿರುಗಾಳಿ ಮಳೆಗೆ ಬಗ್ಗಿದ ಗಿಡಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆಗೆ ಮನವಿ
Appeal to the Forest Department to protect trees damaged by storms
ಬಳ್ಳಾರಿ 26: ನಗರದ ಅನಂತಪುರ ರಸ್ತೆ ಬೈಪಾಸ್ನಿಂದ ವಿಆರ್ಎಲ್ ಗೋಡೌನ್ ಮೂಲಕ ಬೆಂಗಳೂರು ರಸ್ತೆಯವರೆಗೆ ಕಳೆದೊಂದು ವರ್ಷ ಹಿಂದೆ ಅರಣ್ಯ ಇಲಾಖೆ ವತಿಯಿಂದ ನೆಡಲಾಗಿದ್ದ ಹಲವು ಗಿಡಗಳು ಇತ್ತೀಚೆಗೆ ಸುರಿದ ಭಾರಿ ಬಿರುಗಾಳಿ ಮಳೆಯಿಂದ ಬಾಗಿರುವ ಘಟನೆ ಕಂಡುಬಂದಿದೆ. ಸುಮಾರು 20ರಿಂದ 30 ಗಿಡಗಳು ಬಗ್ಗಿ ಹಾನಿಗೊಳಗಾಗಿರುವುದರಿಂದ ಅವುಗಳನ್ನು ತಕ್ಷಣವೇ ನೆಟ್ಟಗೆ ನಿಲ್ಲಿಸಿ ಸಂರಕ್ಷಣೆ ಮಾಡುವಂತೆ ಸಮಾಜ ಸೇವಕ ಎಂ. ಶಂಕರ್ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಸ್ತೆ ಬದಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ನೆಡಲಾಗಿದ್ದ ಗಿಡಗಳು ಪರಿಸರ ಸಂರಕ್ಷಣೆಗೆ ಬಹಳ ಉಪಯುಕ್ತವಾಗಿದ್ದು, ಅವು ಹಾನಿಗೊಳಗಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಗಿಡಗಳಿಗೆ ಅಗತ್ಯವಾದ ಬೆಂಬಲ ಕಂಬಗಳನ್ನು ಅಳವಡಿಸಿ ಪುನಃ ಸರಿಪಡಿಸಿದರೆ ಅವು ಬದುಕುಳಿಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳ ಪರೀಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 