ವಿಶ್ವವಿಖ್ಯಾತ ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ್ಲ ನಿರಂತರವಾಗಿ ಪ್ರಸಾದ ವಿತರಣೆ ಮಾಡುವ ಜಿಲ್ಲಾಧಿಕಾರಿಗಳಿಗೆ ಮನವಿ

 ವಿಶ್ವವಿಖ್ಯಾತ ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ್ಲ ನಿರಂತರವಾಗಿ ಪ್ರಸಾದ ವಿತರಣೆ ಮಾಡುವ ಜಿಲ್ಲಾಧಿಕಾರಿಗಳಿಗೆ ಮನವಿ  Appeal to the District Collector to continuously distribute Prasad at the world famous Hampi Virupak

ಲೋಕದರ್ಶನ ವರದಿ 

ವಿಜಯನಗರ ಹೊಸಪೇಟೆ. 07 : ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ವಿಜಯನಗರ ಜಿಲ್ಲೆಯ ಶ್ರೀ ಸಸ್ಯ ಶಾಮಲಾ ಸಂರಕ್ಷಣಾ ಸೇವಾ ಟ್ರಸ್ಟ್‌ ಹೊಸಪೇಟೆ ವತಿಯಿಂದ ವಿಶ್ವವಿಖ್ಯಾತ ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ಮಧ್ಯಾಹ್ನ ಹಾಗೂ ರಾತ್ರಿಯಲ್ಲಿ ನಿರಂತರವಾಗಿ ಪ್ರಸಾದ ವಿತರಣೆ ಮಾಡುವ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ  ಶ್ರೀ ಸಸ್ಯ ಶಾಮಲಾ ಸಂರಕ್ಷಣಾ ಸೇವಾ ಟ್ರಸ್ಟ್‌  ಅಧ್ಯಕ್ಷರಾದ ವಿ ನಾಗರಾಜ್ ರವರು ಮಾತನಾಡಿ  ವಿಶ್ವವಿಖ್ಯಾತ ಹಂಪಿಯು ಧಾರ್ಮಿಕ, ಐತಿಹಾಸಿಕ ಹಾಗೂ ವಿಶ್ವ ಪಾರಂಪರಿಕ ತಾಣವಾಗಿದ್ದು ಕಲೆ, ಸಾಹಿತ್ಯ, ಶಿಲ್ಪಕಲೆ ಹಾಗೂ ಸಂಸ್ಕೃತಿಗೆ ಹೆಸರುವಾಸಿಯಾಗಿದು,್ದ ಇಲ್ಲಿಗೆ ಪ್ರತಿದಿನ ದೇಶದೆಲ್ಲೆಡೆಯಿಂದ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಆಗಮಿಸುತ್ತಿರುತ್ತಾರೆ.

ಆದರೆ ಇಲ್ಲಿ ಸರಿಯಾದ ಹೋಟೆಲ್ ವ್ಯವಸ್ಥೆ ಇರುವುದಿಲ್ಲ ಒಂದುವೇಳೆ ಇದ್ದರೂ ಅತ್ಯಂತ ವೆಚ್ಚದಾಯಕವಾಗಿರುತ್ತದೆ. ಅದಕಾರಣ ಬಹಳಷ್ಟು ಸಾರಿ ಪ್ರವಾಸಿಗರು ಉಪವಾಸದಿಂದ ಮಲಗುವ ದುಸ್ಥಿತಿ ಉಂಟಾಗಿರುತ್ತದೆ.  ನಮ್ಮ ದೇಶದ ನಾಣ್ಣುಡಿಯಾದ ಅತಿಥಿ ದೇವೋಭವ  ಎಂಬ ಮಾತಿನಂತೆ ಅತಿಥಿಗಳಿಗೆ  ಸತ್ಕರಿಸುವುದು ಶ್ರೇಷ್ಟವಾದ ಕಾರ್ಯವಾಗಿರುವುದರಿಂದ ಬಂದ ಅಥಿತಿಗಳ ಹಸಿವನ್ನು ನೀಗಿಸಲು  ಪ್ರಸಾದವನ್ನು ವಿತರಿಸಬೇಕಾಗಿದೆ. ಪ್ರಸಾದ ದೊರಕದೇ ಇದ್ದ ಸಂದರ್ಭದಲ್ಲಿ  ಅಬಾಲ ವೃದ್ಧರಾದಿಯಾಗಿ ಎಲ್ಲರೂ ಉಪವಾಸದಿಂದ ಮಲಗಿದ ನಿದರ್ಶನಗಳಿವೆ. ಏಕೆಂದರೇ ಹಸಿವಿನ ಯಾತನೆ ಅನುಭವಿಸಿದವರೇ ಬಲ್ಲರು. 

ವಿಜಯನಗರವು ಅಂದು ಇಂದು ಎಂದೆಂದೂ  ಶ್ರೀಮಂತವಾಗಿದ್ದು ಮೇಲಾಗಿ ಗಣಿನಾಡಾಗಿದ್ದು  ಬಂದಂತಹ ಪ್ರವಾಸಿಗರಿಗೆ ಕನಿಷ್ಟ ಪಕ್ಷ ಪ್ರಸಾದವನ್ನು ನೀಡುವುದಿಲ್ಲ ಎಂಬುದು ಪ್ರವಾಸಿಗರ ಅನಿಸಿಕೆಯಾಗಿದೆ.  ರಾಜ್ಯದ ಪ್ರಸಿದ್ದ ದೇವಾಲಯಗಳಾದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು ಮುಂತಾದ ದೇವಾಲಯಗಳಲ್ಲಿ ಹಸಿವನ್ನು ನೀಗಿಸಿ ಪ್ರವಾಸ ವೆಚ್ಚದ ಹೊರೆಯನ್ನು ಕಡಿಮೆಮಾಡಿರುತ್ತಾರೆ. ಆದುದರಿಂದ ದಯಾಳುಗಳಾದ  ತಾವುಗಳು ಗಮನ ಹರಿಸಿ ದಯಮಾಡಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಗಳಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಿ ಕೊಡಲು ಸೂಕ್ತ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಮತ್ತೊಮ್ಮೆ ಕಳಕಳಿಯಿಂದ  ವಿನಂತಿಸಿಕೊಳ್ಳುತ್ತೇವೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎ ಗೋವಿಂದ ಹಾಗು ಇತರರು ಉಪಸ್ಥಿತರಿದ್ದರು.