ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ Appeal to the District Collector demanding the installation of CCTV cameras

ಕೊಪ್ಪಳ  26: ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಹಾಗೂ ಜೆಸ್ಕಾಂ ಕಛೇರಿಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್‌.ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಕೆಗೆ ಆಗ್ರಹಿಸಿ ಜಿಲ್ಲಾ ಆಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ ಅವರಿಗೆ ಜನಪರ ಸಂಘಟನೆಗಳ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು. ಕೊಪ್ಪಳ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಮತ್ತು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ಕಛೇರಿಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಮತ್ತು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಇಪ್ಪತ್ತು ನಾಲ್ಕು ತಾಸು ಚಾಲನೆಯಲ್ಲಿ ಇರಬೇಕು.ಕೆಟ್ಟರೆ ತಕ್ಷಣ ದುರಸ್ತಿ ಗೊಳಿಸಬೇಕು.

ಸ್ಥಗಿತಗೊಂಡಿದ್ದರೆ ಆಯಾ ಕಛೇರಿ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಕರ್ತವ್ಯ ಎಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು.    ಕೊಪ್ಪಳ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿಯೂ ವಿಶೇಷವಾಗಿ ಕೆಲ ಮುಖ್ಯೋಪಾಧ್ಯಾಯರು. ಶಿಕ್ಷಕರು. ಪ್ರಾಚಾರ್ಯರು. ಉಪನ್ಯಾಸಕರು.ಸಿಬ್ಬಂದಿಗಳು ಬೆಳ್ಳಿಗೆ ಪ್ರಾರ್ಥನೆ ಮುಗಿದ ಬಳಿಕ ಬರುತ್ತಾರೆ. ಬೋಧನಾ ಅವಧಿ ಮುಗಿಯುವ ಮೊದಲು ಹೊರಟು ಹೋಗುತ್ತಾರೆ.

ಇದರಿಂದ ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಹಾಗೂ ಕಾಲೇಜು ಶಿಕ್ಷಣ ಗುಣಮಟ್ಟ ವಿಪರೀತ ಕುಸಿದಿದೆ. ಮಕ್ಕಳ ಹಾಜರಾತಿ ಗಿಂತ ಶಿಕ್ಷಕರ ಉಪನ್ಯಾಸಕರ.ಮುಖ್ಯೋಪಾಧ್ಯಾಯರು ಹಾಗೂ ಪ್ರಾಚಾರ್ಯರರ ಹಾಜರಾತಿ ಕಡ್ಡಾಯವಾಗಬೇಕು. ನಿಗದಿತ ಸಮಯದೊಳಗೆ ಬಂದು ಅವಧಿ ಮುಗಿದ ನಂತರ ಹೋಗಲು ಸಿಸಿ ಟಿವಿ ಕ್ಯಾಮೆರಾಗಳು ಮತ್ತು ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಅಳವಡಿಸುವ ಮೂಲಕ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು.      

ಜಿಲ್ಲಾ ಕೇಂದ್ರದ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ವಿಭಾಗ ಮತ್ತು ಉಪ ವಿಭಾಗಗಳಲ್ಲಿ ಕಾರ್ಯನಿರ್ವಾಹಕ ಅಭಿಯಂತರರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು. ಸಹಾಯಕ ಅಭಿಯಂತರರು ಸೇರಿದಂತೆ ಶಾಖಾಧಿಕಾರಿ ಕಛೇರಿಗಳ ಸಹಾಯಕ.ಕಿರಿಯ ಅಭಿಯಂತರರು.ಅಧಿಕಾರಿಗಳು.ಸಿಬ್ಬಂದಿಗಳಲ್ಲಿ ಕೆಲ ನೌಕರರು ಸೇವೆಗೆ ಹಾಜರಾಗದೆ ದುಬಾರಿ ವೇತನ ಪಡೆಯುತ್ತಿದ್ದರೆ ಇನ್ನೂ ಕೆಲವರು ಕಛೇರಿ ಸಮಯಕ್ಕೆ ಸರಿಯಾಗಿ ಬಾರದೇ ತಡವಾಗಿ ಬಂದು ಬೇಗ ಹೊರಟು ಹೋಗಲು ಯಾವುದೇ ರೀತಿಯ ಅಡೆತಡೆಗಳು ಇಲ್ಲದಂತಾಗಿದೆ. ತಕ್ಷಣ ಅಭಿಯಂತರರಿಗೆ.

ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ತಪ್ಪದೆ ಸಮಯಕ್ಕೆ ಸರಿಯಾಗಿ ಬಂದು ಕಛೇರಿ ಅವಧಿ ಮುಗಿದ ಬಳಿಕ ಹೋಗುವಂತೆ ಸಿಸಿ ಟಿವಿ ಕ್ಯಾಮೆರಾಗಳು ಮತ್ತು ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡಿ ಆದೇಶ ಹೊರಡಿಸಬೇಕು ಎಂದು ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್‌.ಎ.ಗಫಾರ್‌.ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಬಸವರಾಜ್ ಶೀಲವಂತರ್‌.ಪಾಸ್ಟರ್ಸ್‌ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಎಂ. ಅಪ್ಪಣವರ್‌. ಮುಖಂಡರಾದ ಮಖಬೂಲ್ ರಾಯಚೂರು. ಶಿವಪ್ಪ ಹಡಪದ್ ಮುಂತಾದವರು ಒತ್ತಾಯಿಸಿ ಮನವಿ ಸಲ್ಲಿಸಿದರು.