ರಾಜ್ಯ ಸರಕಾರದ ಇಬ್ಬದಿಯ ನೀತಿಯನ್ನು ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ
Appeal to the District Collector condemning the state government's double standard policy
ಗದಗ 07 : ರಾಜ್ಯ ಸರಕಾರ ಬಳ್ಳಾರಿ ಪೊಲೀಸರಿಗೊಂದು ನ್ಯಾಯ ಗದಗ ಜಿಲ್ಲೆಯ ಪೊಲೀಸರಿಗೊಂದು ನ್ಯಾಯ ಮಾಡುತ್ತಿದೆಯೆಂದು ಹಿಂದೂ ಸಂಘಟನೆಗಳ ಮುಖಂಡ ರಾಜೂ ಖಾನಪ್ಪನವರ ಆರೋಪಿಸಿದ್ದಾರೆ. ಗದಗ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು,ರಾಷ್ಟ್ರಪತಿಗಳಿಗೆ ರಾಜ್ಯ ಸರಕಾರದ ವೈಫಲ್ಯ ಹಾಗೂ ಇಬ್ಬದಿಯ ನೀತಿಯನ್ನು ಖಂಡಿಸಿ ಮನವಿ ಸಲ್ಲಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತ್ರತ್ವದ ರಾಜ್ಯ ಕಾಂಗ್ರೇಸ್ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ಸರಕಾರ ಅಧಿಕಾರಿಗಳ ಮೇಲೆ ನಿಯಂತ್ರಣ ಕಳೆದುಕೊಂಡಿದೆ.ಕೆಲವೆಡೆ ಅಧಿಕಾರಿಗಳು ಆಡಿದ್ದೇ ಆಟವೆನ್ನುವಂತಾಗಿದೆ. ಕೆಲವೆಡೆ ಸರಕಾರ ನಾಮಕಾವಾಸ್ತೆ ಅಧಿಕಾರಿಯ ಮೇಲೆ ಕ್ರಮ ಕೈಗೊಂಡಂತೆ ನಾಟಕವಾಡಿ ತನ್ನವೈಫಲ್ಯವನ್ನು ಮರೆ ಮಾಚುತ್ತಿದೆಯೆಂದು ಆರೋಪಿಸಿದರು.
ಗಣಿನಾಡು ಬಳ್ಳಾರಿಯಲ್ಲಿ ಬ್ಯಾನರ್ ವಿಷಯಕ್ಕೆ ಸಂಭಂಧಿಸಿದಂತೆ ಶಾಸಕ ನಾ.ರಾ.ಭರತ್‌ರೆಡ್ಡಿ ಅಂಗರಕ್ಷನಿಂದಲೇ ಹತ್ಯೆಗೀಡಾದ ಕಾಂಗ್ರೇಸ್ ಕಾರ್ಯಕರ್ತನ ಹತ್ಯೆಗೆ ಸಂಭಂಧಿಸಿದಂತೆ ಅಂದೇ ಕರ್ತವ್ಯಕ್ಕೆ ಹಾಜರಾಗಿದ್ದ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಕರ್ನಾಟಕದ 2016 ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಪವನ ನೆಜ್ಜೂರ ಎಂಬ ಅಧಿಕಾರಿಯನ್ನು ಸೇವೆಯಿಂದ ಅಮಾನತ್‌ಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಬಳ್ಳಾರಿ ಶಾಸಕ ನಾ.ರಾ.ಭರತ್‌ರೆಡ್ಡಿಯನ್ನು ಸಂತುಷ್ಟಗೋಳಿಸಲು ಸರಕಾರ ಪ್ರಯತ್ನಿಸಿದೆಯೆಂದು ಆರೋಪಿಸಿದರು.
ಕ್ಷುಲ್ಲಕ ಬ್ಯಾನರ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಬ್ಯಾನರ ಘಟನೆಯಲ್ಲಿ ಕ್ಷುಲ್ಲಕ ರಾಜಕೀಯಕ್ಕಾಗಿ ಓರ್ವ ವ್ಯಕ್ತಿ ಜೀವ ಕಳೆದುಕೊಂಡಿರುವದು ಅತ್ಯಂತ ವಿಷಾದನೀಯವಾಗಿದೆ.ಯಾವದೇ ವ್ಯಕ್ತಿಗೆ ಯಾವದೇ ವ್ಯಕ್ತಿಯ ಜೀವ ತೆಗೆಯುವದಾಗಲಿ ಇಲ್ಲವೇ ಮಾರಣಾಂತಿಕವಾಗಿ ಹಲ್ಲೆ ನಡೆಸುವದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್‌ಐ ಈರ್ಪ ರಿತ್ತಿ ಎಂಬುವವರು ಜಮೀನಿನಲ್ಲಿನ ಕೃಷಿ ಚಟುವಟಿಕೆ ನಡೆಸಿ ಮನೆಗೆ ವಾಪಸ್ಸಾಗುತ್ತಿದ್ದ ಮುಗ್ಧ ರೈತ ಸೋಮಪ್ಪ ಬೂದಪ್ಪ ಲಮಾಣಿ ಎಂಬ ರೈತನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಮೂವತ್ತೇರಡು ಸಾವಿರ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ. ಈ ಘಟನೆಗೆ ಸಂಭಂಧಿಸಿದಂತೆ ಶಿರಹಟ್ಟಿಯ ಶಾಸಕ ಡಾ.ಚಂದ್ರು ಲಮಾಣಿ ಪೊಲೀಸ್ ಠಾಣೆಗೆ ಸ್ವತ: ಆಗಮಿಸಿ ಪಿಎಸ್‌ಐ ಮೇಲೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿದ ನಂತರವೇ ಪ್ರಕರಣ ದಾಖಲಾಗಿರುವದು ವಿಪರ್ಯಾಸವಾಗಿದೆಯೆಂದು ಹೇಳಿದರು. .
ಕ್ಷುಲ್ಲಕ ಬ್ಯಾನರ್ ವಿಷಯಕ್ಕೆ ಸಂಭಂಧಿಸಿದಂತೆ ಶಾಸಕ ನಾ.ರಾ.ಭರತರೆಡ್ಡಿ ಅವರ ಅಂಗರಕ್ಷಕನಿಂದಲೇ ಹತ್ಯೆಗೀಡಾಗಿರುವ ಪ್ರಕರಣಕ್ಕೆ ಸಂಭಂಧಿಸಿದಂತೆ ಅದೇ ದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದ ಪವನ ನೆಜ್ಜೂರ ಎಂಬ ಐಪಿಎಸ್ ಅಧಿಕಾರಿಯನ್ನು ಸರಕಾರ ಅಮಾನತ್‌ಗೋಳಿಸಿದೆ. ಜಮೀನಿನಲ್ಲಿ ಕೃಷಿ ಚಟುವಟಿಕೆ ಮುಗಿಸಿ ಮನೆಗೆ ತೆರಳುತ್ತಿದ್ದ ಮುಗ್ಧ ರೈತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಮೂವತ್ತೇರಡು ಸಾವಿರ ರೂಪಾಯಿಗಳನ್ನು ಲೂಟಿ ಮಾಡಿದ ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್‌ಐ ಈರ್ಪ ರಿತ್ತಿ ಮೇಲೆ ಇದುವರೆಗೂ ಯಾವದೇ ಕ್ರಮ ಜರುಗಿಸದಿರುವದು ಅತ್ಯಂತ ವಿಷಾದನೀಯವಾಗಿದೆಯೆಂದು ವಿಷಾದಿಸಿದರು.
ಬೆಂಗಳೂರಿನಲ್ಲಿ ಶಾಂತಿಯುತವಾಗಿ ಓಂ ಶಕ್ತಿ ಮಾಲಾಧಾರಿಗಳು ನಡೆಸುತ್ತಿದ್ದ ಮೆರವಣಿಗೆಯ ಮೇಲೆ ದುಷ್ಟ ಮುಸ್ಲೀಂ ಮತಾಂಧರು ಕಲ್ಲೆಸೆದು ಗಲಭೆ ಸೃಷ್ಟಿಸಲು ಪ್ರಯತ್ನಿಸಿದ ಪ್ರಕರಣದಲ್ಲಿಯೂ ಸಹ ಇದುವರೆಗೆ ಯಾವದೇ ವ್ಯಕ್ತಿ,ಸಂಘಟನೆಯ ಮೇಲೆ ಪ್ರಕರಣ ದಾಖಲಿಸುವದಾಗಲಿ,ಗಲಭೆಗೆ ಪ್ರಯತ್ನಿಸಿದವರನ್ನು ಬಂಧಿಸುವದಾಗಲಿ ನಡೆದಿಲ್ಲ. ಇದು ಕಾಂಗ್ರೇಸ್ ಸರಕಾರದ ದುರಾಡಳಿತ,ಮುಸ್ಲೀಂರ ತುಷ್ಟೀಕರಣವನ್ನು ತೋರುತ್ತದೆಯೆಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಶಿರಹಟ್ಟಿಯಲ್ಲಿ ಪರಿಶಿಷ್ಟ ಜಾತಿಯ ಮುಗ್ಧ ರೈತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಮೂವತ್ತೇರಡು ಸಾವಿರ ರೂಪಾಯಿಗಳನ್ನು ಲೂಟಿ ಮಾಡಿದ ಪಿಎಸ್‌ಐ ಈರಣ್ಣ ರಿತ್ತಿಯನ್ನು ಸರಕಾರ ಕೂಡಲೇ ಅಮಾನತ್‌ಗೋಳಿಸಬೇಕು.ಬೆಂಗಳೂರಿನಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೆರವಣಿಯ ಮೇಲೆ ಕಲ್ಲೇಸೆದ ದುಷ್ಕರ್ಮಿಗಳ ಮೇಲೆ ಪ್ರಕರಣ ದಾಖಲಿಸಿ ದುಷ್ಕರ್ಮಿಗಳನ್ನು ಜೈಲಿಗೆ ಅಟ್ಟುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹೇಶ್ ರೋಖಡೆ ಹುಲಿಗೆಪ್ಪ ವಾಲ್ಮೀಕಿ ಬಸವರಾಜ್ ಕುರ್ತಕೊಟ್ಟಿ ಈಶ್ವರ್ ಕಾಟವಾ ಕುಮಾರ್ ನಡಗೇರಿ ವೆಂಕಟೇಶ್ ದೊಡ್ಮನಿ ಭರತ ಲದ್ದಿ ಈರಣ್ಣ ಪೂಜಾರ ಎಸ್ ಪಿ ಕಾಳೆ ಕಿರಣ್ ಹಿರೇಮಠ ಸತೀಶ್ ಕುಂಬಾರ್ ಮುದುಕಪ್ಪ ದೊಡ್ಮನಿ ಬಸವರಾಜ್ ಬನೀ ಮರದ ಅಭಿಲಾಶ್ ಗುಜ್ಮಾಗಡಿ ಸಂಜು ಚಟ್ಟಿ ಕೃಷ್ಣ ಹುಯ್ಲ್ ಗೋಳು ಮಹಾಬಲೇಶ್ವರ ಶೆಟ್ಟರ್ ಮೌನೇಶ್ ದಾಸರ್ ಈರ್ಪ ವಾಲ್ಮೀಕಿ ರಾಜು ಗದ್ದಿ ಮಂಜು ಗುಡಿಮನಿ ಈರಣ್ಣ ಗಾಣಿಗೇರ್ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 