ಕೊಪ್ಪಳ ಮೂಲಕ ಹೆಚ್ಚು ರೈಲುಗಳನ್ನು ಓಡಿಸಲು ಆಗ್ರಹಿಸಿ ಮನವಿ

ಕೊಪ್ಪಳ ಮೂಲಕ ಹೆಚ್ಚು ರೈಲುಗಳನ್ನು ಓಡಿಸಲು ಆಗ್ರಹಿಸಿ ಮನವಿ Appeal to run more trains via Koppal

ಕೊಪ್ಪಳ  29 : ಹುಬ್ಬಳ್ಳಿ ವಾಯ ಕೊಪ್ಪಳ ಹೊಸಪೇಟೆ ಮೂಲಕ ಬೆಂಗಳೂರಿಗೆ ಆರು ರೈಲುಗಳನ್ನು ಓಡಿಸಲು ಮತ್ತು ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈಲ್ವೆ ನಿಲ್ದಾಣದ ಪ್ರಬಂಧಕ ಸೈಯ್ಯದ್ ಅಸಿಫ್ ಹಾಗೂ ರೈಲ್ವೆ ಟ್ರಾಫಿಕ್ ಇನ್ಸ್‌ ಪೆಕ್ಟರ್ ಸಂದೀಪ್ ಸುಮನ್ ಅವರ ಮುಖಾಂತರ ಹುಬ್ಬಳ್ಳಿಯ ರೈಲ್ ಸೌಧದ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥೂರ್ ಅವರಿಗೆ ರೈಲ್ವೆ ಜನಪರ ಹೋರಾಟ ಸಮಿತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.       ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿಯ ಕನಕದಾಸ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಲ್ಲಿಸಿದ ಮನವಿಯಲ್ಲಿ ಹುಬ್ಬಳ್ಳಿ ಬೆಂಗಳೂರು ವಾಯ ಹಾವೇರಿ ಮೂಲಕ ನಿತ್ಯ ಸಂಚರಿಸುವ ಅನೇಕ ರೈಲುಗಳಲ್ಲಿ ಆರು ರೈಲುಗಳನ್ನು ಹುಬ್ಬಳ್ಳಿ ವಾಯ ಕೊಪ್ಪಳ - ಹೊಸಪೇಟೆ ಮೂಲಕ ಬೆಂಗಳೂರಿಗೆ ಸಂಚರಿಸಲು ಕ್ರಮ ಕೈಗೊಳ್ಳಬೇಕು, ಸಂಖ್ಯೆ : 56519/56520 ಬೆಂಗಳೂರು ಹೊಸಪೇಟೆ ಬೆಂಗಳೂರು ಈ ರೈಲನ್ನು ಹೊಸಪೇಟೆಯಿಂದ ಮುನಿರಾಬಾದ ಗಿಣಿಗೇರಾ ಕೊಪ್ಪಳ ಭಾಣಾಪುರ  ತಳಕಲ್ ಜಂಕ್ಷನ್ ಮೂಲಕ ಕುಕನೂರು ಯಲಬುರ್ಗಾ ಕುಷ್ಟಗಿವರೆಗೆ ವಿಸ್ತರಿಸಬೇಕು. ಗದಗ ವಾಡಿ ಮಾರ್ಗ ಕೇವಲ ಕುಷ್ಟಗಿ ವರೆಗೆ ಮಾತ್ರ ಪೂರ್ಣಗೊಂಡಿದ್ದು. ವಾಡಿವರೆಗೂ ಬೇಗ ಕಾಮಗಾರಿ ಪೂರ್ಣಗೊಳಿಸಬೇಕು.ಹುಬ್ಬಳ್ಳಿಯಿಂದ ಬೀದರಿಗೆ ಇಂಟರ್ ಸಿಟಿ ರೈಲು ದ ವಾಯ :ಗದಗ. ಕೊಪ್ಪಳ. ಹೊಸಪೇಟೆ.ಬಳ್ಳಾರಿ. ಗುಂತಕಲ್‌.ಮಂತ್ರಾಲಯ ರೋಡ್‌. ರಾಯಚೂರು. ಯಾದಗಿರಿ. ಕಲಬುರಗಿ ನ.  

ಮಾರ್ಗವಾಗಿ ನಿತ್ಯ ಬೀದರಿಗೆ ಹೊಸ  ರೈಲು ಪ್ರಾರಂಭಿಸುವುದರಿಂದ ಮುಂಬೈ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರೈಲು ಆಗಲಿದ್ದು ಈ ಭಾಗದ ಜನರಿಗೆ ವಾಣಿಜ್ಯ ವ್ಯಾಪಾರಕ್ಕೆ ಸೇತುವೆ ಯಾಗುತ್ತದೆ. ನಿತ್ಯ ಬೆಳಿಗ್ಗೆ 8.30 ಕ್ಕೆ ಬಳ್ಳಾರಿಯಿಂದ ಹುಬ್ಬಳ್ಳಿಗೆ. ಮಧ್ಯಾಹ್ನ  2:30ಕ್ಕೆ ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊಸದಾಗಿ ಡೆಮೋ ಪ್ಯಾಸೆಂಜರ್ ರೈಲನ್ನು ಪ್ರಾರಂಭಿಸಬೇಕು.ಸಂಖ್ಯೆಃ 16545/16546 ಯಶವಂತಪುರದಿಂದ ಸಿಂಧನೂರು. ಸಿಂಧನೂರು ದಿಂದ ಯಶವಂತಪುರ. ಈ ರೈಲು ಗಿಣಿಗೇರಾ ರೈಲ್ವೆ ನಿಲ್ದಾಣದಿಂದ 10 ಕಿ.ಮೀ ಅಂತರದಲ್ಲಿರುವ ಜಿಲ್ಲಾ ಕೇಂದ್ರ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಬಂದು ಹೋಗಬೇಕು. ಸಿಂಧನೂರು ದಿಂದ ಬೆಂಗಳೂರಿಗೆ ಕಡಿಮೆ ಸಮಯದಲ್ಲಿ ತಲುಪುವ ಹಾಗೆ ಇನ್ನೊಂದು ಹೊಸ ಎಕ್ಸ್‌ ಪ್ರೆಸ್  ರೈಲನ್ನು ಪ್ರಾರಂಭಿಸಬೇಕು. ಮುನಿರಾಬಾದ್ ಮಹೆಬೂಬ್ ನಗರ ರೈಲ್ವೆ ಯೋಜನೆಯ ಆಮೆಗತಿಯಲ್ಲಿ ನಡೆಸಿದ ಮಾರ್ಗದ ಕಾಮಗಾರಿ ಗಿಣಿಗೇರಿ ಯಿಂದ ಸಿಂಧನೂರು ವರೆಗೆ ಮಾತ್ರ ಕಾಮಗಾರಿ ಮುಗಿದು ರೈಲು ಸಂಚಾರ ಪ್ರಾರಂಭಿಸಿದೆ.  

ಆದರೆ ಸಿಂಧನೂರಿನಿಂದ ರಾಯಚೂರು ವರೆಗೆ ಮಾರ್ಗದ ವಿಪರೀತ ವಿಳಂಬದಿಂದ ಸಾಗುತ್ತಿದೆ, ಸಂಬಂಧಪಟ್ಟ ಅಧಿಕಾರಿಗಳು ಮಾರ್ಗದ ಕಾಮಗಾರಿಯನ್ನು ತ್ವರಿತವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು. 2016ರಲ್ಲಿ ದಆಲಮಟ್ಟಿ. ಕೊಪ್ಪಳ. ಚಿತ್ರದುರ್ಗ.ನ ಈ ಹೊಸ ಮಾರ್ಗ ಸರ್ವೇ ಆಗಿದ್ದು, ಹೆಚ್ಚಿನ ಅನುದಾನ ಒದಗಿಸಿದರೆ. ವಿಜಾಪುರದಿಂದ ಬೆಂಗಳೂರಿಗೆ ಮಧ್ಯ ಕರ್ನಾಟಕ ನೇರ ಸಂಪರ್ಕ ರೈಲ್ವೆ ಮಾರ್ಗ ವಾಗುತ್ತದೆ. ಕುಡತನಿ. ಕಂಪ್ಲಿ.ಗಂಗಾವತಿ -ಕನಕಗಿರಿ -ತಾವರಗೇರಾ -ಕುಷ್ಟಗಿ -ಇಳಕಲ್ -ಬಾಗಲಕೋಟ ತೀವ್ರದಲ್ಲಿ ಸರ್ವೆ ಕಾರ್ಯ ಮುಗಿಸಿ ಹೊಸ ಮಾರ್ಗ ನಿರ್ಮಿಸುವುದರಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗುತ್ತದೆ. ಈ ಮೊದಲಿದ್ದ ಸಂಖ್ಯೆ 0 7 3 3 5 / 0 7 3 3 6 ಬೆಳಗಾವಿಯಿಂದ ಮುನಗುರ ರೈಲನ್ನು ತಕ್ಷಣ ಪುನರಾರಂಭಿಸಬೇಕು. ವಿಜಾಪುರ್ ದಿಂದ ತಿರುಪತಿಗೆ. ಗಂಗಾವತಿಯಿಂದ ಆಯೋಧ್ಯ ವರಿಗೆ. ಅಂಜನಾದ್ರಿ ಎಕ್ಸ್ಪ್ರೆಸ್ ಹೊಸ ರೈಲನ್ನು ಪ್ರಾರಂಭಿಸಬೇಕು.11415/ 11416 ದಸೋಲ್ಲಾಪುರ ಹೊಸಪೇಟೆ. ಸೋಲ್ಲಾಪುರ. ನಡೆಮೋ ಎಕ್ಸ್‌ ಪ್ರೆಸ್ ರೈಲು ಸಂಖ್ಯೆ 17329 / 17330ದಹುಬ್ಬಳ್ಳಿ. ವಿಜಯವಾಡ. ಹುಬ್ಬಳ್ಳಿ. ನ ಎಕ್ಸ್‌ ಪ್ರೆಸ್ ರೈಲು ಈ ಎರಡು  ರೈಲುಗಳು ಕೋವಿಡ್ ಕಿಂತ ಮುಂಚೆ ಪ್ಯಾಸೆಂಜರ್ ರೈಲು ಆಗಿತ್ತು ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿತ್ತು. ಬಳಿಕ ಎಕ್ಸ್‌ ಪ್ರೆಸ್ ಆಗಿದ್ದರಿಂದ ಜನರಿಗೆ ಮೂರು ಪಟ್ಟುಗಿಂತಲೂ ಹೆಚ್ಚು ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿ ಪ್ರಯಾಣಿಸಬೇಕಾಗಿದೆ, ಇವುಗಳನ್ನು ತಕ್ಷಣ ಪ್ಯಾಸೆಂಜರ್ ರೈಲುಗಳಾಗಿ ಮೊದಲಿನ ದರದಲ್ಲಿ ಟಿಕೆಟ್ ಗಳನ್ನು ನಿಗದಿಪಡಿಸಬೇಕು. ಕೊಪ್ಪಳ ಹತ್ತಿರ ಗೇಟ್ ಸಂಖ್ಯೆ 66 ರ ಗೇಟ್ ಸಂಖ್ಯೆ 68ರ ನಡುವೆ ಸಿದ್ದೇಶ್ವರ ನಗರ, ಬೇಲ್ದಾರ್ ಕಾಲೋನಿ ಮತ್ತು ಹೊಸ ಲೇಓಟ್ ಗಳು ನಿರ್ಮಾಣಗೊಳ್ಳುತ್ತಿವೆ.  

ಮುಖ್ಯ ರಸ್ತೆಯ ಎಂ.ಆರ್‌.ಎಫ್‌. ಟೈಯರ್ ಶೋರೂಮನ ಪಕ್ಕದ ರಸ್ತೆ ಮುಖಾಂತರ ಹೊಸ ಕೆಳ ಕಿರು ಸೇತುವೆ ನಿರ್ಮಿಸಬೇಕು.ಗೇಟ್ ನಂಬರ್ 63 ಸ್ವಾಮಿ ವಿವೇಕಾನಂದ ಶಾಲೆ ಹತ್ತಿರ ಇರುವ ಕೆಳ ಸೇತುವೆ  ಶೀಘ್ರದಲ್ಲಿ ಜನರಿಗೆ ಸಂಚರಿಸಲು ಅನುಕೂಲ ಮಾಡಬೇಕು. ಹೊಸದಾಗಿ  ಅಮೃತ್ ಭಾರತ ಯೋಜನೆಯಡಿ ಕೊಪ್ಪಳ ರೈಲ್ವೆ ನಿಲ್ದಾಣ ಕಾಮಗಾರಿ ಕಳಪೆಯಾಗಿದ್ದು. ಅಲ್ಲದೆ ನಿಲ್ದಾಣದ ಮೇಲ್ಚಾವಣಿ ಮಳೆಗೆ ಸೋರುತ್ತಿದ್ದು. ಪರೀಶೀಲಿಸಿ ಕ್ರಮ ಕೈಗೊಳ್ಳಬೇಕು.ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಕೌಂಟರ್ ಬೆಳಿಗ್ಗೆ ಎಂಟರಿಂದ ಮಧ್ಯಾಹ್ನ 1 ಗಂಟೆವರೆಗೆ ಇರುತ್ತದೆ. ಮಧ್ಯಾಹ್ನ ಒಂದರಿಂದ ಎರಡುವರೆ ಗಂಟೆವರೆಗೆ ಬಂದ್ ಇರುವುದರಿಂದ ರೈಲು ಪ್ರಯಾಣಕ್ಕೆ ಮುಂಗಡ ಕಾದಿರಿಸುವವರಿಗೆ ತೊಂದರೆಯಾಗುತ್ತಿದೆ. ಮೊದಲಿನಂತೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ತೆರೆದಿರುವಂತೆ ಕ್ರಮ ಕೈಗೊಳ್ಳಬೇಕು. ಅದಕ್ಕೆ ಎರಡು ಸ್ವಿಫ್ಟ್‌ ಸಿಬ್ಬಂದಿಯನ್ನು ನೇಮಿಸಬೇಕು. ಟಿಸಿ ಸಿಬ್ಬಂದಿ ಇಲ್ಲದರಿಂದ ರಾತ್ರಿ ಟಿಸಿ ಕಾರ್ಯಾಲಯ ಬಂದ್ ಇರುತ್ತದೆ. ರಾತ್ರಿ ವೇಳೆ ಹೆಚ್ಚು ರೈಲುಗಳು ಸಂಚರಿಸುತ್ತಿದ್ದು ತಕ್ಷಣ ಟಿಸಿ ಕಾರ್ಯಾಲಯ ಪ್ರಾರಂಭಿಸಬೇಕು. ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರು ಯೋಗ್ಯ ಇಲ್ಲ, ಆದ್ದರಿಂದ ರೈಲ್ವೆ ನಿಲ್ದಾಣದ ವಸತಿ ಗೃಹಗಳಿಗೆ ಮತ್ತು ರೈಲ್ವೆ ನಿಲ್ದಾಣದಲ್ಲಿ ಕೊಪ್ಪಳ ನಗರಸಭೆಯಿಂದ ತುಂಗಭದ್ರಾ ನದಿಯ ಸಿಹಿ ಕುಡಿಯುವ ನೀರು ಒದಗಿಸಬೇಕು. ರೈಲ್ವೆ ಪ್ರಯಾಣಿಕರ ವಾಹನಗಳ ಸುರಕ್ಷಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ರೈಲ್ವೆ ನಿಲ್ದಾಣ ಹತ್ತಿರ ಶಾಶ್ವತವಾಗಿ ಆಟೋ ನಿಲ್ದಾಣ ನಿರ್ಮಿಸಿ ಕೊಡಬೇಕು.ದುಡಿಯುವ ಜನರ ಅನುಕೂಲಕ್ಕಾಗಿ ಎಲ್ಲಾ   ರೈಲುಗಳಲ್ಲೂ ಮುಂಭಾಗದಲ್ಲಿ ನಾಲ್ಕು ಸಾಮಾನ್ಯ ಬೋಗಿಗಳನ್ನು ಮತ್ತು ಹಿಂಭಾಗದಲ್ಲಿ ನಾಲ್ಕು ಸಾಮಾನ್ಯ ಬೋಗಿಗಳನ್ನು ಅಳವಡಿಸಬೇಕು ಎಂದು ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ. ರೈಲ್ವೆ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಎಸ್‌.ಎ.ಗಫಾರ್‌.ಗೌರವ ಅಧ್ಯಕ್ಷ ಅಲ್ಲಮ ಪ್ರಭು ಬೆಟ್ಟದೂರು. ಹಿರಿಯ ಸಲಹೆಗಾರ ಬಸವರಾಜ್ ಶೀಲವಂತರ್‌. ಉಪಾಧ್ಯಕ್ಷ ಚನ್ನಬಸಪ್ಪ ಅಪ್ಪಣವರ್‌. ಪ್ರಧಾನ ಕಾರ್ಯದರ್ಶಿ ಮಖಬೂಲ