ಮರಾಠಾ ಸಮಾಜದ ಬೇಡಿಕೆ ಈಡೇರಿಸಲು ಮನವಿ
ವಿಜಯಪುರ, 11 : ಮರಾಠಾ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ಬಜೆಟ್ನಲ್ಲಿ ಮರಾಠಾ ಸಮಾಜವನ್ನು ಕಡೆಗಣಿಸಿರುವುದನ್ನು ಖಂಡಿಸಿ ಮರಾಠಾ ಸಮಾಜದ ಮುಖಂಡರು ಬುಧವಾರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ವೀರ ಶಿವಾಜಿ ಸೇನೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಜಾಧವ ಇವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೀದರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮರಾಠಾ ಸಮಾಜದ ಬಹುದಿನಗಳ ಬೇಡಿಕೆಯನ್ನು ತಾವು ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಮರಾಠಾ ಸಮಾಜವನ್ನು 3ಬಿ ಪ್ರವರ್ಗದಿಂದ 2ಎಗೆ ಸೇರ್ಪಡೆ ಮಾಡುವುದಾಗಿಯೂ ವಾಗ್ದಾನ ಮಾಡಿದ್ದರು. ಆದರೆ ಮುಖ್ಯಮಂತ್ರಿಗಳಾದ ಮೇಲೆ ತಾವು ನೀಡಿದ ಬರವಸೆಯನ್ನು ಈಡೇರಿಸಿಲ್ಲ. 2020-21 ರ ಬಜೆಟ್ನಲ್ಲಿ ಮರಾಠಾ ಸಮಾಜವನ್ನು ಕಡೆಗಣಿಸಲಾಗಿದೆ. ಇದರಿಂದ ಮರಾಠಾ ಸಮಾಜದವರಿಗೆ ತುಂಬಾ ನಿರಾಶೇಯುಂಟಾಗಿದೆ. ಬಿಜೆಪಿ ಸರಕಾರ ಈಗಾಲಾದರೂ ಎಚ್ಚೆತ್ತುಕೊಂಡು ಮರಾಠಾ ಸಮಾಜದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾತಯಿಸಿದರು.
ಮರಾಠಾ ಸಮಾಜದ ಮುಖಂಡರಾದ ಮಾರುತಿ ತಾ. ನಿಕ್ಕಂ, ಸದಾಶಿವ ಚವ್ಹಾಣ, ಗಜಾನನ ಪವಾರ, ಅಂಬಾದಾಸ ಸಿಂದಗಿ, ಸಂತೋಷ ಪವಾರ, ದೀಪಕ, ಜ್ಯೋತಿಬಾ ನಿಕ್ಕಂ, ಶಂಕರ ತೊರವತ, ತುಕಾರಾಮ ನಲವಡೆ, ಪರಶುರಾಮ ಮುಳವಾಡ, ಶಿವಾಜಿ ಮಾನೆ, ತುಳಸಿರಾಮ ಸೂರ್ಯವಂಶಿ, ಭಗವಂತ ಪವಾರ ಮುಂತಾದವರು ಉಪಸ್ಥಿತರಿದ್ದರು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 