ಮೇದಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮನವಿ

ಮೇದಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮನವಿ Appeal to include Medara community in Scheduled Tribes

        ಯಮಕನಮರಡಿ, 17 : ಕರ್ನಾಟಕ ರಾಜ್ಯದಲ್ಲಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ - ಬೆಂಗಳೂರು, ದಿನಾಂಕ: 9/12/2025, ಅ.ಸ. ಪತ್ರ ಸಂಖ್ಯೆ 208/2025 ರನ್ವಯ ಸನ್ 2025-26 ನೇ ಸಾಲಿನ ಆಯವ್ಯಯ ಘೋಷಣೆಯಲ್ಲಿ ಆಯವ್ಯಯ ಕಂಡಿಕೆ -199 ರಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ  ಸಂಬಂಧಿಸಿದಂತೆ ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸಮಾಡುತ್ತಿರುವ 13 ಬುಡಕಟ್ಟು ಜನಾಂಗಗಳಿಗೆ ರಾಜ್ಯ ಸೇವೆಗಳಲ್ಲಿ ಪ್ರಾತಿನಿದ್ಯ ನೀಡುವ  ಸಲುವಾಗಿ ವಿಶೇಷ ನೇರ ನೇಮಕಾತಿಯನ್ನು ಕೈಗೊಳ್ಳಲಾಗುವುದು ಎಂದು ತಾವು ಘೋಷಿಸಿರುವಿರಿ.  

     ನಾವು ಸಮಾಜದಿಂದ ಪರಿಶಿಷ್ಟ ಪಂಗಡ ಜಾತಿಗಳ ಪಟ್ಟಿಯಲ್ಲಿ ಬರುವ ಕ್ರಮ ಸಂಖ್ಯೆ 37 ರ ಮೇದಾರ ಜಾತಿಗೆ ಒಳಪಡುವ ಸಮಾಜದವರು. ನಮ್ಮ ಮೂಲ ವೃತ್ತಿ ಮೇದಾರಿಕೆ.. ಅದನ್ನು ಗುಡಿಕೈಗಾರಿಕೆಯಲ್ಲಿ ಗುರ್ತಿಸುತ್ತಾರೆ. ನಾವು ಅರಣ್ಯ, ಅರಣ್ಯದಂಚಿನಲ್ಲಿ ಬಿದಿರನ್ನು ಅವಲಂಬಿಸಿಕೊಂಡು ಕಾಡಿನಲ್ಲಿ ವಾಸ ಮಾಡುತ್ತಿರುವಂಥ ಜನ ಈಗಲೂ ಕೊಡ ನಮ್ಮ ಮೇದಾರ ಸಮಾಜದ ಕುಲಬಾಂಧವರು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಬೆಳಗಾವಿ, ಚಾಮರಾಜನಗರ, ಕೊಡಗು, ರಾಮನಗರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಹೀಗೆ ಹಲವಾರು ಜಿಲ್ಲೆಗಳಲ್ಲಿ ಅರಣ್ದದಲ್ಲಿ ವಾಸವಾಗಿದ್ದಾರೆ. 21 ನೇ ಶತಮಾನದಲ್ಲಿಯೂ ಕೊಡ ಅವರು ಒಂದು ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ, ಒಂದು ಒಳ್ಳೆ ಮನೆ ಇಲ್ಲ, ವಿದ್ಯಾಭ್ಯಾಸಕ್ಕೆ ಅನಾನುಕೂಲತೆಗಳು, ಬಡತನ ಅನಾರೋಗ್ಯ ಹೀಗೆ ಹಲವಾರು ಸಮಸ್ಯೆಗಳನ್ನು ಎದುರುಸುತ್ತಿರುವ ನಮ್ಮ ಮೇದಾರ ಸಮಾಜದವರನ್ನು ತಮ್ಮ ಆಯ್ದ ಬುಡಕಟ್ಟು ಜನಾಂಗದ ಪಟ್ಟಿಯಲ್ಲಿ ಕೈ ಬಿಟ್ಟಿರುವುದು ಇಡೀ ನಮ್ಮ ಮೇದಾರ ಸಮಾಜಕ್ಕೆ ಆಗಿರುವ ಅನ್ಯಾಯವಾಗಿದೆ.  

  ನಾವು ಕರ್ನಾಟಕ ಸರ್ಕಾರ ಹಾಗೂ ಪರಿಶಿಷ್ಟ ಪಂಗಡಗಳ  ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳ ಹತ್ತಿರ ಮನವಿ ಜೊತೆ ಕಳಕಳಿಯ ವಿನಂತಿ, ತಮ್ಮ ಇಲಾಖೆಯಿಂದ ಪ್ರಕಟವಾದ ಬುಡಕಟ್ಟು ಜನಾಂಗಕ್ಕೆ ಸಂಬಂದಿಸಿದ ಪ್ರಕಟ ಪಟ್ಟಿಯನ್ನು ಮರು ಪರೀಶೀಲಿಸಬೇಕೆಂದು ಕೇಳುತ್ತಾ  ನಮ್ಮ ಮೇದಾರ ಸಮಾಜಕ್ಕೋ ಕೊಡ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರತಿನಿದ್ಯ ನೀಡುವುದರ ಜೊತೆಗೆ, ನೇರ ನೇಮಕಾತಿಯಲ್ಲಿ ನಮ್ಮನ್ನು ಕೊಡ ಪರಿಗಣಿಸಬೇಕೆಂದು ಕೋರಿಕೆ, ಉಪನ್ಯಾಸಕರು ಸಮಾಜದ ಮುಖಂಡರು ವಿಜಯಕುಮಾರ ಗ, ಮೇದಾರ  ಯಮಕನಮರಡಿ.