ಬಸ್ತವಾಡ ಬಡ ರೈತನಿಗೆ ನ್ಯಾಯ ದೊರಕಿಸಲು ಮನವಿ
Appeal to get justice for the poor farmer of Bastawada
ಹುಕ್ಕೇರಿ 30 : ತಾಲೂಕಿನ ಕೊಚರಿ ಏತ ನೀರಾವರಿ ಕಾಮಗಾರಿ ಮದುಮಕ್ಕನಾಳ ಬಸ್ತವಾಡ ಮಾರ್ಗವಾಗಿ ಕೂಚರಿ ಬ್ಯಾರೇಜ್ ಪೈಪ್ ಲೈನ್ ಮುಖಾಂತರ ನೀರು ಸಾಗಿಸುತ್ತಿರುವ ಈ ಬಡ ರೈತರ ಹೂಲಗಳಲ್ಲಿ ಹಾದು ಹೋಗಿದ್ದು ಹೂಲವನ್ನು ಹಾಳು ಮಾಡಿ ಸರಿಯಾಗಿ ಕೆಲಸ ಮಾಡದೆ ಪಾಟೀಲ್ ಗುತ್ತಿಗೆದಾರ ತಮ್ಮ ಲಾಭ ಗೋಸ್ಕರ ರೈತರ ಬೆಳೆ ಹಾನಿ ಮಾಡಿ ಪರಿಹಾರ ಕೊಡದೆ ರೈತರ ಹೂಲಗಳಲ್ಲಿ ಪೈಪ್ಲೈನ್ ಹಾಕಿದ ಸ್ಥಳದಲ್ಲಿ ಕಲ್ಲು ಬಂಡೆಗಳು ಎದ್ದಿದ್ದರೂ ಕೂಡ ಆ ಬಂಡಿಗಳನ್ನು ಪಕ್ಕದಲ್ಲಿ ಇಟ್ಟು ಕೂಡತಾ ಇಲ್ಲಾ ರೈತರು ಕೇಳಲಿಕ್ಕೆ ಹೋದರೆ ನಾವು ಸರ್ಕಾರದ ಜಾಗದಲ್ಲಿ ಪೈಪ್ ಲೈನ್ ಹಾಕ್ತಾ ಇದ್ದೀವಿ , ಏನು ಮಾಡ್ತೀರಿ ಮಾಡಿಕೊಳ್ಳಿ ಇಲ್ಲಾಂದ್ರೆ ಪೊಲೀಸ್ ಕಂಪ್ಲೇಟ್ ಕೊಡಿ ಅಂತ ಉಡಾಫೆ ಉತ್ತರ ನೀಡುತ್ತಿದ್ದಾರೆ ಹಾಗಾದರೆ ಈ ರೈತರಿಗೆ ನ್ಯಾಯ ದೊರಕುವದೆ.
ಈಗ ಹೊಲ ಸಮತಟ್ಟ ಮಾಡಿ ಕಬ್ಬು ನಾಟಿ ಮಾಡುವಾಗ ರೈತರಿಗೆ ಗಾಯಗಳಾದವು ಈ ಬಡ ರೈತ ಬಂದ್ ಕೂಲಿ ಕಾರ್ಮಿಕರಿಗೆ ಆರೋಗ್ಯ ದೃಷ್ಟಿಯಿಂದ ದವಾಖಾನೆಯನ್ನು ತೋರಿಸಿರುತ್ತಾರೆ ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೋ ಅಥವಾ ರೈತ ಮುಖಂಡರೊಡನೆ ಮಾತನಾಡಿ ಹೋರಾಟ ಮಾಡಲಾಗುವುದೆಂದು ಭಾರತೀಯ ಕೃಷಿಕ ಸಮಾಜದ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಅಲಿ ಭಾಡ್ಕರ್ ಮಾಧ್ಯಮದವರೊಂದಿಗೆ ಮಾತನಾಡಿ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಯಾವ ರೀತಿ ಕ್ರಮ ಜರುಗಿಸುತ್ತಾರೆ ಎಂಬುದು ಕಾದ ನೋಡಬೇಕು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 