ಮುಂಜಾಗ್ರತೆ ಕ್ರಮಕ್ಕೆ ಅಧಿಕಾರಿಗಳು ಗಮನಹರಿಸುವಂತೆ ಮನವಿ
Appeal to authorities to pay attention to precautionary measures
ಮುಂಜಾಗ್ರತೆ ಕ್ರಮಕ್ಕೆ ಅಧಿಕಾರಿಗಳು ಗಮನಹರಿಸುವಂತೆ ಮನವಿ
ಸವದತ್ತಿ, 01 ; ತಾಲೂಕಿನ ಸರ್ಕಾರಿ ಆದರ್ಶ ವಿದ್ಯಾಲಯ ಯಡ್ರಾವಿ ಶಾಲೆಗೆ ತಾಲೂಕಿನ ಸುಮಾರು 30 ಹಳ್ಳಿಗಳಿಂದ ಆಯ್ಕೆಯಾಗಿರುವ 500ಕ್ಕೂ ಹೆಚ್ಚು ಪ್ರತಿಭಾವಂತ ಮಕ್ಕಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಆದರೆ ಈ ಮಕ್ಕಳಿಗೆ ಸುರಕ್ಷಿತ ಮತ್ತು ಸಮಯಕ್ಕೆ ಸರಿಯಾಗಿ ಶಾಲೆಯ ವೇಳೆಗೆ ಬೆಳಿಗ್ಗೆ ತಲುಪಲು ಸಮರ್ಕ ಬಸ್ಸುಗಳ ವ್ಯವಸ್ಥೆ ಇರುವುದಿಲ್ಲ ಮತ್ತು ಶಾಲೆ ಬಿಟ್ಟ ನಂತರ ಇವರಿಗೆ ವಾಪಸ್ ಮನೆಗೆ ಹೋಗಲು ಸೂಕ್ತ ಬಸ್ಸುಗಳ ಸೌಲಭ್ಯ ಮತ್ತು ಬಸ್ಸು ತಂಗುದಾಣ ಇಲ್ಲದೆ ರಸ್ತೆಯ ಅರ್ಧ ಭಾಗದಲ್ಲಿ ನಿಂತು ಪ್ರತಿದಿನವೂ ಬಸ್ಸುಗಳಿಗಾಗಿ ಮಳೆಗಾಲದಲ್ಲಿ ಗಾಳಿ ಮಳೆ ಚಳಿ ಎಲ್ಲವನ್ನು ಲೆಕ್ಕಿಸದೆ ಪರದಾಡುವಂತಾಗಿದೆ. ರಸ್ತೆಯಲ್ಲಿ ವಿದ್ಯಾರ್ಥಿಗಳು ಬಸ್ಸಿಗಾಗಿ ಕಾಯುವಾಗ ಹಲವಾರು ಬೇರೆ ತರಹದ ದ್ವಿ ಚಕ್ರ ಮತ್ತು ರಿಕ್ಷಾ ಗಳು ಬಿಟ್ಟು ಬಿಡದಂತೆ ವೇಗವಾಗಿ ಮತ್ತು ಅಸುರಕ್ಷತೆ ಯಿಂದ ವಿದ್ಯಾರ್ಥಿಗಳ ಪಕ್ಕದಲ್ಲಿ ಅತಿ ವೇಗವಾಗಿ ಚಲಿಸುತ್ತಿರುತ್ತವೆ. ಈ ಕಾರಣಕ್ಕಾಗಿ ಆ ಶಾಲೆಯ ಹೆಮ್ಮೆಯ ಎಲ್ಲಾ ಪ್ರಾಧ್ಯಾಪಕರು, ಎಸ್‌ಡಿಎಂಸಿ ಸರ್ವ ಸದಸ್ಯರು, ಮಕ್ಕಳ ಪಾಲಕಪೋಷಕರೆಲ್ಲರೂ ಸೇರಿ ಹೆಚ್ಚಿನ ಕಾಳಜಿ ವಹಿಸಿ ಪ್ರತಿದಿನವೂ ಮಕ್ಕಳನ್ನು ಶಾಲೆ ಬಿಟ್ಟು ನಂತರ ಬಸ್ಸುಗಳು ಯಾವಾಗ ಬರುತ್ತವೆ ಎಂದು ಕಾಯುತ್ತಾ ನಿಂತು ಮಕ್ಕಳನ್ನು ಬಸ್ಸಿಗೆ ಹತ್ತಿಸುತ್ತಿದ್ದಾರೆ.
ತಾಸುಗಟ್ಟಲೆ ಬಸ್ ತಡವಾಗಿ ಬಂದಾಗ ಮಳೆ ಬಂದರೂ ಸಹ ಮಳೆಯಲ್ಲಿಯೇ ನಿಲ್ಲಬೇಕಾಗುತ್ತದೆ. ಯಾಕೆಂದರೆ ಆ ಬಸ್ ತಪ್ಪಿದರೆ ಬೇರೆ ಬಸ್ ವ್ಯವಸ್ಥೆ ಇರುವುದಿಲ್ಲ. ಈ ಕಾರಣಕ್ಕೆ ಅಲ್ಲಿನ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗುತ್ತಿದೆ. ನಿಯಮ ಬದ್ಧವಾಗಿ ಬಸ್ಸುಗಳು ಇಲ್ಲದೆ ಇರುವುದರಿಂದ ಆ ಶಾಲೆಯ ಮಕ್ಕಳಿಗೆ ಹೋಂವರ್ಕ್ ಮಾಡಲು ಸಹ ವೇಳೆ ಸಿಗದಂತಾಗಿದೆ ಮತ್ತು ಮಕ್ಕಳ ಪಾಲಕ ಪೋಷಕರಿಗೆ ಮಕ್ಕಳ ಆರೋಗ್ಯ ಸ್ಥಿತಿಯನ್ನು ಕಂಡು ತುಂಬಾ ಗೋಳಾಡುವಂತಾಗಿದೆ. ಶಾಲೆಯ ಮುಖ್ಯ ಪ್ರಾಧ್ಯಾಪಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಕೆಎಸ್‌ಆರ್‌ಟಿಸಿಯ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರಿ ಆದರ್ಶ ವಿದ್ಯಾಲಯ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇದೆ ಸ್ವಲ್ಪ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಯ ಮುಂಭಾಗದಲ್ಲಿ ಬಸ್ ನಿಲ್ಲುವಂತೆ ಮತ್ತು ಶಾಲೆಗಳಿಗೆ ಸರಿಯಾಗಿ ಬಿಡುವಂತೆ ಕೇಳಿಕೊಂಡರು ಇದೂವರೆಗೆ ಯಾವುದೇ ರೀತಿಯ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವಲ್ಲಿ ಸಂಪೂರ್ಣ ವಿಫಲರಾಗಿರುತ್ತಾರೆ. ಕಾರಣ ಅಧಿಕಾರಿಗಳು ಅಲ್ಲಿನ ಸಮಸ್ಯೆಯನ್ನು ಪರೀಶೀಲಿಸಿ ಮಕ್ಕಳ ಹಿತದೃಷ್ಟಿಯಿಂದ ಮುಂಜಾಗ್ರತೆ ಕ್ರಮ ವಹಿಸಲು ಎಸ್‌ಡಿಎಂಸಿ ಅಧ್ಯಕ್ಷರಾದ ಸುರೇಶ ಎಸ್ ಕಾಳಪ್ಪನವರ ಹಾಗೂ ಉಪಾಧ್ಯಕ್ಷರಾದ ಸುಕನ್ಯಾ ಬೀಳಗಿ ಹಾಗೂ ಸರ್ವ ಸದಸ್ಯರು ಹಾಗೂ ಶಾಲೆಯ ಮುಖ್ಯೋಪಾಧ್ಯಯರಾದ ಆರ್‌ಎಫ್ ಮಾಘಿ ಹಾಗೂ ಶಿಕ್ಷಕ ವೃಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತಾರೆ ಆದರೆ ಇದುವರೆಗೆ ಗಮನಹರಿಸಿಲ್ಲ. ಕಾರಣ ಈ ಕುರಿತು ಅಧಿಕಾರಿಗಳು ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಾರಿಗೆ, ಸುರಕ್ಷತೆ ಬಗ್ಗೆ ಸುವ್ಯವಸ್ಥೆ ಕಲ್ಪಿಸಿಕೊಡಲು ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ 