ಪಟ್ಟಣಕ್ಕೆ ವೇಗದೂತ ರೈಲುಗಳು ನಿಲ್ಲಿಸುವಂತೆ ಸಂಸದರಿಗೆ ಮನವಿ
Appeal to MPs to stop high-speed trains to the town
ಬ್ಯಾಡಗಿ 02: ಪಟ್ಟಣವು ಅಂತರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿದ್ದು ದೇಶದಲ್ಲಿ ನಂಬರ್ ಒನ್ ಮಾರುಕಟ್ಟೆ ಆಗಿದ್ದು ಇಲ್ಲಿ ವ್ಯಾಪಾರಕ್ಕಾಗಿ ಹಲವು ರಾಜ್ಯಗಳ ಹಾಗೂ ರಾಷ್ಟ್ರಗಳಿಂದ ಪಟ್ಟಣಕ್ಕೆ ವರ್ತಕರು ಬರುತ್ತಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ವ್ಯಾಪಾರ ವೃದ್ಧಿಯ ಸಲುವಾಗಿ ಬ್ಯಾಡಗಿ ಪಟ್ಟಣಕ್ಕೆ ವೇಗದೂತ ರೈಲುಗಳನ್ನು ನಿಲ್ಲಿಸುವಂತೆ ಬ್ಯಾಡಗಿ ರೈಲ್ವೇ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಹಾಗು ಸುಧಾರಣಾ ಸಮಿತಿಯ ಪದಾಧಿಕಾರಿಗಳು ಸಂಸದರಾದ ಪ್ರಹ್ಲಾದ್ ಜೋಶಿ ಅವರಿಗೆ ಅವರ ನಿವಾಸಕ್ಕೆ ಭೇಟಿ ನೀಡಿ ಮನವಿ ಪತ್ರವನ್ನು ನೀಡಿ ವೇಗದೂತ ರೈಲುಗಳನ್ನು ನಿಲ್ಲಿಸುವಂತೆ ಮನವಿ ಮಾಡಿದರು.
ಈ ವೇಳೆ ಸಮಿತಿ ಅಧ್ಯಕ್ಷ ಹಾಗೂ ಮೈಸೂರು ರೈಲ್ವೆ ವಿಭಾಗದ ಡಿ ಆರ್ ಯು ಸಿ ಸಿ ಸದಸ್ಯ ಮಾಲತೇಶ್ ಅರಳಿಮಟ್ಟಿ ಮಾತನಾಡಿ ಪಟ್ಟಣಕ್ಕೆ ಯಶವಂತಪುರ ವಾಸ್ಕೋ. ದಾದರ್ ಬೆಂಗಳೂರು. ಹುಬ್ಬಳ್ಳಿ ವಿಶೇಷ ರೈಲ್ವೆ. ಜನ ಶತಾಬ್ದಿ ವೇಗದ ರೈಲ್ವೆಗಳ ನಿಲುಗಡೆ ಮಾಡುವಂತೆ ಕೋರಿದರು. ಇದೇ ವೇಳೆ ಮನವಿ ಸ್ವೀಕರಿಸಿ ಮಾತನಾಡಿದ ಸಂಸದರಾದ ಪ್ರಹ್ಲಾದ್ ಜೋಶಿ ಅವರು ದೇಶದಲ್ಲೇ ಮೆಣಸಿನಕಾಯಿ ವ್ಯಾಪಾರಕ್ಕೆ ಬ್ಯಾಡಗಿ ಪಟ್ಟಣ ಪ್ರಸಿದ್ಧವಾಗಿದ್ದು ಇಲ್ಲಿ ವೇಗದ ರೈಲುಗಳು ನಿಲುಗಡೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈಲ್ವೆ ಸುಧಾರಣಾ ಸಮಿತಿಯ ಜಂಟಿ ಗೌರವ ಕಾರ್ಯದರ್ಶಿ ಬಸಣ್ಣ ಅಂಜಿ ರಾಣೆಬೆನ್ನೂರು ನೆಹರು ಮಾರ್ಕೆಟ್ ವರ್ತಕರ ಸಂಘದ ನಿರ್ದೇಶಕ ಶಿವಯೋಗಿ ಅಂಗಡಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 