ಎಕ್ಸ್‌ಪ್ರೆಸ್ ರೈಲು ನಿಲುಗಡೆಗಾಗಿ ಸಂಸದರಿಗೆ ಮನವಿ
Appeal to MPs for express train stoppage
ಕಾಗವಾಡ 31: ಅತೀ ದೊಡ್ಡ ಎರಡು ತಾಲೂಕುಗಳಾಗಿರುವ ಕಾಗವಾಡ ಹಾಗೂ ಅಥಣಿ ಸಾರ್ವಜನಿಕರ ಅನುಕೂಲಕ್ಕಾಗಿ ದಾದರ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲನ್ನು ಉಗಾರ ಖುರ್ದ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಉಗಾರ ಖುರ್ದ ನಾಗರೀಕರು ಮನವಿ ಸಲ್ಲಿಸಿದ್ದಾರೆ.
ಪ್ರಿಯಾಂಕಾ ಜಾರಕಿಹೊಳಿ ಅವರು ಶುಕ್ರವಾರ ದಿ. 29 ರಂದು ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ವೇಳೆ ಮನವಿ ಸಲ್ಲಿಸಿ, ಉಗಾರ ಪುರಸಭೆ ಸದಸ್ಯ ಪ್ರತಾಪ ಜತ್ರಾಟೆ ಮಾತನಾಡಿ, ಅತೀ ದೊಡ್ಡ ರೈಲು ಪ್ರಯಾಣಿಕರ ಸಂಖ್ಯೆ ಹೊಂದಿರುವ ಕಾಗವಾಡ ಹಾಗೂ ಅಥಣಿ ಸುತ್ತಮುತ್ತಲಿನ ಸಾರ್ವಜನಿಕರಿಗೆ ಉಗಾರ ಖುರ್ದ ರೈಲು ನಿಲ್ದಾಣದಲ್ಲಿ ಹರಿಪ್ರಿಯಾ ಹಾಗೂ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು ಮಾತ್ರ ನಿಲುಗಡೆ ಆಗುತಿದ್ದು, ಬೆಳಗಿನ ಸಮಯದಲ್ಲಿ ಹಲವು ಕೆಲಸ ಕಾರ್ಯಗಳಿಗೆ ಹುಬ್ಬಳ್ಳಿ ಬೆಳಗಾವಿ, ಮಿರಜ, ಬೆಂಗಳೂರು ಕಡೆ ಪ್ರಯಾಣ ಬೆಳೆಸುವ ಉಗಾರ ಬುದ್ರುಕ, ಕುಸನಾಳ, ಮೊಳವಾಡ, ಮೋಳೆ, ಐನಾಪೂರ, ಶೇಡಬಾಳ ಸೇರಿದಂತೆ ಹಲವು ಊರುಗಳ ಜನರಿಗೆ ರೈಲು ಸೇವೆ ಬಹಳ ಮಹತ್ವದ್ದಾಗಿದೆ. ಉಗಾರ ರೈಲು ನಿಲ್ದಾಣದಲ್ಲಿ ಮುಂಜಾನೆ ದಾದರ ಹುಬ್ಬಳ್ಳಿ (ಎಲ್‌ಟಿಟಿ) ಎಕ್ಸಪ್ರೆಸ್ ಮತ್ತು ಸಂಜೆ ಹುಬ್ಬಳ್ಳಿ ದಾದರ ಎಕ್ಸಪ್ರೆಸ್ ರೈಲುಗಳು ನಿಂತರೆ ಇಲ್ಲಿಯ ಜನರಿಗೆ ಹೋಗಿ ಬರಲು ಅನುಕೂಲವಾಗುತ್ತದೆ. ಆದ್ದರಿಂದ ಈ ರೈಲುಗಳನ್ನು ಉಗಾರ ಖುರ್ದ ರೈಲು ನಿಲ್ದಾಣದಲ್ಲಿ ನಿಲ್ಲಿಸಲು ಕ್ರಮ ವಹಿಸುವಂತೆ ಸಂಸದರಲ್ಲಿ ಮನಿವಿ ಮಾಡಲಾಗಿದೆ ಎಂದರು.
ಶಾಸಕ ರಾಜು ಕಾಗೆ, ವಿಜಯ ಅಸೂದೆ, ಅಮರ ಜಗತಾಪ, ಭರಮು ಮಾದರ, ಸೈಯದ್ ಪಾಗೆ, ಶಾಂತಿನಾಂಥ ಕಳೆ, ಬಸವರಾಜ ಪಾಟೀಲ, ವಿಶ್ವನಾಥ ಷಿರ್ಶಟ, ಸಚೀನ ಜಗತಾಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 