ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಶಾಸಕ ಲಮಾಣಿಗೆ ಮನವಿ
Appeal to MLA Lamani demanding provision of basic facilities
ಲೋಕದರ್ಶನ ವರದಿ
ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಶಾಸಕ ಲಮಾಣಿಗೆ ಮನವಿ
ಹಾವೇರಿ 07 : ಬೀದಿ ದೀಪ, ನೀರಿನ ಚರಂಡಿ, ಸಾಲ ಸೌಲಭ್ಯ ಸೇರಿದಂತೆ ವಿವಿಧ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಶಾಸಕ ರುದ್ರ್ಪ ಲಮಾಣಿ ಅವರಿಗೆ ಶಿವಲಿಂಗ ನಗರದ ಕುಂಬಾರಗುಂಡಿ ಕೊಳಗೇರಿ ನಿವಾಸಿಗಳು ಮನವಿ ಸಲ್ಲಿಸಿದರು.
ಕಳೆದ ಏಳೆಂಟು ದಶಕಗಳಿಂದ ಕುಂಬಾರಿಕೆ ಮಾಡುತ್ತ ಬಂದಿದ್ದೇವೆ. ಕುಲ ಕಸುಬಿನ ಜೊತೆಗೆ ವೃದ್ಧರನ್ನು ಮತ್ತು ಮಕ್ಕಳನ್ನು ಸಾಕುವುದು ದುಸ್ತರವಾಗಿದೆ. ಸಮರ್ಕ ವೈದ್ಯಕೀಯ ಚಿಕಿತ್ಸೆ, ಮಕ್ಕಳಿಗೆ ನೀರೀಕ್ಷಿತ ಶಿಕ್ಷಣ ಸೌಲಭ್ಯ ಸಿಗುತ್ತಿಲ್ಲ. ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮೂಲ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ರುದ್ರ್ಪ ಲಮಾಣಿ, ತಮ್ಮ ಬೇಡಿಕೆಯನ್ನು ಗಮನಿಸಿರುವೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವೆ. ಚುನಾವಣಾ ಸಂದರ್ಭದಲ್ಲಿ ತಮಗೆ ನೀಡಿರುವ ಭರವಸೆಯನ್ನು ಉಳಿಸಿಕೊಳ್ಳುವೆ. ತಮ್ಮ ಭಾವನೆಗಳನ್ನು ಗೌರವಿಸುವುದು ನನ್ನ ಕರ್ತವ್ಯ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ, ಕುಂಬಾರಗುಂಡಿ ನಿವಾಸಿಗಳಾದ ಆರ್.ಎಚ್. ಕುಂಬಾರ, ಸುರೇಶ ಕುಂಬಾರ, ಗುರುರಾಜ ಕುಂಬಾರ, ಹನುಮಂತಪ್ಪ ಕುಂಬಾರ, ಸುಭಾಷ್ ಕುಂಬಾರ, ತಿಮ್ಮಣ್ಣ ಕುಂಬಾರ, ಫಕ್ಕೀರ್ಪ ಕುಂಬಾರ, ಸುಮಾ ಕುಂಬಾರ, ನಾಗವ್ವ ಕುಂಬಾರ, ಲಕ್ಷ್ಮಕ್ಕ ಕುಂಬಾರ, ರೇಣುಕಾ ಕುಂಬಾರ, ಮಂಜುಳಾ ಕುಂಬಾರ, ವೀಣಾ ಕುಂಬಾರ ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 