ಮುಖ್ಯ ರಸ್ತೆಯಲ್ಲಿರುವ ಕಗ್ಗು ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಜಾತ್ರಾ ಸಮಿತಿ ಅವರಿಂದ ಮನವಿ
Appeal from the Jatra Committee demanding closure of potholes on the main road
ಬ್ಯಾಡಗಿ 13 : ಜನವರಿ 28 ಬುಧವಾರದಂದು ಪಟ್ಟಣದ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಸ್ಥಾನದ 71ನೇ ವರ್ಷದ ಜಾತ್ರಾ ಮಹೋತ್ಸವ ನಡೆಯಲಿದ್ದು ಅಂದು ಸಾಯಂಕಾಲ ಅಲಂಕೃತವಾದ ರಥೋತ್ಸವ ದೇವಸ್ಥಾನದಿಂದ ಪಟ್ಟಣದ ಮುಖ್ಯರಸ್ತೆ ಹಾಗೂ ಹಲವು ವಾರ್ಡ್ ಗಳಲ್ಲಿ ಸಂಚರಿಸಿ ದೇವಸ್ಥಾನವನ್ನು ತಲುಪಲಿದೆ ಕಾರಣ ಮುಖ್ಯರಸ್ತೆಯ ಮೂಲಕ ಹಾದು ಹೋಗಲು ಜನ ಮತ್ತು ವಾಹನಗಳ ಸಂಚಾರಕ್ಕೆ ತಗ್ಗುಂಡುಗಳಿಂದ ತುಂಬಿದ್ದು ಬಹಳ ತೊಂದರೆಗಳು ಆಗುತ್ತಿವೆ ಇಂತಹ ದೊಡ್ಡ ದೊಡ್ಡ ತೆಗ್ಗು ಗುಂಡಿಗಳಲ್ಲಿ ದೇವಸ್ಥಾನದ ಕಟ್ಟಿಗೆಯ ರಥವು ಸಾಗುವುದು ಬಹಳ ಅಪಾಯಕಾರಿಯಾಗಿದೆ ಇದರಿಂದ ದೊಡ್ಡ ಗುಂಡಿಗೆಗೆ ರಥವು ಮುರಿದು ಬಿದ್ದರೆ ಜನರ ಹಾಗೂ ಭಕ್ತ ಜೀವಕ್ಕೆ ಅಪಾಯಗಳು ಆಗಬಹುದು ಕಾರಣ ರಥ ಸಾಗಲು ರಸ್ತೆ ರಿಪೇರಿ ಮಾಡುವಂತೆ ಒತ್ತಾಯಿಸಿ ಜಾತ್ರಾ ಸಮಿತಿಯ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರದ ಎಂ ಎಸ್ ಪಾಟೀಲ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸಮಿತಿಯ ಅಧ್ಯಕ್ಷ ಮಲ್ಲಣ್ಣ ಹುಚ್ಚಗೊಂಡ ಮಾತನಾಡಿ ಈ ಬಗ್ಗೆ ನಾವು ಈಗಾಗಲೇ ಜಿಲ್ಲಾಧಿಕಾರಿಗಳ ಹಾಗೂ ಉಪ ವಿಭಾಗದ ಅಧಿಕಾರಿಗಳ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಾವು ಸಾಕಷ್ಟು ಮುಂಚಿತವಾಗಿ ಇಲಾಖೆಗೆ ಪತ್ರ ಬರೆದಿದ್ದು ಈ ಹಿನ್ನೆಲೆಯಲ್ಲಿ ನಾವು ಸಾಕಷ್ಟು ಮುಂಚಿತವಾಗಿ ಎಲ್ಲರೂ ಖುದ್ದಾಗಿ ಮನವಿ ಪತ್ರವನ್ನು ಲೋಕೋಪಯೋಗಿ ಇಲಾಖೆಯವರಿಗೆ ಎಂದು ಮನವಿ ಕೊಟ್ಟಿದ್ದೇವೆ ಕೂಡಲೇ ಅಧಿಕಾರಿಗಳು ಜಾತ್ರೆಯು ಬರುವ ಒಳಗೆ ರಥೋತ್ಸವ ಹೋಗುವ ಜಾಗದಲ್ಲೆಲ್ಲ ಗುಂಡಿಗಳನ್ನು ಮುಚ್ಚಿಸಿ ಸುಗಮ ದಾರಿಯನ್ನು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಸಮಿತಿಯ ಗೌರವಾಧ್ಯಕ್ಷ ಗೌರವ ಕಾರ್ಯದರ್ಶಿ ಮಾಲತೇಶ ಅರಳಿಮಟ್ಟಿ ಮಾತನಾಡಿ ಮುಖ್ಯರಸ್ತೆ ಒಂದೇ ಅಲ್ಲದೆ ಪಟ್ಟಣದ ಬಸವೇಶ್ವರ ದೇವಸ್ಥಾನದಿಂದ ವೀರಭದ್ರೇಶ್ವರ ದೇವಸ್ಥಾನದವರಿಗೆ ರಸ್ತೆಯು ಪೂರ ಹಾಳಾಗಿದ್ದು ಇಲ್ಲಿಯೇ ತಗ್ಗುಂಡಿಗಳಿಂದ ತುಂಬಿವೆ. ಈ ರಸ್ತೆಯನ್ನು ಸಹ ರಿಪೇರಿ ಮಾಡಿಸುವಂತೆ ಕಂದಾಯ ಹಾಗೂ ಅಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿ ಕೂಡಲೇ ಸುಗಮವಾಗಿ ರಥೋತ್ಸವ ಹೊರಡಲು ರಸ್ತೆಯನ್ನು ರಿಪೇರಿ ಮಾಡಿ ಕೊಡಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಗಂಗಣ್ಣ ತಿಳವಳ್ಳಿ ,ಖಜಾಂಚಿ ಶಂಬಣ್ಣ ಅಂಗಡಿ, ಚಂದ್ರಣ್ಣ ಆಲದಗೇರಿ, ಶಿವಣ್ಣ ಶೆಟ್ಟರ್ ಹಾಗೂ ಮಾಲಿಂಗಪ್ಪ ಶಿರೂರ ಹಾಗೂ ಜಾತ್ರಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.ಸಮಿತಿಯ ಗೌರವ ಕಾರ್ಯದರ್ಶಿ ಮಾಲತೇಶ್ ಅರಳ್ಳಿಮಟ್ಟಿ ಮಾತನಾಡಿ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 