ನೌಕರರ ಸಂಘದಿಂದ ಶಿಕ್ಷಣ ಇಲಾಖೆಗೆ ಮನವಿ
Appeal from employees' union to the Education Department
ಲೋಕದರ್ಶನ ವರದಿ
ಬೆಳಗಾವಿ 12: ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಾಲೆಗಳನ್ನು ಉಳಿಸಿ ಬೆಳೆಸಲು ಸರಕಾರ ಮತ್ತು ಶಿಕ್ಷಣ ಇಲಾಖೆ ತಕ್ಷಣ ಸ್ಪಷ್ಟ ಹಾಗೂ ಸಹಾಯಕ ನೀತಿ ರೂಪಿಸಬೇಕೆಂದು ಒತ್ತಾಯಿಸಿ ಶಾಲಾ ಕಾಲೇಜುಗಳ ನೌಕರರ ಸಂಘದಿಂದ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಇಂದು ಮನವಿ ಸಲ್ಲಿಸಲಾಯಿತು.
ಶಾಲಾ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಬಸವರಾಜ ಹಳಿಂಗಳಿ ಅವರು ಮಾತನಾಡಿ, ಮಾನ್ಯತೆ ಮತ್ತು ನವೀಕರಣದ ಹೆಸರಿನಲ್ಲಿ ಅನುದಾನಿತ ಖಾಸಗಿ ಪ್ರೌಢಶಾಲೆಗಳು ತೀವ್ರ ಒತ್ತಡ ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ. ನಿರಂತರವಾಗಿ ಕೇಳಲಾಗುವ ಎಸ್.ಎಸ್.ಎಲ್.ಸಿ. ಸಂಬಂಧಿತ ಮಾಹಿತಿಗಳು, ಸಭೆಗಳು ಹಾಗೂ ದಾಖಲಾತಿ ಸಂಗ್ರಹಣೆಯಿಂದ ಪಾಠ ಬೋಧನೆಗೆ ಸಮಯ ಸಿಗುತ್ತಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆಂದು ಎಂದು ಹೇಳಿದರು.
ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸದೇ ಒಂದೇ ಮಾನದಂಡ ಹೇರಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. 2017ರ ಹಿಂದಿನ ಶಾಲೆಗಳಿಗೆ ಭೂಪರಿವರ್ತನೆಗೆ ಅವಕಾಶವಿಲ್ಲದಿರುವುದು, ಅಗ್ನಿ ಹಾಗೂ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ ಪಡೆಯುವ ದುಬಾರಿ ಪ್ರಕ್ರಿಯೆಗಳು ಶಾಲೆಗಳ ಅಸ್ತಿತ್ವಕ್ಕೆ ಸವಾಲಾಗಿವೆ.
ಈ ಪರಿಸ್ಥಿತಿ ಮುಂದುವರಿದರೆ ಅನುದಾನಿತ ಪ್ರೌಢಶಾಲೆಗಳು ಮುಚ್ಚುವ ಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂಬ ಆತಂಕ ಶಿಕ್ಷಣ ವಲಯದಲ್ಲಿ ಮೂಡಿದೆ.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮು ಗೋಗು ವಾಡ. ಜಿಲ್ಲಾಧ್ಯಕ್ಷ ಬಸವರಾಜ ಹಳಿಂಗಳಿ, ಕೆ ಬಿ ರಂಗೈ , ಕೆವೈಕೋಟೆಕರ್ , ಬಸವರಾಜ್ ಕೆಂಚನಟ್ಟಿ , ವಿ ಎಸ್ ಸಿಂದಗಿ, ಬಿಬಿ ಪಾಟೀಲ್ , ಬಾಳೇಶ ಅಡಿಬಟ್ಟಿ, ಬಿ ಬಿ ಪಾಟೀಲ್ , ಎ.ಎಂ.ಅಂಗಡಿ ಹಾಗೂ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 