ಅಲೇಮಾರಿ ಸಮಾಜ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೆ ಮನವಿ: ಬಾಗಡಿ
Appeal for release of funds for the development of the Alemari society: Bagadi
ಸಂಬರಗಿ 21: ಗಡಿ ಭಾಗದ ಗ್ರಾಮಗಳಲ್ಲಿ ಅಲೇಮಾರಿ ಸಮಾಜ ಅಭಿವೃದ್ಧಿಯಿಂದ ಹಿಂದುಳಿದಿದ್ದು, ಸರಕಾರ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಶಾಸಕ ಲಕ್ಷ್ಮಣ ಸವದಿ, ಶಾಸಕ ರಾಜು ಕಾಗೆ ಇವರ ನೇತೃತ್ವದಲ್ಲಿ ಸಂಬಂಧ ಪಟ್ಟ ಸಚಿವರಿಗೆ ಭೇಟಿಯಾಗಿ ಮನವಿ ಮಾಡಿಕೊಳ್ಳುತ್ತೇವೆಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯರ ವಿನಾಯಕಅಪ್ಪಾ ಬಾಗಡಿ ಹೇಳಿದರು.
ಮದಭಾವಿ ಗ್ರಾಮದಲ್ಲಿ ಅಲೇಮಾರಿ ಸಮಾಜದ ದುರ್ಗಾದೇವಿ ಕಂಪೌಂಡ ಹಾಗೂ ಗೇಟ್ ಉದ್ಘಾಟಿಸಿ ಮಾತನಾಡಿ ಅವರು ಈ ಕಂಪೌಂಡ್ ಹಾಗೂ ಗೇಟ್‌ಗೆ 10 ಲಕ್ಷ ರೂಪಾಯಿ ಅನುದಾನ ಶಾಸಕ ರಾಜು ಕಾಗೆ ನೀಡಿದ್ದಾರೆ. ದುರ್ಗಾದೇವಿ ಮಂದಿರ ಸಮುದಾಯ ಭವನ ಅವಶ್ಯಕತೆ ಇದ್ದು, ಕನಿಷ್ಠವಾಗಿ 1 ಕೋಟಿ ರೂಪಾಯಿ ವೆಚ್ಚ ಇದೆ. ಶಾಸಕರ ನೇತೃತ್ವದಲ್ಲಿ ಸಂಬಂಧ ಪಟ್ಟ ಸಚಿವರಿಗೆ ಭೇಟಿಯಾಗಿ ಅನುದಾನ ನೀಡಬೇಕೆಂದು ಒತ್ತಾಯಿಸಿದ್ದೇವೆ. ಮದಭಾವಿ ಗ್ರಾಮದಲ್ಲಿರುವ ಅಲೇಮಾರಿ ಸಮಾಜದ ಓಣಿಯಲ್ಲಿ ಅಭಿವೃದ್ಧಿಗಾಗಿ ಅನುದಾನ ಅವಶ್ಯಕತೆ ಇದೆ. ಒಳ ಚರಂಡಿ, ರಸ್ತೆಗಳು, ಗಟಾರ ಸೇರಿದಂತಹ ಹಲವಾರು ಕಾಮಗಾರಿ ಅವಶ್ಯಕತೆ ಇದ್ದು, ಶಾಸಕರು ಈ ಸಮಸ್ಯೆಯ ಕಡೆಗೆ ಗಮನ ಹರಿಸಿ ಅನುದಾನ ನೀಡಬೇಕೆಂದು ಅವರು ವಿನಂತಿಸಿದರು.
ಈ ವೇಳೆ ಸುಖದೇವ ಬಾಗಡಿ ಮಾತನಾಡಿ ನಮ್ಮ ಸಮಾಜದಲ್ಲಿ ದಿನ ದಿನಕ್ಕೆ ಸಮಸ್ಯೆ ಹೆಚ್ಚಾಗುತ್ತಿವೆ. ಅವರಿಗೆ ಖಾಯಂ ವಾಸ ಮಾಡಲು ಮನೆಗಳ ಅವಶ್ಯಕತೆ ಇದೆ ಹಾಗೂ ಉದ್ಯೋಗ ಅವಕಾಶ ನೀಡಲು ಸರಕಾರ ರೀಯಾಯಿತಿ ದರದಲ್ಲಿ ಅನುದಾನ ನೀಡಬೇಕೆಂದು ಅವರು ವಿನಂತಿಸಿದರು.
ಈ ವೇಳೆ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಅಪ್ಪಾಸಾಬ ಚೌಗಲಾ, ತುಕಾರಾಮ ಬಾಗಡಿ, ಸಂಜು ಅದಾಟಿ, ರಾಜು ಬಾಗಡಿ, ಬಾಬಾಸಾಹೇಬ ಬಾಗಡಿ, ಲಕ್ಷ್ಮಣ ಪೂಜಾರಿ, ಮಾರುತಿ ಗಾಡಿವಡ್ಡರ, ಮಾರುತಿ ಬಾಗಡಿ, ರವಿ ಪಾಚಿಂಗೆ, ಸಿದ್ದು ಬಾಗಡಿ, ಜೀತು ಬಾಗಡಿ, ಉಮಾಜಿ ಬಾಗಡಿ, ಸಾಗರ ಬಾಗಡಿ, ಕಿರಣ ಬಾಗಡಿ, ಇಂದು ಬಾಗಡಿ, ಖಂಡು ಬಾಗಡಿ, ಮೀರಾಸಾಬ ಬಾಗಡಿ, ಲಕ್ಷ್ಮಣ ಅವಳೆ, ಪವಣ ಬಾಗಡಿ ಸೇರಿದಂತಹ ಗಣ್ಯ ಮಾನ್ಯರು ಉಪಸ್ಥತ ಇದ್ದರು.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 