ಕೊಪ್ಪಳ ತಾಲೂಕಿನ ಬಸಾಪುರ ಕೆರೆಯನ್ನು ಜನ ಜಾನುವಾರುಗಳಿಗೆ ಮುಕ್ತವಾಗಿಡಲು ಒತ್ತಾಯಿಸಿ ಮನವಿ

ಕೊಪ್ಪಳ ತಾಲೂಕಿನ ಬಸಾಪುರ ಕೆರೆಯನ್ನು ಜನ ಜಾನುವಾರುಗಳಿಗೆ ಮುಕ್ತವಾಗಿಡಲು ಒತ್ತಾಯಿಸಿ ಮನವಿ Appeal demanding that Basapura Lake in Koppal taluk be kept open for people and livestock

ಕೊಪ್ಪಳ  16: ತಾಲೂಕಿನ ಬಸಾಪುರ ಕೆರೆಯನ್ನು ಜನ ಜಾನುವಾರುಗಳಿಗೆ ಮುಕ್ತವಾಗಿಡಲು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ ಅವರ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಕೊಪ್ಪಳ ತಾಲೂಕಿನ ಗಿಣಿಗೇರಿ ಹಾಗೂ ಹಿರೇ ಬಗನಾಳ ಗ್ರಾಮದ ಸುತ್ತಲೂ ತಲೆ ಎತ್ತಿ ನಿಂತಿರುವ ಬೃಹತ್ ಕಾರ್ಖಾನೆಗಳು ಹೊರ ಸೂಸುವ ರಾಸಾಯನಿಕ ಮಿಶ್ರಿತ ಹೊಗೆ ಹಾಗೂ ಧೂಳಿನಿಂದಾಗಿ ಜಿಲ್ಲೆಯ ಜನ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಕಾರ್ಖಾನೆಗಳಿಂದ ಉಂಟಾದ ಪರಿಸರ ಮಾಲಿನ್ಯದಿಂದಾಗಿ ಸಾಕಷ್ಟು ಜನ ಜಾನುವಾರುಗಳು ಮೃತಪಟ್ಟ ಉದಾಹರಣೆಗಳಿವೆ. ಇದರ ವಿರುದ್ಧ ಸುಮಾರು ವರ್ಷಗಳಿಂದ ವಿವಿಧ ರೀತಿಯ ಹೋರಾಟಗಳು ನಡೆಯುತ್ತಿವೆ. ಮಾಲಿನ್ಯದ ಜೊತೆಗೆ ಎಂ.ಎಸ್‌.ಪಿ.ಎಲ್‌.ಕಬಳಿಕೆ ಮಾಡಿರುವ ಬಸಾಪುರ ಕೆರೆಯನ್ನು ಜನ ಜಾನುವಾರುಗಳಿಗಾಗಿ ಮುಕ್ತಗೊಳಿಸಬೇಕೆಂಬುದು ಮುಖ್ಯ ಬೇಡಿಕೆಯಾಗಿದೆ.     

ಮಾನ್ಯ ಜಿಲ್ಲಾಧಿಕಾರಿಗಳು ಕೆರೆಯನ್ನು ಮುಕ್ತಗೊಳಿಸಬೇಕು. ಈ ಸಮಸ್ಯೆಯನ್ನು ತಾವು ಗಂಭೀರವಾಗಿ ಪರಿಗಣಿಸಿಬೇಕಾಗಿದೆ. ಈ ವರ್ಷವು ಬಿಸಿಲಿನ ತಾಪಮಾನವು ವಿಪರಿತ ಇರುವುದರಿಂದ ಕುರಿ.ದನ.ಕರುಗಳಿಗೆ ಕುಡಿಯಲು ನೀರು ಇಲ್ಲದಂತಾಗಿ ತೊಂದರೆಯನ್ನು ಅನುಭವಿಸುತ್ತಿವೆ. ಕಾರಣ ಬಸಾಪುರ ಕೆರೆಯನ್ನು ಮುಕ್ತಗೊಳಿಸುವಲಿ ಕಾನೂನಿನ ತೊಡಕುಗಳಿದ್ದಲ್ಲಿ ತಾವು ಮಾನವೀಯ ನೆಲಗಟ್ಟಿನ ಮೇಲೆ ಯೋಚಿಸಿ ಬಸಾಪುರ ಕೆರೆ ಮುಕ್ತಗೊಳಿಸುವ ಮೂಲಕ ಜನ ಜಾನುವಾರಗಳಿಗೆ ನೀರು ಕುಡಿಯಲು ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸುತ್ತೇವೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್‌. ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್‌.ಎ.ಗಫಾರ್‌. ಗಿಣಿಗೇರಾ ನಾಗರಿಕ ಹೋರಾಟ ಸಮಿತಿ ಸಂಚಾಲಕ ಮಂಗಳೇಶ ರಾಥೋಡ್‌. ಕುರಿಗಾರರ ಸಂಘದ ಅಧ್ಯಕ್ಷ ಯಮನೂರ​‍್ಪ ಹಾಲಳ್ಳಿ. ಮುಖಂಡರಾದ ಬೀರ​‍್ಪ ಶಹಾಪುರ.ಕಂಪ್ಲೆಪ್ಪ ಶಹಾಪುರ. ಪಾಸ್ಟರ್ಸ್‌ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್‌. ಅಹಿಂದ ಚಳುವಳಿಯ ಸಹ ಸಂಚಾಲಕ ಮುತ್ತುರಾಜ್ ಚನ್ನದಾಸರ. ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಮೌಲಾ ಹುಸೇನ್ ಹಣಗಿ.ಶಿವಪ್ಪ ಹಡಪದ್ ಮುಂತಾದವರು ಕೋರಿದ್ದಾರೆ.