ನಕಲಿ ದಾಖಲೆ ನೀಡಿ ಮಾಶಾಸನ ಪಡೆಯುತ್ತಿರುವದನ್ನು ಖಂಡಿಸಿ ಮನವಿ
Appeal condemning the practice of obtaining a monthly salary by providing fake documents
ಲೋಕದರ್ಶನ ವರದಿ
ನಕಲಿ ದಾಖಲೆ ನೀಡಿ ಮಾಶಾಸನ ಪಡೆಯುತ್ತಿರುವದನ್ನು ಖಂಡಿಸಿ ಮನವಿ
ಹಾವೇರಿ 03: ನಕಲಿ ದಾಖಲೆಗಳನ್ನು ನೀಡಿ ಸಂದ್ಯಾ ಸುರಕ್ಷಾ ಮತ್ತು ವಿಶೇಷಚೇತನರ ಮಾಶಾಸನ ಪಡೆಯುತ್ತಿರುವದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ತಾಲೂಕು ದಂಡಾಧಿಕಾರಿಗಳ ಮೂಲಕ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷರಾದ ಯಲ್ಲಪ್ಪ ಮರಾಠೆ ಮಾತನಾಡಿ ಹಾವೇರಿ ಜಿಲ್ಲಾದ್ಯಂತ ನಕಲಿ ದಾಖಲೆಗಳನ್ನು ಸರ್ಕಾರಕ್ಕೆ ನೀಡಿ ಸಂದ್ಯಾ ಸುರಕ್ಷಾ ಮತ್ತು ವಿಶೇಷಚೇತನರ ಮಾಶಾಸನ ಪಡೆಯುತ್ತಿದ್ದು ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತದೆ. 2018-19 ನೇ ಸಾಲಿನಿಂದ 2024 ರವರೆಗೆ ಸರ್ಕಾರಕ್ಕೆ ನಕಲಿ ದಾಖಲೆಗಳನ್ನು ನೀಡಿ ಈ ಮಾಶಾಸನ ಪಡೆಯುತ್ತಿರುವವರಿಗೆ ಸರ್ಕಾರದಿಂದ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ಅದರಲ್ಲಿ ಜಿಲ್ಲಾ ವಿಭಾಗೀಯ ಅಧಿಕಾರಿಗಳು ಶ್ರವಣದೋಷ ತಜ್ಞರು, ಅಂಧತ್ವ ತಜ್ಞರು, ಮಾನಸಿಕ ತಜ್ಞರು ಹಾಗೂ ಕೀಲು ಎಲುಬು ಮತ್ತು ಮೂಳೆ ತಜ್ಞರು ಹಾಗೂ ವಯಸ್ಸಿನ ದೃಢೀಕರಣ ನೀಡುವ ತಜ್ಞರು ಒಳಪಟ್ಟಂತೆ ಸಮಿತಿ ರಚನೆ ಮಾಡಿ 2018-2024 ರವರೆಗೆ ಆಗಿರುವ ವಿಶೇಷಚೇತನರು ಮತ್ತು ಸಂಧ್ಯಾಸುರಕ್ಷದಡಿ ಮಾಶಾಸನ ಪಡೆಯುತ್ತಿರುವವರನ್ನು ಪರೀಶೀಲನೆ ಮಾಡಿ ನಿಜವಾದ ಫಲಾನುಭವಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಹಾಗೂ ವಿಶೇಷಚೇತನರು ಮತ್ತು ಸಂದ್ಯಾ ಸುರಕ್ಷದಡಿ ಅರ್ಜಿ ಸಲ್ಲಿಸಿದಾಗ ನೀಡಿರುವ ದಾಖಲೆಗಳನ್ನು ಕುಲಂಕೂಷವಾಗಿ ಪರೀಶೀಲನೆ ಮಾಡದೇ ಮಂಜೂರಾತಿ ಪ್ರಮಾಣ ಪತ್ರ ನೀಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಮತ್ತು ಅಕ್ರಮ ಎಸಗಿರುವ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗೀತಾಬಾಯಿ ಲಮಾಣಿ,ಜಿಲ್ಲಾ ಯುವ ಘಟಕದ ಅಧ್ಯಕ್ಷ ಖಲಂದರ ಎಲೆದಹಳ್ಳಿ ಮುಖಂಡರಾದ ಯುಸೂಫ ಸೈಕಲಗಾರ, ಈರ್ಪ ಅಂಗಡಿ, ರಾಜೇಸಾಬ ಮಾನೆಗಾರ, ಪ್ರಕಾಶ ಡೊಂಬರ,ರಾಮಚಂದ್ರ್ಪ ಹಿಂಡಸಗಟ್ಟಿ, ಶಂಕರ ಬಡಿಗೇರ, ಬಸವರಾಜ ಪಟ್ಟಣಶೆಟ್ಟಿ,ನಾಗಮ್ಮ ಕಾಳೇರ, ಮೆಹಮೂದ ಮುಲ್ಲಾ, ದಾದಾಪೀರ ಮಲ್ಲಾಡದ, ರೇಷ್ಮಾ ಬೀರಬ್ಬಿ ಅನ್ನಪೂರ್ಣ ಅರಿಕೇರಿ, ದೇವರಾಜ ತಳವಾರ, ರವಿ ಮಾಮನಿ, ಹೊನ್ನೂರಸಾಬ ಕೊಪ್ಪಳ, ಮಹಾವೀರ ಹಳ್ಳಿಯವರ, ದೇವೆಂದ್ರ ಹಾನಗಲ್ಲ, ಅಬ್ದುಲಖಾದರ ಕೊಲ್ಲಾಪೂರ ರಜಾಕ ಪುರದಗೇರಿ, ಅಜ್ಮತುಲ್ಲಾ ಎಲೆದಹಳ್ಳಿ ಇನ್ನಿತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 