ಜಮಖಂಡಿ 20: ಸಂವಿಧಾನ ಶಿಲ್ಪಿ ಡಾ, ಬಿ,ಆರ್, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿ, ಸಚಿವ ಸ್ಥಾನದಿಂದ ವಜಾಗೊಳಿಸಿ, ದೇಶದಿಂದ ಗಡಿಪಾರು ಮಾಡಬೇಕೆಂದು ವಿವಿಧ ದಲಿತಪರ ಸಂಘಟನೆಯವರು ಆಗ್ರಹಿಸಿ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆಯನ್ನು ನಡೆಸಿದರು.
ನಗರದ ಎ,ಜಿ,ದೇಸಾಯಿ ವೃತ್ತದಲ್ಲಿ ನಡೆದ ವಿವಿಧ ದಲಿತಪರ ಸಂಘಟನೆಯಗಳು ಮಾನವ ಸರಪಳಿ ಮೂಲಕ ರಸ್ತೆ ತಡೆಯನ್ನು ನಡೆಸಿ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ದ ಘೋಷಣೆಯನ್ನು ಕೂಗಿ ಪ್ರತಿಕೃತಿ ದಹನ ಮಾಡಿ, ತಹಶೀಲ್ದಾರ ಸದಾಶಿವ ಮಕ್ಕೋಜಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲಿಸಿದರು.
ನಂತರ ಪ್ರತಿಭಟನೆಯನ್ನು ಉದ್ದೇಶೀಸಿ ಮಾತನಾಡಿದ ಪ್ರತಿಭಟನಾಕಾರರು, ಸಂವಿಧಾನ ಶಿಲ್ಪಿ ಹಾಗೂ ಸಮಾಜಸುಧಾರಕ ಡಾ, ಬಿ,ಆರ್, ಅಂಬೇಡ್ಕರ್ ಅವರ ವಿರುದ್ಧ ರಾಜ್ಯ ಸಭೆಯಲ್ಲಿ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಅಂಬೇಡ್ಕರ್ ಹೆಸರನ್ನು ಉಚ್ಚರಿಸುವುದು ಈಗ ಫ್ಯಾಷನ್ ಆಗಿದೆ. ಅಂಬೇಡ್ಕರ್ ಹೆಸರನ್ನು ಉಚ್ಚರಿಸುವ ಬದಲು ದೇವರ ಹೆಸರನ್ನು ಉಚ್ಚರಿಸಿದರೆ ಏಳು ಜನ್ಮಗಳ ವರೆಗೂ ಸ್ವರ್ಗವನ್ನು ಪಡೆಯಬಹುದು ಎಂಬ ಅವಮಾನಕರ ಹೇಳಿಕೆ ಮಾಡಿದ್ದಾರೆ, ಡಾ, ಬಿ,ಆರ್, ಅಂಬೇಡ್ಕರ್ ಅವರು ಭಾರತೀಯ ಪ್ರಜಾಪ್ರಭುತ್ವ, ಸಮಾನತೆ ಮತ್ತು ನ್ಯಾಯದ ಸಿದ್ಧಾಂತಗಳಿಗೆ ಅಡಿಪಾಯ ಇಟ್ಟು, ಮಹಾನ್ ನಾಯಕರಾಗಿದ್ದಾರೆ. ಅವರ ಹೆಸರು ಮಾತ್ರವಲ್ಲ, ಅವರ ಆದರ್ಶಗಳು ಮತ್ತು ಅವರ ಕೃತಿಗಳು ಕೋಟ್ಯಂತರ ಭಾರತೀಯರಿಗೆ ಸ್ಪೂರ್ತಿಯಾಗಿದೆ. ಅಮಿತ್ ಶಾ ಅವರ ಈ ಹೇಳಿಕೆ ದೇಶದ ಸಂವಿಧಾನದ ಅಡಿಪಾಯವನ್ನು ದೂಷಿಸುತ್ತದೆ ಮತ್ತು ಸಮಾಜದ ಹೀನ ವರ್ಗಗಳ ಭಾವನೆಗೆ ತೀವ್ರ ಹೊಡೆತ ನೀಡುತ್ತದೆ.ಇಂತಹ ಪ್ರಜಾಪ್ರಭುತ್ವದ ವಿರುದ್ಧವಾದ, ಸಮಾನತೆಗೆ ವಿರುದ್ಧವಾದ ಮತ್ತು ಡಾ. ಅಂಬೇಡ್ಕರ್ ಅವರ ಗೌರವಕ್ಕೆ ಅವಮಾನವಾದ ಹೇಳಿಕೆ ಮಾಡಿದ ವ್ಯಕ್ತಿ ಗೃಹ ಸಚಿವರ ಸ್ಥಾನಕ್ಕೆ ತಕ್ಕವನಲ. ಕೂಡಲೇ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ರಮೇಶ ಬಳೋಲಗಿಡದ, ಶಶಿಕಾಂತ ದೊಡಮನಿ, ಶಶಿಕಾಂತ ತೇರದಾಳ ಮಾತನಾಡಿದರು, ಸುರೇಶ ನಡುವಿನಮನಿ, ಸುರಜ ಕುಡ್ರಾಣಿ, ಪರುಶರಾಮ ಕಾಂಬಳೆ, ಚಿದಾನಂದ ಜನವಾಡ, ಅರುಣ ಲಗಳಿ, ಸಂಗಮೇಶ ಕಾಂಬಳೆ, ನಾಗರಾಜ ಕಾಂಬಳೆ, ಸುಭಾಸ ರಬಕವಿ, ರವಿ ಶಿಂಗೆ, ಪ್ರೇಮ ಬಳೋಲಗಿಡದ, ಕುಮಾರ ಆಲಗೂರ, ಭೀಮು ಮೀಶಿ, ಗಜಾನನ ಆಲಬಾಳ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾಗಿದರು.