ವಾಣಿಜ್ಯ ನ್ಯಾಯಾಲಯ ಸ್ಥಾಪನೆ ವಿರೋಧಿಸಿ ಮನವಿ
ಲೋಕದರ್ಶನ ವರದಿ
ಶಿಗ್ಗಾವಿ : ಬಳ್ಳಾರಿ ಜಿಲ್ಲೆಯ ವಿಭಾಗೀಯ ವ್ಯಾಪ್ತಿಯಲ್ಲಿ ವಾಣಿಜ್ಯ ನ್ಯಾಯಾಲಯವನ್ನು ಸ್ಥಾಪಿಸಿರುವುದನ್ನು ವಿರೋಧಿಸಿ ಶಿಗ್ಗಾವಿ ತಾಲೂಕಿನ ನ್ಯಾಯವಾದಿಗಳ ಸಂಘ ಒಂದು ದಿನ ಕಾರ್ಯಕಲಾಪಗಳನ್ನು ಒಂದು ದಿನದ ಮಟ್ಟಿಗೆ ಬಂದ್ ಮಾಡುವ ಮೂಲಕ ವಿರೋಧಿಸಿ ತಾಲೂಕಾ ತಹಶೀಲ್ದಾರರಿಗೆ ಮಂಗಳವಾರ ಮನವಿ ಅಪರ್ಿಸಿದರು.
ಈ ಕುರಿತು ನ್ಯಾಯವಾದಿಗಳ ಸಂಘದ ತುತರ್ು ಸಭೆಯನ್ನು ಕರೆದು ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್ ಬಿ ಲಕ್ಕಣ್ಣನವರ ಅವರ ಅಧ್ಯಕ್ಷತೆಯಲ್ಲಿ ಈ ನಿಧರ್ಾರ ಕೈಗೊಳ್ಳಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದ್ದು ಸಂಘದ ವಿಭಾಗೀಯ ವ್ಯಾಪ್ರತಿಯಲ್ಲಿ ವಾಣಿಜ್ಯ ನ್ಯಾಯಾಲಯವನ್ನು ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರದಲ್ಲಿ ಸ್ಥಾಪನೆ ಮಾಡಿದ್ದು ಆ ನ್ಯಾಯಾಲಯದ ವ್ಯಾಪ್ತಿಗೆ ಹಾವೇರಿ ಜಿಲ್ಲೆಯನ್ನು ಸೇರಿಸಲಾಗಿದೆ ಈ ರೀತಿಯ ನಿಧರ್ಾರ ಮಾಡಿರುವುದರಿಂದ ಹಾವೇರಿ ಜಿಲ್ಲೆಯ ಮತ್ತು ಶಿಗ್ಗಾವಿ ತಾಲೂಕಿನ ಕಕ್ಷಿದಾರರಿಗೆ ತುಂಬಾ ತೊಂದರೆಯಾಗುತ್ತದೆ. ಒಂದು ಪ್ರಕರಣಕ್ಕೆ ಒಬ್ಬ ಕಕ್ಷಿದಾರನು ಬಳ್ಳಾರಿಗೆ ಹೋಗಬೇಕಾದರೆ ನ್ಯಾಯಾಲಯದಲ್ಲಿ ತನ್ನ ನಿಗಧಿಪಡಿಸಿದ ದಿನಾಂಕಕ್ಕಿಂತ ಮೊದಲೇ ಬಳ್ಳಾರಿಗೆ ಹೋಗಬೇಕು ಹಾಗೂ ತನ್ನ ಪರವಾದ ಮಾಡಲು ಒಬ್ಬ ವಕೀಲರನ್ನು ನೇಮಕ ಮಾಡಿಕೊಳ್ಳಬೇಕು ಹೀಗೆ ಮಾಡುವುದರಿಂದ ಪಕ್ಷಗಾರನಿಗೆ ತುಂಬಾ ಹಣಕಾಸಿನ ಹೊರೆಯಾಗುತ್ತದೆ ಮತ್ತು ಸಮಯ 2-3 ದಿನಗಳು ಬೇಕಾಗುತ್ತದೆ ಜೊತೆಗೆ ವಕೀಲರಿಗೂ ಕೂಡಾ ತುಂಬಾ ಅನಾನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ಕೂಡಲೇ ವಾಣಿಜ್ಯ ನ್ಯಾಯಾಲಯವನ್ನು ಬಳ್ಳಾರಿ ನಗರದಲ್ಲಿ ಸ್ಥಾಪಿಸಿರುವುದನ್ನು ಹಿಂದಕ್ಕೆ ಪಡೆಯಬೇಕು ಎಂದು ಅಗ್ರಹಿಸಿ ಮನವಿಯಲ್ಲಿ ತಿಳಿಸಲಾಗಿದೆ.
ನ್ಯಾಯವಾದಿಗಳಾದ ಎಸ್ ಕೆ ಅಕ್ಕಿ, ಎಫ್ ಎಸ್ ಕೋಣನವರ, ಬಿ ಜಿ ಕೂಲಿ, ಎಮ್ ಆರ್ ಕಮ್ಮರ, ಎಫ್ ಎಮ್ ಹಾಧಿಮನಿ, ವಿ ಕೆ ಕೊಣಪ್ಪನವರ, ಶ್ರೀಕಾಂತ ಪೂಜಾರ, ಎಸ್ ಜಿ ಟೋಪಣ್ಣನವರ, ಎಸ್ ಎಮ್ ಗಾಣಗೇರ, ಬಿ ಎ ಹಿರೇಮಠ, ಆರ್ ಎಮ್ ಹಾರೋಗೇರಿ, ಕೆ ಎನ್ ಭಾರತಿ, ಎನ್ ವಿ ಮುದಣ್ಣವರ ಸೇರಿದಂತೆ ನ್ಯಾಯವಾದಿಗಳ ಸಂಘದ ಸದಸ್ಯರು ಹಾಜರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 