ಕಾರ್ಖಾನೆ ವಿರೋಧಿ ಧರಣಿ 67ನೇ ದಿನ: ಪತ್ರ ಚಳವಳಿ ಆಂದೋಲನ ಶುರು
Anti-factory sit-in enters 67th day: Letter movement begins
ಕೊಪ್ಪಳ 05 : ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ 67ನೇ ದಿನದ ಧರಣಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಾಮೂಹಿಕವಾಗಿ ಪತ್ರ ಬರೆಯಲಾಯಿತು.ಕೊಪ್ಪಳ-ಭಾಗ್ಯನರ 1.5 ಲಕ್ಷ ಜನರ ಆರೋಗ್ಯ ರಕ್ಷಣೆಯ ಉದ್ದೇಶದಿಂದ, 54 ಸಾವಿರ ಕೋಟಿ ರೂ. ಹೂಡಿಕೆ ಮಾಡಿ ಬಲ್ಡೋಟ (ಬಿಎಸ್ಪಿಎಲ್) ವಿಸ್ತರಣೆ ಮಾಡುವುದನ್ನು ತಡೆಯಬೇಕೆಂದು, ಈಗಿರುವ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕದಿಂದ ನಗರದ ಅರ್ಧ ಭಾಗ ಮಾಲಿನ್ಯವಾಗಿದ್ದರ ಆಧಾರದಲ್ಲಿ ಆ ಘಟಕ ಕಾರ್ಯಾರಣೆ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಆಂದೋಲನ ನಡೆಸಲಾಯಿತು.
ಈ ಪತ್ರ ಚಳವಳಿಗೆ ಚಾಲನೆ ಕೊಟ್ಟ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ನಮ್ಮ ಭವಿಷ್ಯಕ್ಕೆ ಎದುರಾದ ಆತಂಕದ ಧ್ವನಿಯನ್ನು ರಾಜ್ಯದ ದೊರೆ ಮುಖ್ಯಮಂತ್ರಿ ಮತ್ತು ದೇಶ ಮುನ್ನಡೆಸುವ ಪ್ರಧಾನ ಮಂತ್ರಿಗೆ ಪತ್ರದ ಮೂಲಕ ಬರೆದು ತಲುಪಿಸೋಣ. ಅವರು ನಮ್ಮ 2 ಲಕ್ಷ ಜನರ ಆರೋಗ್ಯ, ಜೀವ ಕಾಪಾಡುತ್ತಾರೋ ಇಲ್ಲವೋ ಕಾಯ್ದು ನೋಡೋಣ. 20 ಕಾರ್ಖಾನೆ ಬಾಧಿತ ಹಳ್ಳಿಗಳ ಮಾಲಿನ್ಯ ಪರಿಸ್ಥಿತಿ ಎಲ್ಲೆ ಮೀರಿ ಹೋಗಿದೆ. ಇವರು ಗ್ರಾಮಗಳ ಸತ್ಯದರ್ಶನ ಮಾಡಬೇಕೆಂದು ಕರೆಯುತ್ತಿದ್ದೇವೆ. ಆದರೂ ಇತ್ತ ಕಡೆ ಹೊರಳಿ ನೋಡಲಾರರು. ಇಲ್ಲಿನ ಶಾಸಕರು, ಸಂಸದರು, ಜಿಲ್ಲಾ ಮಂತ್ರಿ, ಮುಖ್ಯಮಂತ್ರಿ ಸಲಹೆಗಾರರು ಹೋರಾಟಕ್ಕೆ ಬೆಂಬಲಿಸುತ್ತೇವೆ ಎನ್ನುವುದನ್ನು ಬಿಡಬೇಕು. ಮೊದಲು ಸರ್ಕಾರದಿಂದ ಬಲ್ಡೋಟ ವಿಸ್ತರಣೆಯ ತಡೆ ಆದೇಶ ತರಬೇಕು.
ಅಷ್ಟು ಮಾಡಿ ಜನರಿಗೆ ಉಪಕಾರ ಮಾಡಲಿ’ ಎಂದು ಹೇಳಿದರು.ಸಂಚಾಲಕ ಡಿ.ಎಚ್. ಪೂಜಾರ ಮಾತನಾಡಿ, ಜನಸಾಮಾನ್ಯರು, ವಿದ್ಯಾರ್ಥಿಗಳು, ನಗರದ ಪ್ರಜ್ಞಾವಂತ ಜನರು ಈ ಪತ್ರ ಚಳವಳಿಯ ಆಂದೋಲನದಲ್ಲಿ ಪಾಲ್ಗೊಳ್ಳಲಿ. ಪ್ರತಿಯೊಬ್ಬರು ಎದುರಿಸುತ್ತಿರುವ ಮಾಲಿನ್ಯದ ಆತಂಕ ದೂರಾಗಲು ಜನ ಚಳವಳಿ ವಿಸ್ತೃತವಾಗಿ ಹರಡಬೇಕು. ಬಾಧಿತ ಹಳ್ಳಿ ಜನ ರೋಷಿ ಹೋಗಿದ್ದು, ಅವರ ಕಣ್ಣೀರು ಒರೆಸಲು ಯಾರು ಇಲ್ಲದೆ ಅನಾಥ ಭಾವ ಮೂಡಿದೆ. ಈ ಚಳವಳಿಯ ಆಂದೋಲನದಲ್ಲಿ ಹಳ್ಳಿ ಜನರನ್ನು ಒಳಗೊಳ್ಳೋಣ ಎಂದರು.ಧರಣಿಯಲ್ಲಿ ಪ್ರಕಾಶಕ ಡಿ.ಎಂ. ಬಡಿಗೇರ, ಸಂಚಾಲಕರು ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಕವಿಯತ್ರಿ ಪುಷ್ಪಲತಾ ಏಳುಬಾವಿ, ಶರಣು ಗಡ್ಡಿ, ಎಸ್. ಬಿ. ರಾಜೂರು, ಚಾರಣ ಬಳಗದ ಚಂದ್ರಗೌಡ ಪಾಟೀಲ್, ಸಾವಿತ್ರಿ ಮುಜುಮದಾರ್, ಮಹಾದೇವಪ್ಪ ಎಸ್. ಮಾವಿನಮಡು, ಯಮನೂರ್ಫ ಹಾಲಳ್ಳಿ ಬಸಾಪುರ, ಗವಿಸಿದ್ದಪ್ಪ ಹಲಿಗಿ, ರವಿ ಕಾಂತನವರ, ಭುಜಂಗ ಸ್ವಾಮಿ, ಶಿವಪ್ಪ ಜಲ್ಲಿ, ರಾಜಶೇಖರ ಏಳುಬಾವಿ, ಹನುಮಪ್ಪ ಕಟಿಗಿ, ಶಿವಕುಮಾರ ಕುಸುಮ, ಬಸವರಾಜ್ ನರೇಗಲ್, ಶೇಖರಯ್ಯ ಹೊಸಮನಿ, ಶಿವಪ್ಪ ಹಡಪದ ಪತ್ರ ಚಳವಳಿ ಆಂದೋಲನ ನಡೆಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 