ಜ. 22ರ ವಿಶೇಷ ಅಧಿವೇಶನದಲ್ಲಿ ಬಲ್ಡೋಟಾ ವಿರೋಧಿ ಹೋರಾಟ ಪ್ರಸ್ತಾಪ - ನಾರಾಯಣಸ್ವಾಮಿ

ಜ. 22ರ ವಿಶೇಷ ಅಧಿವೇಶನದಲ್ಲಿ ಬಲ್ಡೋಟಾ ವಿರೋಧಿ ಹೋರಾಟ ಪ್ರಸ್ತಾಪ - ನಾರಾಯಣಸ್ವಾಮಿ Anti-Baldota struggle proposed in special session on Jan. 22 - Narayanaswamy


        ಕೊಪ್ಪಳ 17:  ಬಸಾಪುರ ಕೆರೆ ಸಮುದಾಯದ ಆಸ್ತಿ ಅದನ್ನು ಯಾವುದೇ ಸರಕಾರ ಕಟ್ಟಿಲ್ಲ ಸರಕಾರ ಅದನ್ನು ಮಾರಲು ಬರುವುದಿಲ್ಲ ಕೂಡಲೇ ಅದನ್ನು ತೆರವುಗೊಳಿಸಬೇಕು ಈ ಕುರಿತು ಅಧಿವೇಶನದ ನಂತರವೂ ಕೂಡ ಹೋರಾಟ ಮುಂದುವರಿಸುವುದಾಗಿ ಹೇಳಿದರು. ಜನರ ಆರೋಗ್ಯ ಬಹಳ ಮುಖ್ಯ ಸಿಎಂ ಹಾಗೂ ಉದ್ಯಮ ಸಚಿವರು ಕೇಂದ್ರದತ್ತ ಬೆಟ್ಟು ಮಾಡುತ್ತಿರುವುದು ಸರಿಯಲ್ಲ ಇವರು ರದ್ದುಗೊಳಿಸಬೇಕು, ಕೇಂದ್ರದಲ್ಲಿ ಏನಾದರೂ ಇದ್ದರೂ ಅದನ್ನು ನಾವೂ ಗಮನಿಸುತ್ತೇವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು ಭರವಸೆ ನೀಡಿದರು. 

ಅವರು ನಗರ ಮತ್ತು ಭಾಗ್ಯನಗರ ಹಾಗೂ 20 ಭಾದಿತ ಹಳ್ಳಿಗಳ ಸಮಸ್ಯೆಯನ್ನ ಮುಂದಿಟ್ಟುಕೊಂಡು ನಡೆಸುತ್ತಿರುವ ಬಲ್ಡೋಟಾ ಹಾಗೂ ಇತರೆ ವಿಷಕಾರಕ ಕಾರ್ಖಾನೆಗಳ ವಿರೋಧಿ ಹೋರಾಟದ 78ನೇ ದಿನ ಬೆಂಬಲ ನೀಡಿ ಮಾತನಾಡಿ, ಜನವರಿ 22ರಂದು ನಡೆಯುವ ವಿಶೇಷ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಸರಕಾರವನ್ನ ಎಚ್ಚರಿಸುವುದಾಗಿ ಹೇಳಿದರು. 

ಮುಂದುವರೆದು ಮಾತನಾಡಿದ ಅವರು ಈ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಮತ್ತು ಈಗಾಗಲೇ ಹೋರಾಟವನ್ನು ಮುಂದುವರಿಸಿದ್ದೇವೆ ಅದನ್ನು ತೀವ್ರಗೊಳಿಸುವ ಕೆಲಸವನ್ನು ಬರುವ ದಿನಗಳಲ್ಲಿ ಮಾಡುತ್ತೇವೆ. ಸ್ಥಳೀಯ ನಾಯಕರು ಹೆಚ್ಚಿನ ಮುತುವರ್ಜಿವಹಿಸಿ ಜನರ ಜೀವ ಉಳಿಸಬೇಕು ಎಂದು ಆಗ್ರಹಿಸಿದರು. 

ನಗರಸಭೆ ಪಕ್ಕದ ವಾಣೀಜ್ಯ ಸಂಕೀರ್ಣದ ಹತ್ತಿರ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಹೋರಾಟ 78ನೇ ದಿನದಲ್ಲಿ ಮುಂದುವರೆಯಿತು. ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದೇವೆ, ಜನಪ್ರತಿನಿಧಿಗಳು ಗವಿಮಠದ ಪೂಜ್ಯರಿಗೆ ಅವಮಾನ ಮಾಡಬಾರದು, ಅವರು ಈ ಭಾಗದ ದಿವ್ಯ ಶಕ್ತಿ, ಅವರಿಗೆ ನೋವು ಕೊಡಬೇಡಿ ಎಂದು ಹೇಳಿದರು.  

ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಎಸ್‌.ಬಿ. ರಾಜೂರು, ಹಿರಿಯರಾದ ಶಂಭುಲಿಂಗಪ್ಪ ಹರಗೇರಿ, ಜಿ. ಬಿ. ಪಾಟೀಲ್, ಸಂಚಾಲಕರಾದ ಮಲ್ಲಿಕಾರ್ಜುನ ಬಿ.ಗೋನಾಳ, ಮಂಜುನಾಥ ಜಿ. ಗೊಂಡಬಾಳ, ರಾಜೇಶ ಸಸಿಮಠ, ಬಿಜೆಪಿ ಮುಖಂಡರಾದ ಡಾ. ಬಸವರಾಜ ಕ್ಯಾವಟರ್, ಗಣೇಶ ಹೊರತಟ್ನಾಳ, ಕನಕಪ್ಪ ಚಲುವಾದಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಗ್ಯಾನೇಶ, ಕನಕಮೂರ್ತಿ ಚಲುವಾದಿ, ಹೋರಾಟ ಸಮಿತಿಯ ರವಿ ಕಾಂತನವರ, ಎ. ಎಂ. ಮದರಿ, ಕಾಶಪ್ಪ ಚಲುವಾದಿ, ವಿಜಯಮಹಾಂತೇಶ ಹಟ್ಟಿ, ಕಲ್ಲಮ್ಮ ರ್ಯಾವಣಕಿ, ಶಿವಾನಂದ ಬಡಿಗೇರ, ಶಾಂತಮ್ಮ, ಈರಮ್ಮ ಉಂಡಿ, ಈರಣ್ಣ ವಾಲಿ, ಶಿವಪ್ಪ ಜಲ್ಲಿ, ಮಕ್ಬೂಲ್ ರಾಯಚೂರು ಇತರರಿದ್ದರು.