ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ವ ಸದಸ್ಯರ ವಾರ್ಷಿಕ ಸಭೆ ಜರುಗಿತು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ವ ಸದಸ್ಯರ ವಾರ್ಷಿಕ ಸಭೆ ಜರುಗಿತು Annual meeting of all members of Karnataka State Government Employees Association held

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ವ ಸದಸ್ಯರ ವಾರ್ಷಿಕ ಸಭೆ ಜರುಗಿತು 

ರಾಯಬಾಗ 03: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಾಖೆ ರಾಯಬಾಗ ಇದರ ಸನ್ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಶನಿವಾರ ರಾಯಬಾಗ ಸರ್ಕಾರಿ ನೌಕರರ ಭವನದಲ್ಲಿ ಜರುಗಿತು. 

ಸಭೆಯಲ್ಲಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಪನ್ನೆ ಸಾಯನಾ ಮಾತನಾಡಿ ಸರ್ಕಾರಿ ನೌಕರರಿಗೆ ಬ್ಯಾಂಕಿನಿಂದ ದೊರೆಯುವ ಮನೆ ಕಟ್ಟಲು ಹಾಗೂ ಇತರೆ ಸಾಲ ಸೌಲಭ್ಯಗಳು, ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಅವರ ಮಕ್ಕಳಿಗೂ ಇರುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ನಂತರ ಸಿದ್ದಲಿಂಗ ನರಗಟ್ಟಿ ವಾರ್ಷಿಕ ಖರ್ಚು ವೆಚ್ಚಗಳ ಮಾಹಿತಿ ಓದಿದರು. ನಂತರ ಭವನದಲ್ಲಿ ಶೌಚಾಲಯ ಕೊರತೆ ಇದ್ದು ಶೌಚಾಲಯ ನಿರ್ಮಾಣ ಕುರಿತು, ಹಳೆಯ ಪಿಂಚಣಿ ಯೋಜನೆ ಮರು ಜಾರಿ, 2025-26ನೇ ಸಾಲಿನ ಅಂದಾಜು ಆಯ-ವ್ಯಯ ಅನುಮೋದನೆ, ಸಾಲರಿ ಪ್ಯಾಕೇಜ್ ಹಾಗೂ ನಗದು ರಹಿತ ಚಿಕಿತ್ಸೆ ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಿ ಚಪ್ಪಾಳೆ ತಟ್ಟುವ ಮೂಲಕ ಸರ್ವಾನುಮತದಿಂದ ಅನುಮೋದನೆ ನೀಡಿದರು. ನಂತರ ಚುನಾವಣೆ ಸಮಯದಲ್ಲಿ ಚುನಾವಣೆ ಅಧಿಕಾರಿಗಳು ಪಡೆದ ಠೇವಣಿ ಮರುಳಿ ಪಡೆಯುವ ಹಾಗೂ ಅವರಿಗೆ ನೀಡಬೇಕಾದ ಸಂಭಾವನೆ ಕುರಿತು ಚರ್ಚೆ ಹಲವು ವಾದ ವಿವಾದಗಳು ನಡೆದವು.  

ನಂತರ ತಾಲೂಕಾಧ್ಯಕ್ಷ ಉಮೇಶ ಪೋಳ ಮಾತನಾಡಿ ಸಂಘ ಕೇವಲ ಹೆಸರಿಗೆ ಆಗದೆ ಸಂಘದ ಮೂಲಕ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಆಟೋಟಗಳು, ಒತ್ತಡ ರಹಿತ ಜೀವನಕ್ಕೆ ಬೇಕಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ಸೇರಿದಂತೆ ಎಲ್ಲ ನೌಕರರಿಗೆ ಒಂದಿಲ್ಲೊಂದು ರೀತಿಯಲ್ಲಿ ಸದುಪಯೋಗ ಆಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ವಿಚಾರ ವ್ಯಕ್ತಪಡಿಸಿದರು.           

ತಾಲೂಕಾ ದಂಡಾಧಿಕಾರಿ ಸುರೇಶ ಮುಂಜೆ , ತಾಲುಕಾ  ಅಧ್ಯಕ್ಷ ಉಮೇಶ ಪೋಳ, ಕಾರ್ಯದರ್ಶಿ ಶಂಕರಗೌಡ ಪಾಟೀಲ, ಖಜಾಂಚಿ ಸಿದ್ದಲಿಂಗ ನರಗಟ್ಟಿ, ರಾಜ್ಯ ಪರಿಷತ್ ಸದಸ್ಯ ಮಲ್ಲಿಕಜಾನ್ ಕೊರ್ಬು, ಗೌರವಾಧ್ಯಕ್ಷ ಬಿ.ಎಲ್‌.ಘಂಟಿ, ಜಿಲ್ಲಾ ಸಹ ಕಾರ್ಯದರ್ಶಿ ವಿನೋದ್ ಚೌವ್ಹಾನ್ , ಕೆನರಾ ಬ್ಯಾಂಕ್ ವ್ಯವಸ್ಥಾಪಕ ಪನ್ನೆ ಸಾಯನಾ, ವಿಭಾಗ ವ್ಯವಸ್ಥಾಪಕ ಅಭಿಲಾಶ್,  ಹೆಮರಾಜ ನಾಗನ್ನವರ ಎಮ್‌.ಕೆ ಶೇತಸನದಿ , ವಿಶ್ವನಾಥ ಹಾರೂಗೇರಿ, ಸುಖದೇವ ಕಾಂಬಳೆ ,ನಂದಕುಮಾರ ಪಾಟೀಲ, ಬಿ.ಎಲ್‌.ಘಂಟಿ, ಸುವರ್ನಾ ಕೊಳವಿ,  ಕಲ್ಪನಾ ಕಾಂಬಳೆ ಹಾಗೂ  ಪದಾಧಿಕಾರಿಗಳು ಹಾಜರಿದ್ದರು.