ಬಳ್ಳಾರಿ ಜಿಲ್ಲೆಯ ರೂ. 14,248 ಕೋಟಿಗಳ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಕೃಷಿ ಮತ್ತು ಎಂಎಸ್‌ಎಂಇ ವಲಯಕ್ಕೆ ಹೆಚ್ಚಿನ ಒತ್ತು
Annual loan scheme worth Rs. 14,248 crores launched in Ballari district, more emphasis on agricultur
ಲೋಕದರ್ಶನ ವರದಿ
ಬಳ್ಳಾರಿ 24: ಜಿಲ್ಲೆಯ ಆರ್ಥಿಕ ಪ್ರಗತಿಗೆ ಪೂರಕವಾಗಿರುವ 2026-27ನೇ ಹಣಕಾಸು ವರ್ಷದ ಜಿಲ್ಲಾ ಕ್ರೆಡಿಟ್ ಯೋಜನೆಯನ್ನು ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್ ವತಿಯಿಂದ ಶುಕ್ರವಾರ ಬಿಡುಗಡೆ ಮಾಡಲಾಯಿತು.
ನಗರದ ನೂತನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಈ ಸಾಲಿನ ಸಾಲ ಯೋಜನೆಯ ಕೈಪಿಡಿಯನ್ನು ಲೋಕಾರೆ್ಣಗೊಳಿಸಿದರು.
*ಸಾಲ ಯೋಜನೆಯ ಮುಖ್ಯಾಂಶಗಳು (2026-27):*
ಈ ಬಾರಿಯ ಸಾಲ ಯೋಜನೆಯು ಕಳೆದ ವರ್ಷಕ್ಕಿಂತ ಶೇ.16.19 ರಷ್ಟು ಹೆಚ್ಚಳ ಕಂಡಿದ್ದು, ಒಟ್ಟು ರೂ.14,248.71 ಕೋಟಿಗಳ ಗುರಿಯನ್ನು ಹೊಂದಿದೆ.
ಕೃಷಿ ವಲಯ: ಒಟ್ಟು ಯೋಜನೆಯ ಶೇ. 43.74 ರಷ್ಟು ಅಂದರೆ ರೂ. 6,231.71 ಕೋಟಿ ಅನುದಾನವನ್ನು ಕೃಷಿ ಕ್ಷೇತ್ರಕ್ಕೆ ಮೀಸಲಿಡಲಾಗಿದೆ.
ಎಂ.ಎಸ್.ಎಂ.ಇ: ಜಿಲ್ಲೆಯ ಕೈಗಾರಿಕಾ ಚಟುವಟಿಕೆಗಳ ಉತ್ತೇಜನಕ್ಕಾಗಿ ರೂ. 3,630.09 ಕೋಟಿ ನಿಗದಿಪಡಿಸಲಾಗಿದೆ.
ಆದ್ಯತಾ ವಲಯ: ಒಟ್ಟು ಯೋಜನೆಯ ಶೇ. 70.96 ರಷ್ಟು ಭಾಗವನ್ನು (ರೂ. 10,111.45 ಕೋಟಿ) ಆದ್ಯತಾ ವಲಯಕ್ಕೆ ನೀಡಲಾಗಿದೆ.
ಇತರೆ: ಶಿಕ್ಷಣ ವಲಯಕ್ಕೆ ರೂ. 44.56 ಕೋಟಿ ಹಾಗೂ ವಸತಿ ವಲಯಕ್ಕೆ ರೂ. 173.13 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ.
*ಕಳೆದ ಸಾಲಿನ ಸಾಧನೆ (2025-26):*
ಬ್ಯಾಂಕಿಂಗ್ ಪ್ರಗತಿ: ಜಿಲ್ಲೆಯ ಬ್ಯಾಂಕಿಂಗ್ ವಲಯದ ಒಟ್ಟು ಠೇವಣಿ ರೂ. 21,858.21 ಕೋಟಿಗಳಾಗಿದ್ದು (ಶೇ. 16.26 ಪ್ರಗತಿ), ಒಟ್ಟು ಮುಂಗಡಗಳು ರೂ. 19,312.87 ಕೋಟಿಗಳಾಗಿವೆ. ಜಿಲ್ಲೆಯ ಸಾಲ-ಠೇವಣಿ ಅನುಪಾತವು ಶೇ. 88.36 ರಷ್ಟಿದೆ. ಕಳೆದ ಸಾಲಿನಲ್ಲಿ ರೂ. 12,263.03 ಕೋಟಿ ಸಾಲ ವಿತರಣೆಯ ಗುರಿಯ ವಿರುದ್ಧ ಬ್ಯಾಂಕುಗಳು ರೂ. 13,138.78 ಕೋಟಿ ವಿತರಿಸಿ, ಶೇ. 107.14 ರಷ್ಟು ಅತ್ಯುತ್ತಮ ಸಾಧನೆ ದಾಖಲಿಸಿವೆ ಎಂದು ಕೆನರಾ ಬ್ಯಾಂಕ್‌ನ ಎಲ್‌ಡಿಎಂ ಗೀರೀಶ್ ವಿ ಕುಲಕರ್ಣಿ ಅವರು ಕಳೆದ ವರ್ಷದ ಸಾಧನೆಯ ಅಂಕಿ-ಅಂಶಗಳನ್ನು ಈ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಾಯೋಜಿತ ಯೋಜನೆಗಳ ಪ್ರಗತಿ ಪರೀಶೀಲಿಸಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು, “ಪಿಎಂಎಫ್‌ಎಂಇ, ಪಿಎಂಇಜಿಪಿ ಹಾಗೂ ಪಿಎಂ ಸ್ವಾನಿಧಿಯಂತಹ ಯೋಜನೆಗಳ ಸಮರ್ಕ ಅನುಷ್ಠಾನವಾಗಬೇಕು. ಬ್ಯಾಂಕರ್‌ಗಳು ಮತ್ತು ಸರ್ಕಾರಿ ಇಲಾಖೆಗಳ ನಡುವೆ ಉತ್ತಮ ಸಮನ್ವಯವಿದ್ದರೆ ಈ ವರ್ಷವೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ಆಶಿಸಿದರು.
ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಸಣ್ಣ ಸಾಲಗಳಿಗೆ ಮತ್ತು ಸರ್ಕಾರಿ ಯೋಜನೆಗಳಿಗೆ ಮೇಲಾಧಾರ ಭದ್ರತೆ ಕೇಳದಂತೆ ಬ್ಯಾಂಕರ್‌ಗಳಿಗೆ ಸೂಚಿಸಿದ ಅವರು, ಸಕಾಲಿಕ ಸಾಲ ಹರಿವು ಜಿಲ್ಲೆಯ ನಿರುದ್ಯೋಗ ನಿರ್ಮೂಲನೆಗೆ ಸಹಕಾರಿ ಎಂದರು.
ಈ ವೇಳೆ ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಅರುಣ್ ಕುಮಾರ್ ಎಜಿ, ವಿಭಾಗೀಯ ವ್ಯವಸ್ಥಾಪಕ ಉಪೇಂದ್ರ ಸಿಂಗ್, ಯೂನಿಯನ್ ಬ್ಯಾಂಕ್‌ನ ಜಿ. ರಾಜೇಶ್, ಕೆಜಿಬಿ ಹಿರಿಯ ವ್ಯವಸ್ಥಾಪಕ ಚಂದ್ರ್ಪ, ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ನಾಗರಾಜು, ಐಓ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಮಹಾಂತೇಶ್.ಟಿ., ಹೆಚ್‌ಡಿಎಫ್‌ಸಿ ಬ್ಯಾಂಕ್ ಮುಖ್ಯಸ್ಥ ರಮೇಶ್ ಜೋನಾಲ್, ಕ್ಲಸ್ಟರ್ ಮುಖ್ಯಸ್ಥ ನಂದ ಕಿಶೋರ್, ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಾಸೀರ್ ಅಹಮದ್, ಆರ್‌ಎಸ್‌ಇಟಿಐ ಸಿಬಿ ನಿರ್ದೇಶಕ ರಾಜಸಾಬ್ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಜಿಲ್ಲಾ ಸಂಯೋಜಕರು ಮತ್ತು ಲೈನ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 