ಶ್ರೀ ಸಿದ್ದಿವಿನಾಯಕ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ

ಶ್ರೀ ಸಿದ್ದಿವಿನಾಯಕ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ Annual General Meeting of Sri Siddhivinayak Credit Cooperative Society

ಚಿಕ್ಕೋಡಿ 27: ಪಟ್ಟಣದ ಪ್ರತಿಷ್ಠಿತ ಶ್ರೀ ಸಿದ್ದಿವಿನಾಯಕ ಕ್ರೆಡಿಟ್ ಸೌಹಾರ್ದ ಸಹಕಾರಿಯು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಪ್ರಸಕ್ತ ವರ್ಷದಲ್ಲಿ ಉತ್ತಮ ಲಾಭಗಳಿಸಿ ಗ್ರಾಹಕರ ಅಚ್ಚುಮೆಚ್ಚಿನ ಸಹಕಾರಿಯಾಗಿ ಬೆಳವಣಿಗೆ ಕಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಂಜಯ ಅಡಕೆ ಹೇಳಿದರು. 

ಇಲ್ಲಿನ ಕೇಶವ ಕಲಾ ಭವನದಲ್ಲಿ ನಡೆದ ಶ್ರೀ ಸಿದ್ದಿವಿನಾಯಕ ಕ್ರೆಡಿಟ್‌. ಸೌಹಾರ್ದ ಸಹಕಾರಿ ಸಂಘದ 23ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ 1,15,97,158 ಕೋಟಿ ನಿವ್ವಳ ಲಾಭ ಗಳಿಸಿದೆ. 123,37,94,736 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಶೇ.15 ಸದಸ್ಯರಿಗೆ ನಿವ್ವಳ ಲಾಭ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ 150 ಕೋಟಿಗೂ ವ್ಯವಹಾರ ಮಾಡಲಾಗುತ್ತಿದೆ. ನೂತನ ಐನಾಪುರ ಶಾಖೆಯನ್ನು ಅ.1 ರಂದು ಉದ್ಘಾಟನೆ ಮಾಡಲಾಗುವುದು ಎಂದರು. 

ಮುಂದಿನ ದಿನಗಳಲ್ಲಿ ಮೂರು ಶಾಖೆ ಪ್ರಾರಂಭಿಸಲಾಗುವುದು. ಸಿದ್ದಿ ಪ್ರಿಯ ಸಂಸ್ಥೆಯನ್ನು ಸಿದ್ದಿ ವಿನಾಯಕದಲ್ಲಿ ಸೇರಿಕೊಳ್ಳಲಾಗಿದೆ. ಗ್ರಾಹಕರಿಗೆ ಒಂದೆ ಸೂರಿನಡಿನಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ತಿಳಿಸಿದರು. 

ಸಾನ್ನಿಧ್ಯ ವಹಿಸಿದ್ದ ಹಂಚಿನಾಳ ಕೆ.ಎಸ್‌. ಮಠದ ಮಹೇಶಾನಂದ ಸ್ವಾಮೀಜಿ ಮಾತನಾಡಿ, ಯಾವುದೆ ಸಂಸ್ಥೆ ಎತ್ತರಕ್ಕೆ ಬೆಳೆಯಬೇಕಾದರೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಶ್ರದ್ದೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು. 

ಬ್ಯಾಂಕಿನ ಉಪಾಧ್ಯಕ್ಷ ಕೃಷ್ಣಾ ಶಿವಾಜಿ ಭೋಸಲೆ, ಸದಾನಂದ ಹಳಿಂಗಳಿ, ಬ್ಯಾಂಕಿನ ನಿರ್ದೇಶಕರಾದ ಸುಜೀತ ದೀಕ್ಷಿತ, ಶ್ರೀಕಾಂತ ಕುಲಕರ್ಣಿ, ಅಪ್ಪಾಸಾಹೇಬ ಚವ್ಹಾಣ, ಗೋವಿಂದ ಅಡಕೆ, ಸದಾಶಿವ ಮಾಳಿ, ಅರುಣ ನೇರ್ಲಿ, ನಯನಾ ಹಿರೇಕೋಡಿ, ಸುಧಾ ದೀಕ್ಷಿತ, ಪ್ರಕಾಶ ಹುಬರಟ್ಟಿ, ಆನಂದ ಕುಂಬಾರ, ರವೀಂದ್ರ ಬನಸೋಡೆ, ವಿಠಲ ಘಟ್ಟಿ, ರಾಜಾರಾಮ ಪವಾರ, ಗೋವಿಂದ ಕೇಳಕರ ಉಪಸ್ಥಿತರಿದ್ದರು.  

ಕಾರ್ಯದರ್ಶಿ ಕೆ.ಪಿ.ಗಣೇಶವಾಡಿ ವರದಿ ವಾಚಿಸಿದರು. ಮಹೇಶ ಬಾಕಳೆ ಸ್ವಾಗತಿಸಿದರು.