ವಾರ್ಷಿಕ ಸರ್ವ ಸಾಧಾರಣ ಸಭೆ ಪ್ರತಿಭಾ ವಿದ್ಯಾರ್ಥಿಗಳಿಗೆ ಪುರಸ್ಕಾರ

ವಾರ್ಷಿಕ ಸರ್ವ ಸಾಧಾರಣ ಸಭೆ ಪ್ರತಿಭಾ ವಿದ್ಯಾರ್ಥಿಗಳಿಗೆ ಪುರಸ್ಕಾರ   Annual General Meeting awards to talented students

ಇಂಡಿ 20: ನಗರದ ವೀರರಾಣಿ ಕಿತ್ತೂರು ಚೆನ್ನಮ್ಮ ಸರಕಾರಿ ಹಾಗೂ ಅರೇಸರಕಾರಿ ನೌಕರರ ಸಹಕಾರಿ ಪತ್ತಿನ ಸಂಘ ನಿ ಇಂಡಿ 2024-25 ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇಂಡಿ ನಗರದ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು  ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರಾದ ಸುರೇಶ ಶೇಡಶ್ಯಾಳ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ನೌಕರರ ಮಕ್ಕಳಿಗೆ ಗುರುತಿಸಿ ಅವರಿಗೆ ಸನ್ಮಾನಿಸಿ ಗೌರವಿಸಿದು ತುಂಬಾ ಸಂತೋಷದ ಸಂಗತಿ ಹಾಗೂ  ಪಂಚಮಸಾಲಿ ಸಮಾಜದ ಬಂಧುಗಳು ಒಂದಾಗಿ ಒಗ್ಗುಟವಾಗಿ ಇರಬೇಕು ಎಂದು ಸಲಹೆ ನೀಡಿದರು. 

ಇಂಡಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ರಾವೂರ ಅವರು ಮಾತನಾಡಿ ನಮ್ಮ ಸಹಕಾರಿ ಸಂಘ ಬೆಳವಣಿಗೆ ನಾವು ಎಲ್ಲರೂ ಒಂದಾಗಿ ಸಂಘದ ಬೆಳವಣಿಗೆ ಶ್ರಮಿಸೋಣ ಎಂದು ಹೇಳಿದರು.ವೀರರಾಣಿ ಕಿತ್ತೂರು ಚೆನ್ನಮ್ಮ ಸಹಕಾರಿ ಸಂಘದ ಸರ್ಕಾರಿ ಹಾಗೂ ಅರೆಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ ಎನ್ ಕಲ್ಯಾಣಿ  ನಮ್ಮ ಸಂಘವು ಮೂರು ಲಕ್ಷ ರೂಪಾಯಿಗಳ ಬಂಡವಾಳ ಹೂಡಿಕೆಯೊಂದಿ ಆರಂಭ ಸಂಘ ಈಗ ಸುಮಾರು ನಲವತ್ತು ಲಕ್ಷ ರೂಪಾಯಿಗಳ ಬಂಡವಾಳದೊಂದಿಗೆ ಮುನ್ನುಡಿಯುತ್ತಿದೆ ಎಂದು ಹೇಳಿದರು.ನಿವೃತ್ತ ಶಿಕ್ಷಕರಾದ ಸುಧಾಕರಗೌಡ ಬಿರಾದಾರ ಮಾತನಾಡಿ ನಮ್ಮ ವೀರರಾಣಿ ಕಿತ್ತೂರು ಚೆನ್ನಮ್ಮ ಸಹಕಾರಿ ಸಂಘ ಬೆಳೆಯಬೇಕು ಎಂದರೆ  ಪಡೆದ ಸಾಲವನ್ನು ಸಕಾಲದಲ್ಲಿ ತುಂಬಿದರೆ ಈ ಸಂಘ ದೊಡ್ಡದಾಗಿ ಬೆಳೆಯಬಹುದು ಎಂದು ಹೇಳಿದರು. ಸರ್ವಜ್ಞ ಅಕಾಡೆಮಿಯ ಸಂಸ್ಥಾಪಕರಾದ ನಾಗೇಶ್ ಹೇಗಡ್ಯಾಳ ಮಾತನಾಡಿ ಮುಂದಿನ ವರ್ಷದಿಂದ ಇಂಡಿ ತಾಲ್ಲೂಕಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ರೈತರ ಮಕ್ಕಳಿಗೆ ಕರಿಸಿ ಅವರಿಗೆ ಗೌರವಿಸಿ ಸನ್ಮಾನಿಸುವ ಕಾರ್ಯ ಮಾಡಬೇಕು ಅದಕ್ಕೆ ತಗುಲುವ ವೆಚ್ಚವನ್ನು ನಾನೆ ಬರಿಸುತ್ತೆನೆ ಎಂದು ಹೇಳಿದರು.ಸಿಂದಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ  ಅಶೋಕ ತೆಲ್ಲೂರ  ಹಾಗೂ ಶಿವರಾಜ್ ಬಿರಾದಾರ  ರವಿಂದ್ರ ಉಗಾರ ಶಿವಾನಂದ ಮಂಗನವರ ಸೇರಿದಂತೆ ಅನೇಕರು ಮಾತನಾಡಿದರು.ಈ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು  ನಿವೃತ್ತ ಶಿಕ್ಷಕರನ್ನು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪಂಚಮಸಾಲಿ ಸಮಾಜದ ನೌಕರನನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಕಾರ್ಯಕ್ರಮದ ಸಾನ್ನಿಧ್ಯ ಮಾಹಾಂತಯ್ಯ ಹೀರೆಮಠ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಸುನಂದಾ ಬಿರಾದಾರ ಹಾಗೂ ಈರಣ್ಣ ತೆಲ್ಲೂರ ರವಿ ಬಿರಾದಾರ ಉದಯ ಕೊಟ್ನಾಳ ಶಿವಾನಂದ ಬಿರಾದಾರ ಲಕ್ಷ್ಮಣ ಲಾಳಸೇರಿ ನೀಲಾ ಇಂಗಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬಸವರಾಜ ಗೋರನಾಳ  ಅವರು ಸಂಘದ ವಾರ್ಷಿಕ ವಾಚನೆ ಮಂಡಿಸಿದರು.ಈ ಕಾರ್ಯಕ್ರಮವನ್ನು ವಾಯ್ ಜಿ ಬಿರಾದಾರ ನಿರೂಪಿಸಿದರು.