ಭೀಮಾನದಿ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಸಿ: ಬಿ ಡಿ ಪಾಟೀಲ
Announce special package for Bhima River victims: BD Patil
ಇಂಡಿ: ಮತಕ್ಷೇತ್ರ ಸುಮಾರು14 ಗ್ರಾಮಗಳಾದ ಹಿಂಗಣಿ ಬರಗುಡಿ ಪಡನೂರ ಶಿರಗೂರ ಗುಬೇವಾಡ ಅಗರಖೇಡ ಮಣ್ಣೂರ ಬುಯ್ಯಾರ ನಾಗರಳ್ಳಿ ಖೇಡಗಿ ಹಾಗೂ ರೋಡಗಿ ಪ್ರತಿಬಾರಿ ಭೀಮಾನದಿ ಪ್ರವಾಹದಿಂದ ಬೆಲೆಬಾಳುವ ಬೆಳೆ ಜಾನುವಾರು, ಜೀವಹಾನಿ ಹಾಗೂ ಮನೆಗಳು ಹಾಳಾಗುವ ಸಮಸ್ಯೆಗಳು ಇಂಡಿ ತಾಲೂಕಿನ ರೈತರಿಗೆ ಹಾಗೂ ಅಧಿಕಾರಿಗಳಿಗೆ ಹೊಸದೇನಲ್ಲ. ಪ್ರತಿಬಾರಿ ಪ್ರವಾಹದಿಂದ ತತ್ತರಿಸಿರುವ ಭೀಮಾ ತೀರದ ರೈತರಿಗೆ ಒಣ ಆಶ್ವಾಸನೆಗಳು ಕೇಳಿ ಕೇಳಿ ಸುಸ್ತಾಗಿದ್ದಾರೆ.
ಆದರೆ ಈ ಬಾರಿ ಪ್ರವಾಹ ಅತೀಯಾದ ಹಾನಿಮಾಡಿದೆ. ಕಬ್ಬು, ತೋಗರಿ, ಹತ್ತಿ, ಮೆಕ್ಕೆಜೋಳ, ಸಜ್ಜೆ, ಶೆಂಗಾ ಸೇರಿದಂತೆ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಅತಿಯಾದ ಮಳೆ ಹಾಗೂ ಪ್ರವಾಹದಿಂದ ಸಂಪೂರ್ಣವಾಗಿ ಹಾಳಾಗಿದ್ದು ರೈತರ ಬದುಕು ಮೂರಾಬಟ್ಟೆ ಆಗಿದೆ. ತಕ್ಷಣ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭೀಮಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಹಾಗೂ ತಾಲೂಕಿನ ಬೆಳೆ ಅತಿವೃಷ್ಟಿಯಿಂದ ಉಂಟಾದ ಬೆಳೆಹಾನಿಯನ್ನು ಸರ್ವೇ ಮಾಡಿ ಸೂಕ್ತ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲರು ಆಗ್ರಹಿಸಿದ್ದಾರೆ.
ಡಾ. ರಮೇಶ ರಾಠೋಡ, ಸಂತ್ರಸ್ತರೂಂದಿಗೆ ಮಾತನಾಡಿದರು. ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ದುಂಡು ಬಿರಾದಾರ, ಬುಳಾಳಿ ಕೆಳಗಿನಮನಿ, ಭೀಮ ಬಿರಾದಾರ, ಶಿವಪುತ್ರ ವಾಲಿಕಾರ, ಮರೇಪ್ಪ ಗಿರಣಿವಡ್ಡರ, ಮಲಕಾರಿ ಕೆಳಗಿಮನಿ, ಬೂತಾಳಿ ಅಂಕಲಗಿ, ಸೋಮನಿಂಗ ಗಿರಣಿವಡ್ಡರ, ಸಿದ್ದಲಿಂಗ ವಾಲಿಕಾರ, ದಸಗೀರಸಾಬ ಮಲ್ಲಾ, ನಿಯಾಝ್ ಅಗರಖೇಡ, ಶಿವಾಜಿ ಪೂಜಾರಿ, ಆಕಾಶ ಕ್ಷೇತ್ರಿ ಸೇರಿದಂತೆ ನೂರಾರು ಸಂತ್ರಸ್ತರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 