ಅನ್ನೋತ್ಸವ-2026 - ದೇಶದಾದ್ಯಂತದ ಆಹಾರ ಸಂಸ್ಕೃತಿಯ ಸವಿ ಖಚಿತ

ಅನ್ನೋತ್ಸವ-2026 - ದೇಶದಾದ್ಯಂತದ ಆಹಾರ ಸಂಸ್ಕೃತಿಯ ಸವಿ ಖಚಿತ Annotsava-2026 - A taste of food culture from across the country is guaranteed

                   ಬೆಳಗಾವಿ 15: ರೋಟರಿ ಕ್ಲಬ್ ಆಫ್ ಬೆಳಗಾವಿ ಆಯೋಜಿಸಿರುವ 28ನೇ ’ಅನ್ನೋತ್ಸವ-2026’ರ ಪೂರ್ವಸಿದ್ಧತೆಯ ಭೂಮಿಪೂಜಾ ಇತ್ತೀಚೆಗೆ ಗಣ್ಯರ ಸಮ್ಮುಖದಲ್ಲಿ ನೆರವೇರಿತು. ಜನವರಿ 9 ರಿಂದ 18, 2026ರವರೆಗೆ ಸಾವಗಾಂವ್ ರಸ್ತೆಯಲ್ಲಿರುವ ಅಂಗಡಿ ಕಾಲೇಜು ಮೈದಾನದಲ್ಲಿ ಈ ಬೃಹತ್ ಉತ್ಸವವನ್ನು ಆಯೋಜಿಸಲಾಗಿದೆ. ಈ ವರ್ಷದ ಅನ್ನೋತ್ಸವದ ಸ್ವರೂಪ ಮತ್ತು ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ನಾಗರಿಕರ ಅನುಕೂಲಕ್ಕಾಗಿ ಮತ್ತು ಜನಸಂದಣಿಯ ನಿರ್ವಹಣೆಗಾಗಿ, ಈ ಬಾರಿ ​‍್ರ​‍್ರಥಮ ಬಾರಿಗೆ ’ಆನ್ಲೈನ್ ಟಿಕೆಟ್‌’ ಬುಕಿಂಗ್ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.

               ಇದರಿಂದ ನೇರ ಪ್ರವೇಶ ಪಡೆಯುವುದು ಸುಲಭವಾಗಲಿದೆ ಎಂದು ಕಾರ್ಯಕ್ರಮದ ಅಧ್ಯಕ್ಷರಾದ ಮನೋಜ್ ಮೈಕಲ್ ಅವರು ತಿಳಿಸಿದರು.ಪ್ರದರ್ಶನದಲ್ಲಿ ಒಟ್ಟು 181 ಸ್ಟಾಲ್ಗಳಿದ್ದು, ಅವುಗಳಲ್ಲಿ 68 ಕನ್ಸೂಮರ್ ಸ್ಟಾಲ್ಗಳು (ಗೃಹೋಪಯೋಗಿ) ವಸ್ತುಗಳಿಗೆ ಮೀಸಲಿವೆ. ಉಳಿದ ಸ್ಟಾಲ್ಗಳಲ್ಲಿ ಖಾದ್ಯಪ್ರಿಯರಿಗಾಗಿ ವಿವಿಧ ರೀತಿಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳ ಭರ್ಜರಿ ಏರ​‍್ಾಡು ಇರಲಿದೆ. ಈ ಬಾರಿ ರಾಜಸ್ಥಾನ, ಉತ್ತರಾಖಂಡ, ದೆಹಲಿ, ಕೇರಳ, ಮಹಾರಾಷ್ಟ್ರ, ಗೋವಾ, ಬಿಹಾರ, ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳ ಸ್ಟಾಲ್ದಾರರು ಅನ್ನೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಈ ವರ್ಷವೂ ಅನ್ನೋತ್ಸವದಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ’ಮಿಸ್ಟರ್ ಮತ್ತು ಮಿಸ್ ಬೆಳಗಾವಿ’ ಸ್ಪರ್ಧೆಗಳೊಂದಿಗೆ ’ಲೈವ್ ಶೋ’ಗಳು ಪ್ರಮುಖ ಆಕರ್ಷಣೆಯಾಗಲಿವೆ.

               ವಿಶೇಷವೆಂದರೆ, ಎರಡು ದಿನಗಳನ್ನು ಬೆಳಗಾವಿಯ ಸ್ಥಳೀಯ ಕಲಾವಿದರ ಪ್ರದರ್ಶನಕ್ಕಾಗಿ ಮೀಸಲಿಡಲಾಗಿದೆ.ಈ ವರ್ಷದ ಉತ್ಸವದ ವಿನ್ಯಾಸವನ್ನು ಆರ್ಕಿಟೆಕ್ಟ್‌ ಬಕುಳ ಜೋಶಿ ಅವರು ಅತ್ಯಂತ ಕಲ್ಪಕತೆಯಿಂದ ರೂಪಿಸಿದ್ದಾರೆ. ಸುಮಾರು 2,000 ನಾಲ್ಕು ಚಕ್ರದ ಮತ್ತು 6,000ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ವಿಶೇಷ ಯೋಜನೆಯನ್ನು ಹಾಕಲಾಗಿದೆ. ಅಗ್ನಿ ಸುರಕ್ಷತೆ ಮತ್ತು ತುರ್ತು ಪರಿಸ್ಥಿತಿಗಳ ನಿರ್ವಹಣೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಭೂಮಿ ಪೂಜಾ ಸಮಾರಂಭದಲ್ಲಿ ರೋಟರಿ ಕ್ಲಬ್ನ ಅಧ್ಯಕ್ಷರಾದ ವಿನಾಯಕ ನಾಯ್ಕ್‌, ಕಾರ್ಯದರ್ಶಿ ಸಂತೋಷ್ ಪಾಟೀಲ್, ಶರದ್ ಪೈ, ಜಯದೀಪ್ ಸಿದ್ದಣ್ಣವರ, ಪರಾಗ್ ಭಂಡಾರಿ, ನಿರಂಜನ್ ಸಂತ, ಮನೋಜ್ ಪೈ, ಉಮೇಶ್ ಸರನೋಬತ್, ರಾಜು ಪೋತದಾರ್, ಅಕ್ಷಯ್ ಕುಲಕರ್ಣಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.ಸಾಮಾಜಿಕ ಕಾರ್ಯಗಳಿಗೆ ಬದ್ಧ ರೋಟರಿ ಕ್ಲಬ್ ಆಫ್ ಬೆಳಗಾವಿ ವತಿಯಿಂದ ಪ್ರತಿ ವರ್ಷದಂತೆ ಅನ್ನೋತ್ಸವವನ್ನು ಆಯೋಜಿಸಲಾಗಿದ್ದು, ಇದರಿಂದ ಸಂಗ್ರಹವಾಗುವ ನಿಧಿಯನ್ನು ರೋಟರಿಯ ವಿವಿಧ ಜನಹಿತ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಬಳಸಲಾಗುವುದು. ಸಮಾಜ ಸೇವೆ ಮತ್ತು ಸಾಂಸ್ಕೃತಿಕ ವಿನಿಮಯವೇ ಈ ಉತ್ಸವದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಲಾಗಿದೆ.