800 ವರ್ಷಗಳ ಪುರಾತನ ಹನುಮಾನ ದೇವರ ಗುಡಿಯ ಜಯಂತ್ಯೋತ್ಸವ
Anniversary celebration of 800-year-old Hanuman temple
ಲೋಕದರ್ಶನ ವರದಿ
ವಿಜಯಪುರ 01 : ಬಿಜಾಪುರ ಹನುಮಂತ ದೇವರ ಗುಡಿ ಟ್ರಸ್ಟ್ ಕಮೀಟಿ (ರಿ) ಶಹಾಪೂರ ಗೇಟ್, ಜೈಲ ರೋಡ್, ವಿಜಯಪುರ ವತಿಯಿಂದ 2026ನೇ ಸಾಲಿನ ಹನುಮ ಜಯಂತಿ ಹಾಗೂ ನವಗ್ರಹ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಪ್ರತಿಭಾ ಪುರಸ್ಕಾರ ಮತ್ತು ದೇವಸ್ಥಾನಕ್ಕೆ ದೇಣಿಗೆ ನೀಡಿದ ಮಹಾದಾನಿಗಳ ಸನ್ಮಾನ ಸಮಾರಂಭವನ್ನು ಶಹಾಪೂರ ಗೇಟ್ ಜೈಲ್ ದರ್ಗಾ ರೋಡ್ ಹತ್ತಿರ ಗುರುವಾರ ದಿನಾಂಕ 2-04-2025 ರಂದು ಬೆಳಿಗ್ಗೆ 11 ಗಂಟೆಗೆ ಅದ್ದೂರಿ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಬಿಜಾಪುರ ಹನುಮಂತ ದೇವರ ಗುಡಿ ಟ್ರಸ್ಟ್ ಕಮೀಟಿ (ರಿ) ವಿಜಯಪುರದ ಅಧ್ಯಕ್ಷರಾದ ರಮೇಶ ಸುರಪುರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಶಾಪೂರ ಅಗಸಿ ದೇವರ ಗುಡಿಯು ಸುಮಾರು 800 ವರ್ಷಗಳ ಹಿಂದಿನದಾಗಿದೆ. ಐತಿಹಾಸಿಕ ಹಿನ್ನೆಲೆ ಪುರಾತನ ದೇವಸ್ಥಾನವಾಗಿದೆ, ಪ್ರತಿವರ್ಷದಂತೆ ಈ ವರ್ಷವು ಹನುಮಂತ ದೇವರ ಜಾತ್ರೆಯನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ತೊರವಿ ಪರಮಪೂಜ್ಯ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಸಾವಿತ್ರಿ ಹೊನಕೇರಿ, ಶಿವಾನಂದ ಹೊನಕೇರಿ ಅವರನ್ನು ಸನ್ಮಾನಿಸಲಿದ್ದಾರೆ. ಅಧ್ಯಕ್ಷತೆಯನ್ನು ಹನುಮಂತ ದೇವರ ಗುಡಿ ಟ್ರಸ್ಟ್ ಕಮೀಟಿ ಅಧ್ಯಕ್ಷರಾದ ಆರ್. ಕೆ. ಸುರಪುರ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯಪುರ ಮತಕ್ಷೇತ್ರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಆಗಮಿಸಲಿದ್ದಾರೆ.
ಕಲಬುರ್ಗಿ ಗ್ರಾಮೀಣ ವಲಯ ಶಾಸಕ ಬಸವರಾಜ ಮತ್ತಿಮೂಡ, ಅತಿಥಿಗಳಾಗಿ ಅಖಿಲ ಕರ್ನಾಟಕ ಮೋಚಗಾರ ಸಂಘ ಬೆಂಗಳೂರು ಶಿವಪ್ಪಾಜಿ ಮುಳಗುಂದ, ಮಹಾನಗರ ಪಾಲಿಕೆ ಸದಸ್ಯ ರಾಹುಲ ಜಾಧವ, ಕಲಬುರ್ಗಿ ಜಿಲ್ಲೆಯ ಅ.ಕ.ಮ. ಸಂಘ ಅಧ್ಯಕ್ಷ ಕಾಶಿರಾಯ ನಂದೂರಕರ, ವಿಜಯಪುರ ಅಧ್ಯಕ್ಷ ಕೆಂಚಪ್ಪ ಹೊನಕೇರಿ, ಯಾದಗಿರಿ ಲಕ್ಷ್ಮಣ ಡಿಗ್ಗಾವಿ ಭಾಗವಹಿಸಲಿದ್ದಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 