ಮಿಲ್ಲತ್ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮದ ಆಚರಣೆ
Anniversary celebration at Millat School
ಕೊಪ್ಪಳ 16: ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಿಲ್ಲತ್ ಪಬ್ಲಿಕ್ ಶಾಲೆ, ನಿರ್ಮಿತಿ ಕೇಂದ್ರ ಬಡಾವಣೆ, ಕೊಪ್ಪಳ ನಗರ ದಲ್ಲಿ ಶನಿವಾರ ಸಂಜೆ ಗೆ 26ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಸಡಗರ ಸಂಭ್ರಮದಿಂದ ಆಚರಿಸಲಾಯಿತು, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸೈಯದ್ ಗೌಸ್ ಪಾಷಾ ಖಾಜಿ ಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರಿನ ಉದ್ಯಮಿ ಸಮಾಜ ಸೇವಕ ತಾಹಿರ್ ಅಲಿ, ರವರು ಪಾಲ್ಗೊಂಡು ವಾರ್ಷಿಕೋತ್ಸವದ ಉದ್ಘಾಟನೆ ನೆರವೇರಿಸಿ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು.
ಅಂಜುಮನ್ ಕಮಿಟಿ ಅಧ್ಯಕ್ಷ ಎಂಡಿ ಆಸಿಫ್ ಕರ್ಕಿಹಳ್ಳಿ, ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ,ಉರ್ದು ಸಾಹಿತಿ ಹಾಗೂ ನಿವೃತ್ತ ಶಿಕ್ಷಕಿ ಶಮೀಮುನ್ನಿಸಾ ಬೇಗಮ್ ಹೊನಗೊಂದ್, ಪ್ರಶಸ್ತಿ ಪುರಸ್ಕೃತ ನಿವೃತ್ತ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ನದಾಫ ಯುವ ನಾಯಕ ಹಾಗೂ ಉದ್ಯಮಿ ಹನುಮೇಶ್ ಬಾರ್ಕೆರ್ ಗಿಣಿಗೇರಿ,ಕಾಂಗ್ರೆಸ್ ನಾಯಕ ಎಂ.ಡಿ. ಜಹೀರ್ ಅಲಿ, ಶಿಕ್ಷಣ ತಜ್ಞ ಸಯ್ಯದ್ ನಜೀರ್ ಅಹ್ಮದ್ ಅತ್ತಾರ್, ಅಂಚೆ ಇಲಾಖೆ ಅಧಿಕಾರಿ ದಾವೂದ್ ಹುನಗುಂದ್, ಪಾಲಕರ ಪ್ರತಿನಿಧಿ ಪತೇ ಸಾಬ್ ಚುಟ್ಟದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದು ಖಾದರ್ ಲಿಂಗಾ ದರ್ಗಾದ ಖಲೀಫಾ ಸೈಯದ್ ಇಮಾಮ್ ಹುಸೇನ ಪೀರ ಬಾಬಾ ಸಾಹೇಬ್ ಸಾನಿಧ್ಯ ವಹಿಸಿದ್ದರು. ಶಾಲೆಯ ಕಾರ್ಯನಿರ್ವಾಹಕ ಸಂಚಾಲಕರುಗಳಾದ ಅಬ್ದುಲ್ ಅಜೀಜ್ ಮಾನವಿಕರ್ ಮತ್ತು ಸೈಯದ್ ಇಮಾಮ ಹುಸೇನ್ ಸಿಂದೋಗಿ , ಮುಖ್ಯ ಶಿಕ್ಷಕ ಮೊಹಮ್ಮದ್ ಅಜೀಜ್ ರೆವಡಿ, ಮತ್ತಿತರರು ಪಾಲ್ಗೊಂಡಿದ್ದರು.
ಇದೇ ವೇಳೆ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು ನಂತರ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ ಛಿಸಡಗರ ಸಂಭ್ರಮದಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು ಅಪಾರ ಸಂಖ್ಯೆಯಲ್ಲಿ ಪಾಲಕರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 