ಶ್ರೀ ಬಂಡಿ ಬಸವೇಶ್ವರ ದೇವಸ್ಥಾನದಲ್ಲಿ ಅನ್ನ ಸಂತರೆ​‍್ಣ

ಶ್ರೀ ಬಂಡಿ ಬಸವೇಶ್ವರ ದೇವಸ್ಥಾನದಲ್ಲಿ ಅನ್ನ ಸಂತರೆ​‍್ಣ  Annasantarpane at Sri Bandi Basaveshwara Temple


ತಾಳಿಕೋಟಿ, ಸೆ. 8: ಶ್ರಾವಣ ಮಾಸದ ಕೊನೆಯ ಸೋಮವಾರದ ನಿಮಿತ್ತ ಶ್ರೀ ಬಂಡಿ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅನ್ನ ಸಂತರೆ​‍್ಣ ಕಾರ್ಯಕ್ರಮ ಸೋಮವಾರ ಭಕ್ತಿಭಾವದಿಂದ ಜರುಗಿತು.  

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ದೇವಸ್ಥಾನ ಸಮಿತಿಯ ಮುಖ್ಯಸ್ಥರು ಹಾಗೂ ತಾಳಿಕೋಟಿ ಗೌಡಕಿ ಮನೆತನದ ಸದಸ್ಯರಾದ ಶರಣಗೌಡ ಸಂಗನಗೌಡ ಪಾಟೀಲ, ಕಳೆದ ಒಂಬತ್ತು ವರ್ಷಗಳಿಂದ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಅನ್ನ ಸಂತರೆ​‍್ಣ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.  

“ಈ ಬಾರಿ ಸುಮಾರು ಒಂದು ಸಾವಿರ ಜನರಿಗೆ ಸಾಕಾಗುವಷ್ಟು ಪುಲಾವ್ ಹಾಗೂ ಕೇಸರಿ ಬಾತ್ ಸಿದ್ಧಪಡಿಸಲಾಗಿದೆ. ಎಲ್ಲರೂ ಶಾಂತಿಯುತವಾಗಿ ಪ್ರಸಾದ ಸ್ವೀಕರಿಸಿ ತೆರಳಬೇಕು,” ಎಂದು ಅವರು ಮನವಿ ಮಾಡಿದರು.  

ಅನ್ನ ಸಂತರೆ​‍್ಣ ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಬಾಪುಗೌಡ ಸಂಗನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಅಶೋಕಗೌಡ ಪಾಟೀಲ, ಜೆಡಿಎಸ್ ಜಿಲ್ಲಾ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಮಾದೇವಿ ಪಾಟೀಲ, ರಾಜುಗೌಡ ಪಾಟೀಲ, ಶಿವಪ್ಪ ಪೂಜಾರಿ, ಬಿ. ಎಸ್‌. ಜಿರಂಗಾಡೆ, ಮೆಹಬೂಬಸಾಬ್ ಡೋಣಿ, ಅಪ್ಪುಗೌಡ ಪಾಟೀಲ, ಪವನಗೌಡ ಪಾಟೀಲ, ಅನುಷ್ ಪಾಟೀಲ, ಆಕಾಶ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.