ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡರೆ ಯಾವ ರೋಗಗಳು ಬರುವುದಿಲ್ಲ: ರಂಜಾನ ದರ್ಗಾ
ಧಾರವಾಡ 25: ಎಲ್ಲ ರೋಗಗಳಿಗೆ ಮೂಲ ಕಾರಣ ಮನಸ್ಸು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡರೆ ಯಾವ ರೋಗಗಳು ಬರುವುದಿಲ್ಲ ಎಂದು ಹಿರಿಯ ಚಿಂತಕರಾದ ರಂಜಾನ ದರ್ಗಾ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಅನ್ನಪೂರ್ಣಮ್ಮ ಸಿದ್ಧಲಿಂಗಶಾಸ್ತ್ರೀ ಹಿರೇಮಠ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಆರೋಗ್ಯ ಸೇವಾರತ್ನ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ವೈದ್ಯ ವೃತ್ತಿ ಅತ್ಯಂತ ಪೂಜ್ಯ ಭಾವನೆಯುಳ್ಳದ್ದು. ವೈದ್ಯರಾದವರು ರೋಗಿಯ ಜೊತೆಗೆ ಸೌಜನ್ಯದಿಂದ ವರ್ತಿಸಿದರೆ ಅರ್ಧ ರೋಗ ಕಡಿಮೆಯಾದಂತೆ, ಡಾ. ಶಿವಯೋಗಿ ಫಕ್ಕೀರಶೆಟ್ಟರ ಓರ್ವ ಸೇವಾನಿಷ್ಠ ಕಾರ್ಯತತ್ಪರ ವೈದ್ಯರು. ಶರಣರ ವಚನಗಳಲ್ಲಿ ರೋಗ ಶಮನ ಮಾಡುವ ಶಕ್ತಿ ಇದೆ ಎಂದು ಹೇಳಿದರು
ಪ್ರಶಸ್ತಿ ಪುರಸ್ಕೃತರಾದ ಇನಾಂಹೊಂಗಲದ ಖ್ಯಾತ ವೈದ್ಯರಾದ ಡಾ. ಶಿವಯೋಗಿ ಫಕ್ಕೀರಶೆಟ್ಟರ ಮಾತನಾಡಿ, ಆರೋಗ್ಯವಾದ ದೇಹದಲ್ಲಿ ಮಾತ್ರ ಆರೋಗ್ಯಕರ ಮನಸ್ಸು ಇರುತ್ತದೆ. ವೈದ್ಯರಾದವರು ವೈಯಕ್ತಿಕ ಸಮಸ್ಯೆ ಬದಿಗಿರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ನನ್ನ 45 ವರ್ಷಗಳ ಜೀವಮಾನದ ಸಾಧನೆಗೆ ಸಿಕ್ಕ ಪ್ರಶಸ್ತಿಯು ಸರ್ಕಾರ ನೀಡುವ ಪ್ರಶಸ್ತಿಗಿಂತ ಮೌಲ್ಯವಾದದ್ದು ಎಂದು ಭಾವಪೂರ್ಣವಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ವೈದ್ಯರಾದವರಿಗೆ ಹಣಕ್ಕಿಂತ ಸೇವಾ ಮನೋಭಾವನೆ ಅಗತ್ಯ. ವೈದ್ಯರಾದವರಿಗೆ ಇಂದು ಅನೇಕ ಒತ್ತಡಗಳಿದ್ದು, ಅವರೂ ಸಹ ಅನೇಕ ಜೀವನಶೈಲಿ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಇಂದು ವೈದ್ಯಕೀಯ ವೃತ್ತಿ ವ್ಯಾಪಾರೀಕರಣವಾಗುತ್ತಿರುವುದು ವಿಷಾದನೀಯ. ರೋಗಿಗಳಿಗೂ ವೈದ್ಯರಲ್ಲಿ ನಂಬಿಕೆ ಇದ್ದಾಗ ರೋಗ ಗುಣಮುಖವಾಗುತ್ತದೆ. ಡಾ. ಶಿವಯೋಗಿ ಫಕ್ಕೀರಶೆಟ್ಟರ ಓರ್ವ ನುರಿತ ಅನುಭವಿ ವೈದ್ಯರು. ವೈದ್ಯ ವೃತ್ತಿ ಕಾಯಕ ನಿಷ್ಠೆ ಇಂದ ಮಾಡಿದ್ದಾರೆ ಎಂದರು.
ಡಾ. ಶಿವಯೋಗಿ ಫಕ್ಕೀರಶೆಟ್ಟಿ ಅವರಿಗೆ ಆರೋಗ್ಯ ಸೇವಾ ರತ್ನ ಪ್ರಶಸ್ತಿ ನೀಡಿ ಗಣ್ಯರು ಗೌರವಿಸಿದರು.
ಬಸವಪ್ರಭು ಹೊಸಕೇರಿ ಸ್ವಾಗತಿಸಿದರು. ಡಾ. ಮಹೇಶ ಧ. ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ಪರಿಚಯಿಸಿದರು. ಡಾ. ಜಿನದತ್ತ ಹಡಗಲಿ ಪ್ರಶಸ್ತಿ ಫಲಕ ಓದಿದರು. ಶಂಕರ ಕುಂಬಿ ನಿರೂಪಿಸಿದರು. ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಸತೀಶ ತುರಮರಿ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ವಿ.ಆರ್. ಪಟ್ಟಣಶೆಟ್ಟಿ, ಗುರು ಕಲ್ಮಠ, ಶ್ರೀನಿವಾಸ ಪಾಟೀಲ, ಡಾ. ವಿನೋದ ಫಕ್ಕೀರಶೆಟ್ಟಿ, ಡಾ. ಪ್ರವೀಣಕುಮಾರ ಫಕ್ಕೀರಶೆಟ್ಟಿ, ರಾಜಶೇಖರ ಉಪ್ಪಿನ, ಶೇಖರ ಕವಳಿ, ಅಶೋಕ ಶೆಟ್ಟರ, ವೀರೇಶ ಕೆಲಗೇರಿ, ಶಂಕರ ಬೆಟಗೇರಿ ಸೇರಿದಂತೆ ಇನಾಂಹೊಂಗಲದ ಗುರು-ಹಿರಿಯರು, ಹಿರೇಮಠ ಪರಿವಾರದವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 