ಅಣ್ಣಪ್ಪಾ ಗುರುಸಿದ್ದಪ್ಪಗೌಡ ಪಾಟೀಲ ದೇಹದಾನ

ಅಣ್ಣಪ್ಪಾ ಗುರುಸಿದ್ದಪ್ಪಗೌಡ ಪಾಟೀಲ ದೇಹದಾನ Annappa Gurusiddappa Gowda Patil's body was sacrificed

ವಿಜಯಪುರ 05: ಜಿಲ್ಲೆಯಲ್ಲಿ ದೇಹದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದ್ದು, ಏಪ್ರಿಲ್ 30 ರಂದು ನಿಧನರಾದ ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಅಣ್ಣಪ್ಪಾ ಗುರುಸಿದ್ದಪ್ಪಗೌಡ ಪಾಟೀಲ(73) ಇಚ್ಛೆಯಂತೆ ಕುಟುಂಬ ಸದಸ್ಯರು ಪಾರ್ಥಿವ ಶರೀರವನ್ನು ಬಿ.ಎಲ್‌.ಡಿ.ಇ ಆಸ್ಪತ್ರೆಗೆ ದಾನ ಮಾಡಿದ್ದಾರೆ. 

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಸ್ಪತ್ರೆಯ ಅಂಗರಚನಾಶಾಸ್ತ್ರವಿಭಾಗದ ಮುಖ್ಯಸ್ಥ ಡಾ. ಆರ್‌. ಎಸ್‌. ಬುಲಗೌಡ ಅವರು ಪಾರ್ಥಿವ ಶರೀರರ ಸ್ವೀಕರಿಸಿ ಕುಟುಂಬ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.