ಕಕ್ಕೇರಿ ಬಿಷ್ಟಾದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ತಡೆ ಸಂಪೂರ್ಣ ಯಶಸ್ವಿ
Animal sacrifice ban at Kakkeri Bishtadevi fair completely successful,
ಬೆಳಗಾವಿ 04: ಜಿಲ್ಲೆಯ ಖಾನಾಪೂರ ತಾಲೂಕಿನ ದಿನಾಂಕ 1 ಮತ್ತು 2 ಅಕ್ಟೋಬರ್ 2025 ರಂದು ನಡೆದ ಆಯುಧ ಪೂಜೆ ಮತ್ತು ವಿಜಯದಶಮಿ ಸಂಧರ್ಬದಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯ ಕಕ್ಕೇರಿಯಲ್ಲಿ ನಡೆದ ಶರಣ ದೋಹಾರ ಕಕ್ಕಯ್ಯನವರ ಧರ್ಮಪತ್ನಿ ಬಿಷ್ಟಾದೇವಿ ತಾಯಿಯ ಜಾತ್ರೆಯಲ್ಲಿ ಈ ಹಿಂದಿನ ವರ್ಷಗಳಂತೆ ಈ ವರ್ಷವೂ ಸಾವಿರಾರು ಪ್ರಾಣಿ ಬಲಿ ತಡೆ ಸಂಪೂರ್ಣ ಯಶಸ್ವಿ ಆಗಿದ್ದು ಇದೊಂದು ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಪಶು ಪ್ರಾಣಿಬಲಿ ನಿರ್ಮೂಲನ ಜಾಗೃತಿ ಮಹಾಸಂಘ ಹಾಗೂ ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಈ ಯಶಸ್ವಿಗೆ ಕಾರಣರಾದ ಕರ್ನಾಟಕ ಸರ್ಕಾರ, ಬೆಳಗಾವಿ ಜಿಲ್ಲಾಡಳಿತ, ಖಾನಾಪುರ ತಾಲೂಕು ಆಡಳಿತ ಪೊಲೀಸ್ ಇಲಾಖೆ, ಪಶುಸಂಗೋಪನೆ, ಕಂದಾಯ ಹಾಗೂ ಪಂಚಾಯತಿ ಇಲಾಖೆ, ಬಿಷ್ಟಾದೇವಿ ಆಡಳಿತ ಮಂಡಳಿ, ಭಕ್ತ ಸಮೂಹ ಹಾಗೂ ಸುದ್ದಿ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕ ಪ್ರಾಣಿಬಲಿಗಳ ಪ್ರತಿಬಂಧಕ ಕಾಯ್ದೆ ಹಾಗೂ ಕರ್ನಾಟಕ ಹೈ ಕೋರ್ಟ್ ಆದೇಶದ ಅನ್ವಯ ಕಕ್ಕೇರಿ ಬಿಷ್ಟಾದೇವಿ ಜಾತ್ರೆಯಲ್ಲಿ ನಡೆಯುವ ಸಹಸ್ರಾರು ಪ್ರಾಣಿಗಳ ಬಲಿ ಹಾಗೂ ದೇವಾಲಯದ ಮೇಲ್ಭಾಗಕ್ಕೆ ಪ್ರಾಣಿಗಳ ತೂರಾಟವನ್ನು ತಡೆಯಬೇಕೆಂದು ಈ ವರ್ಷವೂ ದಯಾನಂದ ಸ್ವಾಮೀಜಿ ಅವರು ಸಂಭಂದ ಪಟ್ಟವರಿಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ ಮುಂಜಾಗ್ರತೆ ಕ್ರಮವಾಗಿ ವ್ಯಾಪಕ ಪ್ರಚಾರ ಮತ್ತು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿತ್ತು. ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಮತ್ತು ಖಕ ಭೀಮಾ ಶಂಕರ್ ಗುಳೇದ, ಆಙಖಕ ಆಡಿ ವೀರಯ್ಯ ಹಿರೇಮಠ್ ಇವರ ನಿರ್ದೇಶನದಂತೆ ಖಾನಾಪುರ ತಾಲೂಕು ತಹಶೀಲ್ದಾರ್ ದುಂಡಪ್ಪ ಕೋಮಾರ, ಉಡಿಚಿಜಜ 2 ತಹಶೀಲ್ದಾರ್ ಖ.ತಂಗೋಳಿ ರವರು, ಉಪ ತಹಶೀಲ್ದಾರ್ ರೋಹಿತ್ ಬಡಚಿಕರ, ನಂದಗಡ ಪೊಲೀಸ್ ಇನ್ಸ್ಪೆಕ್ಟರ್ ಖಅ ಪಾಟೀಲ್ ಮತ್ತು ಕಖಋ - ಖಖ ಸಪಾಟೆ ಹಾಗೂ ಖಾನಾಪುರದ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾಕ್ಟರ್ ಮನೋಹರ್ ದಾದವಿ, ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ಉಮೇಶ್ ಹೊಸೂರು ಸಂಬಂಧಪಟ್ಟ ಇತರ ಅಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಮತ್ತು ಪಂಚಾಯತಿ ಇಲಾಖೆಯ ಸುಮಾರು 200ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಈ ಪ್ರಾಣಿಬಲಿ ತಡೆಗೆ ಸ್ಥಳದಲ್ಲೇ ಬಿಡುಬಿಟ್ಟು ಹಗಲು ರಾತ್ರಿ ಶ್ರಮಿಸಿದ್ದರು.
ದಯಾನಂದ ಸ್ವಾಮೀಜಿ ಮತ್ತು ಅವರ ತಂಡ ಅಹಿಂಸಾ ಪ್ರಾಣಿದಯಾ ಸಂದೇಶ ಯಾತ್ರೆಯ ಮೂಲಕ ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮ, ನಗರಗಳಲ್ಲಿ, ಕಕ್ಕೇರಿ ಮತ್ತು ಸುತ್ತ ಮುತ್ತಲಿನ ಊರುಗಳಲ್ಲಿ ಪ್ರಾಣಿ ಬಲಿ ತಡೆ ಕುರಿತು ಜಾಗೃತಿ ಮೂಡಿಸಿತ್ತು, ಪರಿಣಾಮ ಪ್ರಾಣಿಗಳ ಬಲಿಗೆ ಬದಲಾಗಿ ಭಕ್ತರು ಸಾವಿರಾರು ತೆಂಗಿನ ಕಾಯಿ ಹೊಡೆದು ಪೂಜೆ ಸಲ್ಲಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 