ರಾಫೆಲ್ ಡೀಲ್ ಬಗ್ಗೆ ರಾಹುಲ್ಗೆ ಅನಿಲ್ ಅಂಬಾನಿ ಪತ್ರ


ಮುಂಬೈ 20: ರಾಫೆಲ್ ಡೀಲ್ ನಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಿಲಾಯನ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಅನಿಲ್ ಅಂಬಾನಿ ಪತ್ರ ಬರೆದಿದ್ದಾರೆ. "ಪಟ್ಟಭದ್ರ ಹಿತಾಸಕ್ತಿಗಳು, ಕಾಪರ್ೊರೇಟ್ ವಿರೋಧಿಗಳು ರಾಫೆಲ್ ಜೆಟ್ ಖರೀದಿ ಹಗರಣದ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ದಾರಿ ತಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.  ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮುಂದುವರೆದ ವೈಯಕ್ತಿಕ ವಾಗ್ದಾಳಿಗಳಿಂದ ನೋವಾಗಿದೆ ಎಂದೂ ರಾಹುಲ್ ಗಾಂಧಿಗೆ ಬರೆದಿರುವ ಪತ್ರದಲ್ಲಿ ಅಂಬಾನಿ ಹೇಳಿದ್ದಾರೆ.  

ತಪ್ಪು ಮಾಹಿತಿ ಪಡೆದು ರಾಹುಲ್ ಗಾಂಧಿ ವೈಯಕ್ತಿಕ ವಾಗ್ದಾಳಿ ನಡೆಸಿರುವುದು ದುರದೃಷ್ಟಕರ, ಇದರಿಂದಾಗಿ ನೋವಾಗಿದೆ ಎಂದು ಅನಿಲ್ ಅಂಬಾನಿ ಪತ್ರದಲ್ಲಿ ಬರೆದಿರುವುದಾಗಿ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹೇಳಿದೆ. ರಫ್ತು ಹಾಗೂ ಕೆಲಸದ ಹಂಚಿಕೆಯಲ್ಲಿ ರಿಲಾಯನ್ಸ್ ಸಂಸ್ಥೆಯ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಿರುವ ಅಂಬಾನಿ, ರಾಫೆಲ್ ಫೈಟರ್ ಜೆಟ್ ಗಳನ್ನು ರಿಲಾಯನ್ಸ್ ಅಥವಾ ಡಸ್ಸಾಲ್ಟ್ ರಿಲಯನ್ಸ್ ಜಾಯಿಂಟ್ ವೆಂಚರ್ ನಲ್ಲಿ ಉತ್ಪಾದನೆ ಮಾಡಲಾಗುತ್ತಿಲ್ಲ ಎಂದು ಹೇಳಿದ್ದಾರೆ.  

ಫ್ರೆಂಚ್ ನ 36 ರಾಫೆಲ್ ಜೆಟ್ ಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಕರ್ಾರ ಅಧಿಕೃತ ಘೋಷಣೆ ಮಾಡುವುದಕ್ಕೂ ಕೇವಲ 10 ದಿನಗಳ ಮುಂಚೆ ರಿಲಾಯನ್ಸ್ ಡಿಫೆನ್ಸ್ ಸಂಸ್ಥೆ ಅಸ್ಥಿತ್ವಕ್ಕೆ ಬಂದಿತ್ತು ಎಂಬ ರಾಹುಲ್ ಗಾಂಧಿ ಅವರ ಆರೋಪಕ್ಕೂ ಸ್ಪಷ್ಟನೆ ನೀಡಿರುವ ಅನಿಲ್ ಅಂಬಾನಿ,  ರಾಹುಲ್ ಗಾಂಧಿ ಆರೋಪ ಸಂಪೂರ್ಣ ಸುಳ್ಳಾಗಿದ್ದು, ರಕ್ಷಣಾ ಉತ್ಪಾದನೆ ಕ್ಷೇತ್ರಕ್ಕೆ ರಿಲಾಯನ್ಸ್ ಸಂಸ್ಥೆ ತೆರೆದುಕೊಳ್ಳುವುದರ ಬಗ್ಗೆ 2014  ರ ಡಿಸೆಂಬರ್ ಹಾಗೂ 2015 ರ ಜನವರಿ ತಿಂಗಳಲ್ಲೇ ಘೋಷಣೆ ಮಾಡಿತ್ತು, 2015  ರ ಫೆಬ್ರವರಿ ತಿಂಗಳಾಲ್ಲಿ ಭಾರತೀಯ ಸ್ಟಾಕ್ ಎಕ್ಸ್ ಚೇಂಜ್ ಗೂ ಈ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಎಂದು ಹೇಳಿದ್ದಾರೆ.