ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಿಸಿ ಮಾನವೀಯತೆ ಮೆರೆದ ಅಂಗನವಾಡಿ ಶಿಕ್ಷಕಿ
Anganwadi teacher shows humanity by distributing free school bags to children
ರಾಯಬಾಗ್ ಸೆ. 4: ದೇವರು ನೀಡಿದ ಸಂಪತ್ತಿನಲ್ಲಿ ಒಂದು ಭಾಗವನ್ನು ಅಗತ್ಯವಿರುವವರಿಗೆ ದಾನ, ಸಹಾಯ ಹಾಗೂ ಪರೋಪಕಾರದ ರೂಪದಲ್ಲಿ ನೀಡುವುದು ಉತ್ತಮ ಕಾರ್ಯ ಎಂಬುದನ್ನು ಮನಗಂಡು ಅಂಗನವಾಡಿ ಶಿಕ್ಷಕಿಯೊಬ್ಬರು ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ರಾಯಬಾಗ್ ತಾಲ್ಲೂಕಿನ ಕಪ್ಪಲಗುಡ್ಡಿ ಗ್ರಾಮದ ಎಸ್ಸಿ ಕೇರಿ ಅಂಗನವಾಡಿ ಕೇಂದ್ರ ಸಂಖ್ಯೆ 4ರ ಶಿಕ್ಷಕಿ ಬಸಮ್ಮ ಶ್ರೀಶೈಲಯ್ಯ ಹಿರೇಮಠ ಅವರು ತಮ್ಮ ಮಾವ ದಿ. ಮಹಾದೇವಯ್ಯ ಗುರುಸಿದ್ದಯ್ಯ ಹಿರೇಮಠ ಅವರ ಮೂರನೇ ಪುಣ್ಯಸ್ಮರಣೆಯ ಅಂಗವಾಗಿ ಸೆ. 3ರಂದು ಅಂಗನವಾಡಿ ಕೇಂದ್ರದ 25ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಹಾಗೂ ಬಡ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ಗಳನ್ನು ವಿತರಿಸಿದರು.
ಅಂಗನವಾಡಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿಯ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಚುನಾಯಿತ ಜನಪ್ರತಿನಿಧಿಗಳು ಹಾಗೂ ಮಕ್ಕಳ ಪಾಲಕರಲ್ಲಿ ಮನವಿ ಮಾಡಿದ್ದರೂ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ, ತಮ್ಮ ಶಾಲೆಯ ಮಕ್ಕಳಿಗೆ ಏನಾದರೂ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಈ ಕಾರ್ಯ ಕೈಗೊಂಡಿರುವುದಾಗಿ ಶಿಕ್ಷಕಿ ಬಸಮ್ಮ ಹಿರೇಮಠ ತಿಳಿಸಿದರು.
ತಮ್ಮ ಪತಿ ಶ್ರೀಶೈಲಯ್ಯ ಹಿರೇಮಠ ಅವರ ಸಲಹೆಯಂತೆ ಈ ಸೇವಾ ಕಾರ್ಯ ಕೈಗೊಂಡಿರುವುದಾಗಿ ಅವರು ಹೇಳಿದರು. ಗ್ರಾಮದ ಹಿರಿಯರು, ವಾರ್ಡ್ನ ಮಾಜಿ ಜನಪ್ರತಿನಿಧಿಗಳು, ಅಂಗನವಾಡಿ ಸಹಾಯಕಿ ಮಹಬೂಬಿ ನದಾಫ್, ಮಕ್ಕಳ ಪಾಲಕರಾದ ಮಹೇಂದ್ರ ಪೂಜಾರಿ, ಅಶೋಕ ತೈಕಾರ, ಲಕ್ಷ್ಮವ್ವ ಮೇತ್ರಿ, ಪಾರ್ವತಿ ತೈಕಾರ, ಲಕ್ಷ್ಮವ್ವ ತೊಂಡೆಕಟ್ಟಿ, ಸುನಿತಾ ತೈಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 