ಆನೆಗೊಂದಿ ಉತ್ಸವ : ಸಾಹಸ ರಾಕ್ ಕ್ಲೈಮಿಂಗ್ ಪ್ರದರ್ಶನ
ಕೊಪ್ಪಳ 10 : ಆನೆಗೊಂದಿ ಉತ್ಸವ-2020ರ ನಿಮಿತ್ತ ನಫಾಸನ ಸಂಸ್ಥೆ ವತಿಯಿಂದ ಸಾಹಸ ರಾಕ್ ಕ್ಲೈಮಿಂಗ್ ಪ್ರದರ್ಶನ ನಡೆಯಿತು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ನಿಮಿತ್ತ ಜ. 09 ಮತ್ತು 10 ರಂದು ನಡೆದ ಸಾಹಸ ರಾಕ್ ಕ್ಲೈಮಿಂಗ್ ಪ್ರದರ್ಶನಕ್ಕೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಋಷಿಮುಖ ಪರ್ವದಲ್ಲಿ ಗುರುವಾರದಂದು (ಜ.9) ಚಾಲನೆ ನೀಡಿದರು.
ಆನೆಗೊಂದಿಯ ಶ್ರೀ ಕೇಷ್ಣದೇವರಾಯ ವೇದಿಕೆ ರಸ್ತೆಯ ಪಕ್ಕದಲ್ಲಿ ನಡೆದ ಸಾಹಸ ರಾಕ್ ಕ್ಲೈಮಿಂಗ್ ಪ್ರದರ್ಶನದಲ್ಲಿ ರ್ಯಾಪ್ಲಿಂಗ್ ಪೈಪ್ಲ್ಯಾಡರ್, ಜಿಫ್ಲೈನ್ ಕೃತಕ ಗೊಡೆ, ಆರ್ಚರಿ, ಟಾರ್ಗೆಟ್ ಶ್ಯೂಟಿಂಗ್, ಆಲ್ಪೆನ್ನೆಟ್ ಕೃತಕ ಏಣಿ ಸೇರಿದಂತೆ ವಿವಿಧ ಪ್ರದರ್ಶನಗಳು ನಡೆದವು. ಈ ಪ್ರದರ್ಶನದಲ್ಲಿ ಭಗವಹಿಸಲು ಮಕ್ಕಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು, ವಿವಿಧ ಸಾಹಸಿ ಪ್ರದರ್ಶನಗಳಲ್ಲಿ ಭಾಗವಹಿಸಿದ್ದು, ವಿಶೇಷವಾಗಿತ್ತು.
ನಫಾಸನ ಸಂಸ್ಥೆಯ ಸಹಾಯಕ ನಿರ್ದೇಶಕ ವಿರೇಶ ಎಂ. ಹಾಗೂ ಅವರ ಸಂಸ್ಥೆಯ ಸಾಹಸಿ ರಾಕ್ ಕ್ಲೈಮಿಂಗ್ ಪ್ರದರ್ಶನವನ್ನು ನಡೆಸಿಕೊಟ್ಟರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 