ಬಿ ಎಲ್ ಓಗಳಿಂದ ಮನೆ ಮನೆಗೆ ವಿತರಿಸಲಾದ ಗಣತಿ ನಮೂನೆ (ಎನ್ಯುಮರೇಶನ್ ಫಾರ್ಮ್ ) ಭರ್ತಿ ಮಾಡಲು ತಿಳುವಳಿಕೆಯ ಅವಲೋಕನ
An overview of instructions for filling out the enumeration forms distributed door-to-door by BLOs
ಲೋಕದರ್ಶನ ವರದಿ
ಗದಗ 13: ರಾಜ್ಯದಲ್ಲಿ ಈಗಾಗಲೇ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್ ) ಗೆ ಸಂಬಂಧಪಟ್ಟಂತೆ ಭೂತ ಮಟ್ಟದ ಅಧಿಕಾರಿಗಳು ಬಿ ಎಲ್ ಓ ಗಳು ಮತದಾರರ ಮನೆ ಮನೆಗೆ ತೆರಳಿ ಎಸ್ ಐ ಆರ್ ಎನ್ಯುಮರೇಶನ್ ಅರ್ಜಿ ನಮೂನೆಗಳನ್ನು ವಿತರಣೆ ಮಾಡಿ ಮತದಾರರಿಂದ ಅದನ್ನು ಭರ್ತಿ ಮಾಡಿಸಿ ಗಣಕೀಕರಣ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿರುವರು.
ಆದರೆ ಮತದಾರರ ಪ್ರತಿಯೊಂದು ಮನೆ ಮನೆಗೂ ವಿತರಿಸಲಾದ ಎನ್ಯುಮರೇಶನ್ ಅರ್ಜಿ ನಮೂನೆಗಳನ್ನು ಭರ್ತಿ ಮಾಡುವ ಕುರಿತು ಗೊಂದಲಮಯವಾಗಿ ದಿಕ್ಕು ತೋಚದಾಗಿರುತ್ತದೆ. ಈ ಒಂದು ವಿಷಯದಲ್ಲಿ ಅತ್ಯುನ್ನತ ಶಿಕ್ಷಣ ಪಡೆದ ಸುಶೀಕ್ಷಿತರೆ ಸಮರ್ಕ ಮಾಹಿತಿಯ ಕೊರತೆಯಲ್ಲಿರುವಾಗ ಇನ್ನೂ ಅನಕ್ಷರಸ್ತರು ಮತ್ತು ಗ್ರಾಮೀಣ ಭಾಗದ ಅವಿದ್ಯಾವಂತ ಮತದಾರರ ಪರಸ್ಥಿತಿಯು ಹೇಳತೀರದಾಗಿದೆ.
ಬಿ ಎಲ್ ಓಗಳಿಂದ ಮನೆ ಮನೆಗೆ ವಿತರಿಸಲಾದ ಗಣತಿ ನಮೂನೆ (ಎನ್ಯುಮರೇಶನ್ ಫಾರ್ಮ್ ) ಭರ್ತಿ ಮಾಡುವ ಮುನ್ನ ಅರ್ಜಿಯ ಒಂದು ನಕಲು ಪ್ರತಿ (ಜೆರಾಕ್ಸ್ ) ಮಾಡಿಕೊಂಡು ಬಿ ಎಲ್ ಓ ಗಳಿಂದ ಅಥವಾ ಆನ್ ಲೈನ್ ನಲ್ಲಿ ಮಾಹಿತಿ ಪಡೆದು ತಮ್ಮ ಹೆಸರು 2002 ರ ಮತದಾರರ ಪಟ್ಟಿಯಲ್ಲಿ ಇದ್ದರೆ 41 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಹಿಂದಿನ ವಿಶೇಷ ಸಮಗ್ರ ಪರಿಷ್ಕರಣೆಯ ಮತದಾರರ ಪಟ್ಟಿಯಲ್ಲಿನ ಮತದಾರರ ವಿವರಗಳ ಕಾಲಂ ನಲ್ಲಿ 2002 ರ ಪಟ್ಟಿಯಲ್ಲಿ ಇದ್ದಂತೆ ತಮ್ಮ ಹೆಸರು,ಆದೇ ಮತದಾರರ ಗುರುತಿನ ಚೀಟಿ ಸಂಖ್ಯೆ,ಸಂಬಂಧಿಯ ಹೆಸರು, ಅವರೊಂದಿಗೆ ನಿಮ್ಮ ಸಂಬಂಧ ಅಂದರೆ ತಂದೆ ಅಥವಾ ಗಂಡ, ಅಂದಿನ ಮತದಾರನ ಜಿಲ್ಲೆ, ರಾಜ್ಯ ಹಾಗೂ ವಿಧಾನಸಭಾ ಕ್ಷೇತ್ರದ ಹೆಸರು ಸಂಖ್ಯೆ,ಭಾಗದ ಸಂಖ್ಯೆ ಕ್ರಮ ಸಂಖ್ಯೆ ನಮೂದಿಸಬೇಕು.
ಒಂದು ವೇಳೆ 2002 ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದರೆ ಹಾಗೂ 41 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತದಾರರು ಹಿಂದಿನ ವಿಶೇಷ ನಮಗ್ರ ಪರಿಷ್ಕರಣೆಯ ಮತದಾರರ ಪಟ್ಟಿಯಲ್ಲಿನ ಮತದಾರರ ಸಂಬಂಧಿಯ ವಿವರಗಳಾದ ಹೆಸರು, ಮತದಾರರ ಭಾವಚಿತ್ರ ಗುರುತಿನ ಚೀಟಿ ಸಂಖ್ಯೆ (ಲಭ್ಯವಿದ್ದಲ್ಲಿ).ಸಂಬಂಧಿಯ ಹೆಸರು ಅಂದರೆ ( ನಿಮ್ಮ ಹೆಸರು ) ಅವರೊಂದಿಗೆ ನಿಮ್ಮ ಸಂಬಂಧ, ಜಿಲ್ಲೆ,ರಾಜ್ಯ, ವಿಧಾನ ಸಭಾ ಕ್ಷೇತ್ರದ ಹೆಸರು,ವಿಧಾನ ಸಭಾ ಕ್ಷೇತ್ರದ ಸಂಖ್ಯೆ/ಹೆಸರು ಭಾಗ ಸಂಖ್ಯೆ,ಕ್ರಮ ಸಂಖ್ಯೆಯನ್ನು ನಮೂದಿಸಬೇಕು.
ಅದರಂತೆ ಕೊನೆಯದಾಗಿ ನಿಮ್ಮ (ಮತದಾರ )ಜನ್ಮ ದಿನಾಂಕ ತಾರೀಖು ತಿಂಗಳು ವರ್ಷ ವನ್ನು ಚೌಕವಾದ ಕಾಲಂ ನಲ್ಲಿ ಭರ್ತಿ ಮಾಡಬೇಕು. ಆಧಾರ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ತಂದೆ ಅಥವಾ ಪೋಷಕರ ಹೆಸರು, ಅವರ ಗುರುತಿನ ಚೀಟಿ ಸಂಖ್ಯೆ ಲಭ್ಯವಿದ್ದರೆ ತಾಯಿಯ ಹೆಸರು ಅವರ ಗುರುತಿನ ಚೀಟಿ ಸಂಖ್ಯೆ ಲಭ್ಯವಿದ್ದರೆ,ಸಂಗಾತಿಯ ಹೆಸರು ಅವರ ಗುರುತಿನ ಚೀಟಿ ಸಂಖ್ಯೆ ಲಭ್ಯವಿದ್ದರೆ ಇಷ್ಟನ್ನು ಭರ್ತಿ ಮಾಡಿ ತಮ್ಮ ಸಹಿ ಅಥವಾ ಎಡಗೈ ಹೆಬ್ಬಟ್ಟಿನ ಗುರುತು ಹಾಕಿ ತಾರೀಕು ನಮೂದಿಸಿ ನಿಮ್ಮ ಸ್ಥಳೀಯ ಬಿ ಎಲ್ ಓ ರವರಿಗೆ ತಲುಪಿಸಿದರೆ ತಮ್ಮ ಎಸ್ ಐ ಆರ್ ಪ್ರಕ್ರಿಯೆಯು ಪರಿಪೂರ್ಣವಾಗಿತ್ತದೆ.
ಆದರೂ ತಮಗೆ ಗೊಂದಲ ಉಂಟಾದರೆ ತಮ್ಮ ಬಿ ಎಲ್ ಓ ಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಭರ್ತಿ ಮಾಡಿಸಿಕೊಳ್ಳಬಹುದು. ಆದುದರಿಂದ ಸಮಸ್ತ ಮತದಾರ ಭಾಂಧವರು ಯಾವುದೇ ಗೊಂದಲಗಳಿಗೆ ಒಳಗಾಗದೇ ನಿರ್ಭಯವಾಗಿ ತಮ್ಮ ಅಮೂಲ್ಯವಾದ ಮತದಾರರ ಪಟ್ಟಿಯ ವಿಶೇಷ ನಮಗ್ರ ಪರಿಷ್ಕರಣೆಯ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದಂತಾಗುತ್ತದೆ. ಎಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಸಮಸ್ತ ಮತದಾರರಲ್ಲಿ ವಿನಂತಿಸಿರುತ್ತಾರೆ.
ಶಾಸಕರ ಆಮಿಷ ಆರೋಪದ ಕಾನೂನು ನೋಟಿಸ್ ಬಳಿಕ ಬಿಜೆಪಿ ನ್ಯಾಯಾಲಯದ ಮೂಲಕ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪ
ಮಧುರೈ ಸಮೀಪ ಓಮ್ನಿ ಬಸ್–ಟಿಎನ್ಎಸ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಐವರು ಸಾವು, 42 ಮಂದಿಗೆ ಗಾಯ
ಆರೋಪಿತ ರೌಡಿ ಶೀಟರ್ ಜನ್ಮದಿನಾಚರಣೆಯಲ್ಲಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಭಾಗಿ; ಕರ್ನಾಟಕದಲ್ಲಿ ರಾಜಕೀಯ ವಿವಾದ
ಮಾಹಿತಿ ಹಕ್ಕು ಕಾಯ್ದೆ ದುರ್ಬಲಕ್ಕೆ ಯತ್ನ: ಆಯುಕ್ತರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಕಾನೂನು ಹೋರಾಟ, ಗಾಡಾದ ಎಚ್ಚರಿಕೆ
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ 