ರಾಜ್ಯದಲ್ಲಿ ಹೆಚ್ಚುತ್ತಿರುವ ಮಕ್ಕಳ ಅಸಹಜ ಸಾವಿನ ಕುರಿತು ತನಿಖೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಕ್ಕಳ ಅಸಹಜ ಸಾವಿನ ಕುರಿತು ತನಿಖೆ  

       ಧಾರವಾಡ 06: ಪತ್ರಿಕೆಗಳಲ್ಲಿ ವರದಿಯಾದಂತೆ ಕೇವಲ ಮೂರು ವರ್ಷದಲ್ಲಿ 5,880 ಮಕ್ಕಳು ಅಸಹಜವಾಗಿ ಸಾವನ್ನಪ್ಪಿರುವುದು ಅತ್ಯಂತ ಆಘಾತಕಾರಿ ಮತ್ತು ನೋವಿನ ವಿಷಯ. ಸಿಲಿಕಾನ್ ಸಿಟಿ ಎಂದೇ ಪ್ರಖ್ಯಾತವಾಗಿರುವ ಬೆಂಗಳೂರಿನಲ್ಲೇ ಅತ್ಯಧಿಕ ಪ್ರಕರಣಗಳು ದಾಖಲಾಗಿರುವುದು ಇನ್ನೂ ಖೇದಕರ. ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಆರು ತಿಂಗಳಲ್ಲಿ 111 ನವಜಾತ ಶಿಶುಗಳು ಸಾವನ್ನಪ್ಪಿವೆ. ಶಿಶುಗಳ ಆರೈಕೆ ವಿಭಾಗಕ್ಕೆ ಆಮ್ಲಜನಕ ಸರಿಯಾಗಿ ಪೂರೈಕೆಯಾಗದೇ ಇರುವುದರಿಂದ ನೂರಾರು ಶಿಶುಗಳು ಸಾವಿನ ಮಡಿಲು ಸೇರುತ್ತಿವೆ. ಇದು ನಮ್ಮ ಹದಗೆಟ್ಟ ಆರೋಗ್ಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. 

               ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದಿಗೂ ಅವಶ್ಯಕತೆನುಗುಣವಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಮೂಲಭೂತ ಸೌಲಭ್ಯಗಳಿಲ್ಲ. ಆರೋಗ್ಯಕ್ಕಾಗಿ ಸರ್ಕಾರಿ ಆಸ್ಪತ್ರೆಗಳನ್ನು ಅರಸಿಕೊಂಡು ಬರುವ  ಬಡವರ ಪಾಲಿಗೆ ಅವುಗಳೇ ಸಾವಿನ ಕೂಪಗಳಾಗುತ್ತಿವೆ. ಪರಿಸ್ಥಿತಿ ಹೀಗಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರದ ಧೋರಣೆ ಅತ್ಯಂತ ಖಂಡನೀಯ.   

          ಜೊತೆಗೆ ಬಾಲ್ಯ ವಿವಾಹ, ಪೋಷಕರ ಬಡತನ , ಆನ್ಲೈನ್ ಜೂಜು, ಮದ್ಯ ಹಾಗೂ ಮಾದಕ ವಸ್ತುಗಳಿಗೆ ವ್ಯಸನ, ಖಿನ್ನತೆ, ಅಸಹಾಯಕತೆ, ಹೆಚ್ಚುತ್ತಿರುವ  ಪೊಕ್ಸೋ ಪ್ರಕರಣಗಳು, ಆಸಿಡ್ ದಾಳಿ , ಪ್ರೇಮ ವೈಫಲ್ಯ_.. ಹೀಗೆ ಹಲವಾರು ಕಾರಣಗಳಿಗೆ 18 ವರ್ಷದೊಳಗಿನವರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಬಾಳಿ ಬದುಕಬೇಕಾಗಿರುವ ಮಕ್ಕಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದು ಭವಿಷ್ಯಕ್ಕೆ ಮಾರಕ. ಸರ್ಕಾರ ಈ ಕೂಡಲೇ ಇಂತಹ ಅಸಹಜ ಸಾವುಗಳನ್ನು ತಡೆಯಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಬೆಳಗಾವಿಯಲ್ಲಿ ಶಿಶುಗಳ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾರಣಗಳನ್ನು ಪತ್ತೆ ಹಚ್ಚಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಂಋಖಖ)ಯ ಧಾರವಾಡ ಜಿಲ್ಲಾ ಸಮಿತಿ ಈ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಂಋಖಖನ ಜಿಲ್ಲಾ ಅಧ್ಯಕ್ಷರಾದ ಮಧುಲತಾ ಗೌಡರ್, ಜಿಲ್ಲಾ ಕಾರ್ಯದರ್ಶಿಗಂಗೂಬಾಯಿ ಕೋಕರೆ, ಜಿಲ್ಲಾ ಉಪಾಧ್ಯಕ್ಷರಾದ ದೇವಮ್ಮ ದೇವತ್ಕಲ್ ಇದ್ದರು.