ಮನೆಗೂ ಹಾಗೂ ಮನ-ಮನಕ್ಕೂ ಕಾನೂನಿನ ಅವಕಾಶಗಳನ್ನು ತಿಳಿಸುವ ಪ್ರಯತ್ನ
An effort to convey the opportunities of the law to the home and to the mind.
ಲೋಕದರ್ಶನ ವರದಿ
ಮನೆಗೂ ಹಾಗೂ ಮನ-ಮನಕ್ಕೂ ಕಾನೂನಿನ ಅವಕಾಶಗಳನ್ನು ತಿಳಿಸುವ ಪ್ರಯತ್ನ
ಹಾವೇರಿ 04 :ಪ್ರತಿ ಮನೆ ಮನೆಗೂ ಹಾಗೂ ಮನ-ಮನಕ್ಕೂ ಕಾನೂನಿನ ಅವಕಾಶಗಳನ್ನು ತಿಳಿಸುವ ಪ್ರಯತ್ನ ಮಾಡಲು ಅರೆಕಾಲಿಕ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರವನ್ನು ಅರೆಕಾಲಿ ಸ್ವಯಂ ಸೇವಕರು ಸದುಪಯೋಗಪಡಿಸಿಕೊಳ್ಳುವಂತಾಗಲಿ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ ದೇವಿಂದ್ರ್ಪ ಎನ್ ಅವರು ಹೇಳಿದರು.
ಇಲ್ಲಿನ ಗುರುಭವನದಲ್ಲಿ ಜಿಲ್ಲಾ ನ್ಯಾಯಾಂಗ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾ ವಕೀಲರ ಸಂಘ ಹಾಗೂ ಓಟ್ ಲಾಡ್ ಇಂಡಿಯಾ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಅರೆಕಾಲಿಕ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಬೇಕಾಗುತ್ತದೆ.ಅದಕ್ಕಾಗಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.ಕಟ್ಟುಕಡೆಯ ವ್ಯಕ್ತಿಗೂ ಕಾನೂನಿನ ಜಾಗೃತಿ ಮೂಡಿಸಲು ಅರೆಕಾಲಿಕ ಸ್ವಯಂ ಸೇವಕರಾದ ನಿಮಗೆ ನಾಲ್ಕು ದಿನಗಳ ಕಾಲ ತರಬೇತಿಯನ್ನು ಏರಿ್ಡಸಲಾಗಿದ್ದು,ತರಬೇತಿಯ ಅಂಶಗಳನ್ನು ಸರಿಯಾಗಿ ಅರಿತುಕೊಂಡು ಜನಸಾಮಾನ್ಯರಿಗೆ ಕಾನೂನು ನೆರವು ನೀಡಲು ಮುಂದಾಗಿರಿ ಎಂದರು.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ಎಂ.ರಮೇಶ ಮಾತನಾಡಿ ಸ್ವಯಂ ಸೇವಕರ ಕೆಲಸಕ್ಕೆ ಕೂಲಿ ಪಡೆಯುವ ಅಲ್ಲ.ಸಮಾಜಕ್ಕಾಗಿ ನಾವು ಸ್ವಯಂ ಪ್ರೇರಿತವಾಗಿ ಯಾವುದನ್ನು ನೀರೀಕ್ಷಿಸದೇ ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸಲು ತಮ್ಮ ಶ್ರಮ ಹಾಗೂ ಜ್ಞಾನವನ್ನು ಬಳಸಬೇಕಾಗುತ್ತದೆ.ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿಸ್ವಾರ್ಥವಾಗಿ ಹೋರಾಟ ಮಾಡಿ ತಮ್ಮ ಪ್ರಾಣತ್ಯಾಗ ಮಾಡಿರುವುದನ್ನು ನಾವು ಓದಿದ್ದೇವೆ. ಕಣ್ಣಿಗೆ ಕಾಣದೇ ಇರುವ ಅಪಾರ ಸಂಖ್ಯೆಯ ಮಹಾನ್ ವ್ಯಕ್ತಿಗಳು ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದಾರೆ.ಎಲ್ಲರನ್ನು ಸದಾ ಸ್ಮರಿಸುತ್ತೇವೆ.ಯಾವುದನ್ನು ಪಲಾಪೇಕ್ಷೆ ಇಲ್ಲದೇ ಕಾನೂನು ಅರಿವು ಮೂಡಿಸಲು ನ್ಯಾಯಿಕ ಸೇವೆ ಮಾಡಲು ಸಿದ್ಧರಾಗಿ ಬಂದಿದ್ದು, ತಾವೆಲ್ಲರೂ ಈ ತರಬೇತಿಯ ಸದುಪಯೋಗ ಪಡಿಸಿಕೊಳ್ಳಿರಿ ಎಂದು ನ್ಯಾಯಾಧೀಶರಾದ ಎನ್.ಎಂ.ರಮೇಶ ಅವರು ನಿಸಾರ್ಥ ಸೇವೆ ಮಾಡಿದ ಹಾಗೂ ದೇಶ ಪ್ರೇಮದ ಬಗ್ಗೆ ಮಾತನಾಡಿದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಹೆಚ್.ಸಿ.ಸಿದ್ದನಗೌಡರ ಮಾತನಾಡಿ ಜನಸಾಮಾನ್ಯರ ಜೊತೆಗೆ ಬೆರತು ಕೆಲಸ ಮಾಡುವ ಅರೆಕಾಲಿಕ ಸ್ವಯಂ ಸೇವಕರಿಗೆ ಇಂತಹ ತರಬೇತಿ ಅಗತ್ಯವಾಗಿದ್ದು,ತರಬೇತಿಯನ್ನು ಕಚ್ಚುಕಟ್ಟಾಗಿ ಮಾಡಲಾಗಿದೆ.ತರಬೇತಿದಾರರಿಂದ ಉಪಯುಕ್ತ ತಿಳುವಳಿಕೆ ಪಡೆಯುವಂತಾಗಲಿ ಎಂದರು.
ಅಧ್ಯಕ್ಷತೆವಹಿಸಿದ ಕೌಟುಂಬಿಕ ನ್ಯಾಯಾಲಯದ ಗೌರವಾನ್ವಿತ ಪ್ರಧಾನ ನ್ಯಾಯಾಧೀಶರಾದ ಎಂ.ಜಿ.ಶಿವಳ್ಳಿ ಮಾತನಾಡಿ ದೇಶ ನಮಗೆ ಏನು ನೀಡಿದೇ ಅನ್ನುವುದಕ್ಕಿಂತ ದೇಶಕ್ಕಾಗಿ ನಾವು ಏನು ಮಾಡಿದೆವು ಎಂಬುವುದು ಮುಖ್ಯ.ಕಾನೂನು ಅರಿವು ನೆರವು ನೀಡಲು ನಿರಂತರವಾಗಿ ಕಾರ್ಯಕ್ರಮಗಳು ಜರುಗುತ್ತಿವೆ.ಅರೆಕಾಲಿಕ ಸ್ವಯಂ ಸೇವಕರಾಗಿ ನಿಸ್ವಾರ್ಥವಾಗಿ ಜನಸಾಮಾನ್ಯರಿಗೆ ಕಾನೂನು ಸೇವೆಗೆ ತಾವು ಸಹಕಾರ ನೀಡುವಂತವರಾಗಿ ಎಂದರು.
ಗೌರವಾನ್ವಿತ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿ.ಕಾ.ಸೇ.ಪ್ರಾ ಸದಸ್ಯ ಕಾರ್ಯದರ್ಶಿಗಳಾದ ಶೈಲಜಾ ಹೆಚ್,ವಿ ಅವರು ಪ್ರಾಸ್ತಿವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು.ಈ ಸಂದರ್ಭದಲ್ಲಿ ಎಫ್.ಟಿ,ಎಸ್,ಸಿ-1 ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಶ್ವಿನಿ ವಿಜಯ ಶಿರಿಯಣ್ಣನವರ,ಸಿಜೆಎಂ ಗೌರವಾನ್ವಿತ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಮೊಹ್ಮದ್ ಅನ್ವರಹುಸೇನ ಮೊಗಲಾನಿ, ಜೆಎಂಎಫ್‌ಸಿ ಗೌರವಾನ್ವಿತ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶರಾದ ಶೋಭಾ ಬಿ.ಜಿ, ಜೆಎಂಎಫ್‌ಸಿ ಗೌರವಾನ್ವಿತ ಪ್ರಧಾನ ದಿವಾಣಿ ನ್ಯಾಯಾಧೀಶರಾದ ಆಕರ್ಷಿ ಎಂ, ಜೆಎಂಎಫ್‌ಸಿ ಗೌರವಾನ್ವಿತ ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಬಿಪಿನ್ ಎಚ್.ಎಂ ಸೇರಿದಂತೆ,ನ್ಯಾಯಾಲಯದ ಕಾರ್ಯವೃಂದದವರು, ಜಿಲ್ಲಾ ಅರೆಕಾಲಿಕ ಸ್ವಯಂ ಸೇವಕರು ಪಾಲ್ಗೊಂಡಿದ್ದರು.ಮಂಜುನಾಥ ಹಾವನೂರ ಕಾರ್ಯಕ್ರಮ ನಿರೂಪಿಸಿದರು.ಲಿಂಗರಾಜ ಶಿಗ್ಗಾಂವ ವಂದಿಸಿದರು.ಉದ್ಘಾಟನಾ ಕಾರ್ಯಕ್ರಮದ ನಂತರ ಓಟ್ ಲಾಡ್ ಇಂಡಿಯಾ ಫೌಂಡೇಶನದಿಂದ ಉಪನ್ಯಾಸಕರಾಗಿ ಆಗಮಿಸಿದ ವಂದನಾ ಕೆ. ಹಾಗೂ ತುಷಿತಾ ಎಸ್ ಅವರು ಅರೆಕಾಲಿಕ ಸ್ವಯಂ ಸೇವಕರಿಗೆ ತರಬೇತಿ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 