ಸಿನಿಮಾ ಭಾಷೆ ಗಡಿ ದಾಟಿ, ಜನರ ಹೃದಯ ತಟ್ಟುವ ಪ್ರಬಲ ಮಾಧ್ಯಮ : ಅಮಿತಾಬ್
ಪಣಜಿ, ನವೆಂಬರ್ 21: ಸಿನೆಮಾ ಸಾರ್ವತ್ರಿಕ ಮಾಧ್ಯಮ, ಅದಕ್ಕೆ ಭಾಷೆಯ ಗಡಿಯಿಲ್ಲ , ಮಿತಿಯೂ ಇಲ್ಲ ಎಂದು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಹೇಳಿದ್ದಾರೆ.
ಚಲನಚಿತ್ರಗಳು ಭಾಷೆಯ ಗಡಿಯನ್ನೂ ದಾಟಿ ಜನರ ಹೃದಯ ತಟ್ಟುವ ಶಕ್ತಿ ಇರುವ ಪ್ರಬಲ ಮಾದ್ಯಮವಾಗಿದೆ ಎಂದು ಅವರು 50 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಅಯೋಜಿಸಲಾಗಿದ್ದ ಕಲಾ ಅಕಾಡೆಮಿ ಉದ್ಘಾಟಿಸಿ ಅವರಿ ಈ ವಿಷಯ ತಿಳಿಸಿದರು.
ಪ್ರತಿಷ್ಠಿತ ದಾದಾ ಸಾಹಿಬ್ ಫಾಲ್ಕೆ ಪ್ರಶಸ್ತಿ ನೀಡಿದ ಸಕರ್ಾರಕ್ಕೆ ಧನ್ಯವಾದ ಹೇಳಿದರು. ನಾನು ಅಂತಹ ಮಾನ್ಯತೆಗೆ ಅರ್ಹನಲ್ಲ ಆದರೂ ಇದನ್ನು ಮತ್ತು ಪ್ರೀತಿ ವಿನಮ್ರತೆಯಿಂದ ಸ್ವೀಕರಿಸುತ್ತೇನೆ. ಎಂದು ಭಾವುಕರಾಗಿ ಹೇಳಿದರು.
ಐಎಫ್ಎಫ್ಐನ ಸುವರ್ಣ ಮಹೋತ್ಸವದ ಸಮಯದಲ್ಲಿ ತಮಗೆ ಇಂತಹ ಗೌರವ ನೀಡಿರುವುದಕ್ಕಾಗಿ ಅವರು ಸರಕಾರಕ್ಕೆ ಅಭಿನಂದನೆ ಹೇಳಿದರು."ಗೋವಾಕ್ಕೆ ಬರುವುದು ಎಂದರೆ ಮನೆಗೆ ಬರುವಷ್ಟೆ ಸಂತೋಷವಾಗುತ್ತದೆ ಈ ಸ್ಥಳದಲ್ಲಿ ಕೆಲಸ ಮಾಡಲು ಮತ್ತಿ ಇಲ್ಲಿನ ಜನರ ಆತಿಥ್ಯ ಎಲ್ಲರನ್ನು ಸದಾ ಕಾಲ ಕೈಬೀಸಿ ಕರೆಯುವಂತೆ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು.
ಈ ವರ್ಷ, ಚಿತ್ರೋತ್ಸವದ 50 ನೇ ಆವೃತ್ತಿಯಾಗಿದ್ದು ಹಿಂದಿನ ಅವಲೋಕನ , ನಡೆದು ಬಂದ ದಾರಿಯನ್ನು ಇದು ನೆನಪು ಮಾಡಿಕೊಡಲಿದೆ ಜೊತೆಗೆ ಈ ವರ್ಷವೇ ಅಮಿತಾಬ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ . ಚಿತ್ರೊತ್ಸವದಲ್ಲಿ ಅಮಿತಾಬ್ ಬಚ್ಚನ್ ಅಮೋಘ ಅಭಿನಯ ಆರು ಅತ್ಯುತ್ತಮ ಚಿತ್ರಗಳು ಪ್ರತ್ಯೇಕ ವಿಭಾಗದಲ್ಲಿ ಪ್ರದರ್ಶನ ಗೊಳ್ಳುತ್ತಿವೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 