ಮಧ್ಯ ಪ್ರಾಚ್ಯದಲ್ಲಿನ ಪ್ರಸ್ತುತ ಪರಿಸ್ಥಿತಿಗೆ ಅಮೆರಿಕಾ ಕಾರಣ ; ಇರಾನ್ ಅಧ್ಯಕ್ಷ ರೋಹಾನಿ ಆರೋಪ

ಮಾಸ್ಕೋ,  ಜ 13, ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ  ಬೆಳವಣಿಗೆಗಳಿಗೆ ಅಮೆರಿಕವನ್ನೇ  ದೂಷಿಸಬೇಕಾಗಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ, ಸ್ವೀಡಿಷ್ ಪ್ರಧಾನಿ ಸ್ಟೀಫನ್ ಲೋಫ್ವೆನ್ ಅವರೊಂದಿಗಿನ ದೂರವಾಣಿ ಮಾತುಕತೆ  ವೇಳೆ ಆರೋಪಿಸಿದ್ದಾರೆ  ಎಂದು ಇರಾನ್ ಅಧ್ಯಕ್ಷೀಯ ಕಾರ್ಯಾಲಯ  ಹೇಳಿಕೆಯಲ್ಲಿ ತಿಳಿಸಿದೆ.ಈ ಪ್ರದೇಶದಲ್ಲಿನ  ಇತ್ತೀಚಿನ ಘಟನೆಗಳಿಗೆ ಅಮೆರಿಕನ್ನರು ಜವಾಬ್ದಾರರು.  ಈ ಪ್ರದೇಶದಲ್ಲಿ ಅಮೆರಿಕಾ ಎಸಗಿರುವ   ಅಪರಾಧ ಕೃತ್ಯಗಳನ್ನು  ನಾವೆಲ್ಲರೂ  ಸ್ಪಷ್ಟ  ಶಬ್ದಗಳಲ್ಲಿ  ಖಂಡಿಸಬೇಕು" ಎಂದು ರೂಹಾನಿ  ಲೋಫ್ವೆನ್ ಅವರೊಂದಿಗಿನ  ಮಾತುಕತೆಯಲ್ಲಿ  ಹೇಳಿದ್ದಾರೆ ಎಂದು  ಹೇಳಿಕೆಯಲ್ಲಿ  ಉಲ್ಲೇಖಿಸಲಾಗಿದೆ.ವಿಶ್ವಸಂಸ್ಥೆಯ  ಸನ್ನದ್ದು   ಕಲಂ  51 ರ ಪ್ರಕಾರ ಇರಾಕ್ ನಲ್ಲಿರುವ   ಅಮೆರಿಕಾ  ನೆಲೆಗಳ ಮೇಲೆ ಇರಾನ ದಾಳಿ ನಡೆಸಲಾಗಿದ್ದು, ದಾಳಿಗಳು ಅಪರಾಧವಲ್ಲ ಎಂದು ಅಧ್ಯಕ್ಷರೋಹಾನಿ ಸ್ಪಷ್ಟಪಡಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿನ ಘರ್ಷಣೆಯನ್ನು ಈ ಪ್ರದೇಶದ  ರಾಷ್ಟ್ರಗಳು  ಪರಸ್ಪರ  ರಾಜಕೀಯ  ಸಂವಾದದ ಮೂಲಕ  ಹಾಗೂ ಪ್ರತಿ ರಾಷ್ಟ್ರದ  ಸಾರ್ವಭೌಮತ್ವವನ್ನು ಗೌರವಿಸಿ ಬಗೆಹರಿಸಬೇಕಾಗಿದೆ ಎಂದು ರೂಹಾನಿ  ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಭದ್ರತೆಯನ್ನು ಪುನಃಸ್ಥಾಪಿಸಲು ನಾವೆಲ್ಲರೂ ಕೈಜೋಡಿಸಿ ಶಾಂತಿ ನೆಲೆಸಲು ಅನುವು ಮಾಡಿಕೊಡಬೇಕು ಎಂದು ರೂಹಾನಿ ಹೇಳಿದರು.ಉಕ್ರೇನಿಯನ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಅನೇಕ ಇರಾನಿಯನ್ನರ ಸಾವಿಗೆ ಸ್ವೀಡಿಷ್ ಪ್ರಧಾನ ಮಂತ್ರಿ ಸಂತಾಪ ಸೂಚಿಸಿದರು ಮತ್ತು ಟೆಹ್ರಾನ್ ವಿಮಾನ ದುರಂತದ  ಜವಾಬ್ದಾರಿಯನ್ನು ಹೊಣೆ ಹೊತ್ತಿರುವುದನ್ನು   ಅವರು ಶ್ಲಾಘಿಸಿದ್ದಾರೆ.