ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ ದೈವತ್ವಕ್ಕೆ ಸಮಾನ : ಜ್ಯೋತಿ ಗೊಂಡಬಾಳ
Ambedkar is not just a person, he is equal to divinity: Jyoti Gondabala
ಲೋಕದರ್ಶನ ವರದಿ
ಬಲ್ಡೋಟಾ ವಿರೋಧಿ ಧರಣಿ 166ನೇ ದಿನ: ಅಂಬೇಡಕರ್ ಜಯಂತಿ ಆಚರಣೆ
ಕೊಪ್ಪಳ 15: ಭಾರತದ ನವನಿರ್ಮಾತೃ, ಬಾಬಾಸಾಹೇಬ್ ಅಂಬೇಡ್ಕರ್ ಅವರು ವ್ಯಕ್ತಿಯಲ್ಲ, ಅವರೊಬ್ಬ ದಿವ್ಯ ಶಕ್ತಿ, ದೈವತ್ವಕ್ಕೆ ಸಮಾನ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಹೇಳಿದರು. ಅವರು ನಗರಸಭೆ ಮುಂದುಗಡೆ ನಡೆಯುತ್ತಿರುವ ಬಲ್ಡೋಟ ತೊಲಗಿಸಿ ಹೋರಾಟ ಹಾಗೂ ಕಾರ್ಖಾನೆ ಬಾಧಿತ ಪ್ರದೇಶ ಪುನರುಜ್ಜೀವನಗೊಳಿಸಿ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹ ವೇದಿಕೆಯ 166ನೇ ದಿನದ ಕಾರ್ಖಾನೆ ವಿರೋಧಿ ಧರಣಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿ, ಶಿಕ್ಷಣವನ್ನು ಮಹಿಳೆಯರಿಗೆ ಧಾರೆ ಎರೆದು ತಮ್ಮ ಜೀವಿತ ಕಾಲದಲ್ಲಿ ಮಹಿಳೆಯರು ವಿಮೋಚನೆಯಾಗಬೇಕು ಎಂದು ಕನಸು ಕಟ್ಟಿಕೊಂಡು ಸಂವಿಧಾನದ ಪಿತಾಮಹರಾಗಿ ಏನೆಲ್ಲಾ ಹಕ್ಕುಗಳನ್ನು ಕೊಡಬೇಕಾಗಿತ್ತೋ ಆ ಅವಕಾಶವನ್ನು ಮಾಡಿದ್ದರಿಂದಲೇ ಇವತ್ತು ಇಂತ ಧೈತ್ಯ ಕಾರ್ೋರೇಟ್ ಕಾರ್ಖಾನೆ ವಿರೋಧಿ ಹೋರಾಟದಲ್ಲಿ ನಿಂತು ಮಾತನಾಡುತಿದ್ದೇನೆ.
ಸಮಾಜದಲ್ಲಿ ಸಾಕಷ್ಟು ಅಸ್ಪೃಶ್ಯತೆ, ಅಸಮಾನತೆಯನ್ನು ಹೋಗಲಾಡಿಸಲು, ಪ್ರತಿಯೊಬ್ಬರೂ ಗೌರವಯುತ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟ ಧೀಮಂತ ನಾಯಕ. ನಾವು ಎಲ್ಲ ಕಡೆಗೆ ತೋರಿಸುತ್ತಿರುವ ಅಧಿಕಾರವನ್ನು ಹಕ್ಕಾಗಿ ಕೊಟ್ಟಿದ್ದು ಬಾಬಾಸಾಹೇಬರು. ಅಸಂಘಟಿತ ಶೋಷಿತ ವಗ9ಕ್ಕೆ ಬದುಕು ಕೊಟ್ಟಿದ್ದು ಅಂಬೇಡ್ಕರ್, ಅವರು ದೇಶದ ರತ್ನವೇ ಆಗಿದ್ದು ಅವರು ಕೊಟ್ಟ ಹೋರಾಟದ ಹಾದಿಯಲ್ಲಿ ಛಲಬಿಡದೇ ನಾವು ಈ ಕಾಖಾ9ನೆ ವಿರೋಧಿ ಹೋರಾಟದಲ್ಲಿ ಗೆಲ್ಲಬೇಕು ಎಂದರು. ಅಂಬೇಡ್ಕರ್ ನನ್ನ ಸಹೋದರನಿದ್ದಂತೆ, ತಂದೆ ತಾಯಿಯ ನಂತರದ ಸ್ಥಾನವನ್ನು ನಾನು ವಯಕ್ತಿಕವಾಗಿ ಅಂಬೇಡ್ಕರ್ ಅವರಿಗೆ ಕೊಟ್ಟಿದ್ದೇನೆ, ಇಲ್ಲಿ ಒಂದು ದಿನ ಅವರನ್ನು ನೆನೆಸಿಕೊಳ್ಳುವದಲ್ಲ, ಪ್ರತಿ ದಿನವೂ ಅವರನ್ನು ನೆನೆಯಬೇಕು ಎಂದು ಕರೆ ನೀಡಿದರು. ಇದೇ ಸಂವಿಧಾನ, ಕಾನೂನು ಅಸ್ತ್ರ ಬಳಸಿಕೊಂಡು ಒಗ್ಗಟ್ಟಿನಿಂದ ಹೋರಾಡಿ ಗೆದ್ದು ಜೀವ, ಆರೋಗ್ಯ ಕಾಪಾಡಿಕೊಳ್ಳೋಣ ಎಂದರು.
ಕ್ರಿಯಾ ವೇದಿಕೆ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮಾತನಾಡಿ, ಬಲ್ಡೋಟ ಎಂ.ಎಸ್.ಪಿ.ಎಲ್ 2011ರಿಂದ ನಡೆಯುತ್ತಿರುವ ಪೆಲ್ಲೆಟ್ ಘಟಕ ಕೊಪ್ಪಳ ನಗರ ಜನರ ಆರೋಗ್ಯ ದೃಷ್ಟಿಯಿಂದ ಬಂದ್ ಮಾಡಬೇಕು, ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಮಾಲಿನ್ಯಕಾರಿ ಸ್ಪಾಂಜ್ ಐರನ್ ಘಟಕಗಳನ್ನು ಅಲ್ಲಿಂದ ತೊಲಗಬೇಕು, ಬಸಾಪುರ ಕೆರೆ ಹೈಕೋರ್ಟ್ ಆದೇಶದಂತೆ ಜನ ಜಾನುವಾರು ನೀರು ಕುಡಿಯಲು ಮುಕ್ತಗೊಳಿಸಬೇಕು. ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಮುಚ್ಚಬೇಕು, ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಫ್ರಭು ಬೆಟ್ಟದೂರು, ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಮಾಜಿ ಪಟ್ಟಣ ಪಂಚಾಯತಿ ಸದಸ್ಯೆ ಸರೋಜಾ ಬಾಕಳೆ, ನಿವೃತ್ತ ಪ್ರಾಚಾರ್ಯ ಎಸ್. ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ಬಿ. ಜಿ. ಕರಿಗಾರ ಮಾತನಾಡಿದರು. ರವಿ ಕಾಂತನವರ, ಶರಣು ಶೆಟ್ಟರ್, ರಾಜಶೇಖರ ಏಳುಬಾವಿ, ದೇವೇಂದ್ರ್ಪ ಕೋಳೂರು, ಮೂಕಪ್ಪ ಮೇಸ್ತ್ರಿ ಬಸಾಪುರ, ಬಸವರಾಜ ನರೇಗಲ್, ಗಾಳೆಪ್ಪ ಪೂಜಾರ, ಎಸ್. ಎಂ. ಕಂಬಾಳಿಮಠ, ಪಂಪಣ್ಣ ಚಿಂತಪಲ್ಲಿ, ಗುರುರಾಜ ಕುಲಕರ್ಣಿ, ಪದ್ಮಾವತಿ ಡಿ, ರಮೇಶ ಪಿ.ಬಿ, ಶಿವರಾಜ ಎಚ್, ಯಲ್ಲಪ್ಪ ಆಡಿನ್, ಶಿವಪ್ಪ ಹಲಗೇರಿ, ಮಹಾದೇವಪ್ಪ ಮಾವಿನಮಡು, ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ನಾಗರಾಜ ಕುಷ್ಟಗಿ, ಬಸಪ್ಪ ಕಲಕೇರಿ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 