ಅದ್ದೂರಿಯಾಗಿ ಜರುಗಿದ ಅಂಬೇಡ್ಕರ್ ಹಬ್ಬ

Ambedkar festival celebrated with grandeur

ವಿಜಯಪುರ 11: ಇಂದಿನ ಆಧುನಿಕ ಭಾರತದಲ್ಲಿ ಮಹಿಳೆಯರೆಲ್ಲರು ಎಲ್ಲಾ ಕ್ಷೇತ್ರದಲ್ಲಿ ಸರಿ ಸಮನಾಗಿ ಸ್ವಾವಲಂಭಿಯಾಗಿ ಅನೇಕರಿಗೆ ಮಾದರಿಯಾಗಿ ಪ್ರೇರಣೆಯಾಗಿ ಬದುಕು ಸಾಗಿಸುತ್ತಿರುವುದು ಶಿಕ್ಷಣದಿಂದಲೇ ಎಂದು ವಿಜಯಪುರ ಜೆಜ್ವಿಟ್ ಸಂಸ್ಥೆಗಳ ಮುಖ್ಯಸ್ಥರಾದ ಫಾದರ ಪ್ರಾನ್ಸಿಸ್ ಮಿನೇಜಸ್ ಎ.ಎಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ದಲಿತ ವಿದ್ಯಾರ್ಥಿ ಪರಿಷತ್, ಜಾಗೃತ ಕರ್ನಾಟಕ ಹಾಗೂ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಡಾ ಅಂಬೇಡ್ಕರ ವೃತ್ತದ ಮುಂದುಗಡೆ ನಡೆಯುತ್ತಿರುವ 4 ದಿನಗಳ ಅಂಬೇಡ್ಕರ್ ಹಬ್ಬ ಕಾರ್ಯಕ್ರಮದ ಮೊದಲ ದಿನದಲ್ಲಿ ಜ್ಯೋತಿಬಾ ಫುಲೆಯವರ ಜನ್ಮದಿನಾಚರಣೆಯ ನಿಮಿತ್ಯ ಮಹಿಳೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಶುಕ್ರವಾರ ಬೆಳಿಗ್ಗೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ನೂರಾರು ಮಹಿಳೆಯರು ಬೃಹತ್ ಯಾತ್ರೆಯೊಂದಿಗೆ ವಿವಿಧ ವೇಷಭೂಷಣದೊಂದಿಗೆ ಅನೇಕ ಕಲಾ ತಂಡಗಳು ಹಾಗೂ ಬಂಜಾರಾ ನೃತ್ಯದೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದರು.  

ಬೆಂಗಳೂರಿನ ಸಾಮಾಜಿಕ ಚಿಂತಕರು, ಬರಗಾರ್ತಿಯಾದ ಡಾ. ದೂ ಸರಸ್ವತಿ ಅವರ ಮಹಿಳೆಯರ ಹಾಗೂ ನಶೀಸಿಹೊದ ಪಕ್ಷಿಗಳ ಕುರಿತು ಏಕಾಭಿಯ ನಟನೆ ಮುಖಾಂತರ ಪ್ರಸ್ತುತ ಪಡಿಸಿದರು. ನಂತರ ಮಾತನಾಡುತ್ತಾ  ಮೌಡ್ಯ ಕಂದಾಚಾರಗಳ ಪ್ರತಿಪಾದಕರ ಕಿರುಕುಳ ವಿರುದ್ಧ ಸತತ ಹೋರಾಟ ನಡೆಸಿದರು. ಅವರ ಚಿಂತನೆಗಳು ಇಂದಿನ  ಎಲ್ಲಾ ಸಮುದಾಯಗಳಿಗೆ  ಪ್ರಸ್ತುತವಾಗಿವೆ ಎಂದರು. ಜ್ಞಾನ ಪ್ರಸಾರದ ಕಾರ್ಯಕ್ಕೆ ಅವರು ಅನೇಕರ ಬೆಂಬಲ ಮತ್ತು ಸಹಕಾರದೊಂದಿಗೆ ಸಂಘಟಿತ ಪ್ರಯತ್ನಕ್ಕೆ ಮುಂದಾದರು  ಎಂದರು.  

ದಲಿತ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪಕರಾದ  ಶ್ರೀನಾಥ್ ಪೂಜಾರಿ ಪ್ರಾಸ್ತವಿಕವಾಗಿ ಮಾತನಾಡಿ,ವಿಜಯಪುರ ಜಿಲ್ಲೆಯ ದಿನದಿಂದ ದಿನಕ್ಕೆ ಕೋಮುವಾದಕ್ಕೆ ಬಲಿಯಾಗುತ್ತಿದೆ ಇದರ ವಿರುದ್ಧ  ಬಲಿಷ್ಠವಾದ ಜನಾಂದೋಲನ ಬೆಳೆಸುವುದು ಅನಿವಾರ್ಯವಾಗಿದೆ ಎಂದರು. ಬಹುತ್ವ ಭಾರತ ಬಹುತ್ವ ನಾವೆಲ್ಲ ಜಾರಿ ಮಾಡಲು ಶ್ರಮ ವಹಿಸಬೇಕಾಗಿದೆ ಎಂದರು. ಅಂಬೇಡ್ಕರ್ ಚಿಂತನೆಗಳು ಬೆಳೆಸಿಕೊಳ್ಳಲು  ಇಂತಹ ಹಬ್ಬಗಳು ಕೂರ್ಕವಾಗಿವೆ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ  ದು ಸ್ವರಸತಿಯವರನ್ನು ಸನ್ಮಾನಿಸಲಾಯಿತು. ಸ್ಲಂ ಮಹಿಳೆಯರು ತಾವು ದುಡಿದ ಹಣದಲ್ಲಿ  ಬಡ ಹೆಣ್ಣು ಮಕ್ಕಳಿಗೆ ಸ್ಕಾಲರ್ಶಿಪ್ ದುಡ್ಡನ್ನು ಕೊಟ್ಟು ಸನ್ಮಾನಿಸಲಾಯಿತು. 

ಸಂವಿಧಾನ ಹಬ್ಬದ ವಿಶೇಷತೆ: 30 ಕ್ಕೂ ಅಧಿಕ ಮಳಿಗೆಗಳಲ್ಲಿ ವಿವಿಧ ರೀತಿಯ ಬಹುತ್ವದ ಭೋಜನದೊಂದಿಗೆ, ಒಡಲದನಿ ಮಹಿಳಾ ಒಕ್ಕೂಟದ ಶೇಂಗಾ ಹೋಳಿಗೆ, ರೊಟ್ಟಿ, ಸಾಯಿತಾಸಕ್ತರಿಗೆ ಪುಸ್ತಕ ಮಾರಾಟದ ಮಳಿಗೆಗಳು ಇದ್ದವು. ಸೆಲ್ಪಿ ಸ್ಟ್ಯಾಂಡ ಹಾಗೂ ಪುಸ್ತಕ ಮಳಿಗೆಗಳಲ್ಲಿ ಜನಜಂಗುಳಿಯಿಂದ ಎಲ್ಲರು ಆನಂಧಿಸುತ್ತಾ ಕಾರ್ಯಕ್ರಮದ ಯಶಸ್ವಿಗೆ ಕಾರಣವಾದರು.  

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಆಯುಕ್ತಕರಾದ ಪಿ. ಸುನಿಲಕುಮಾರ ಅವರು ಅಲ್ಲಿಯ ಮಳಿಗೆಗಗಳನ್ನ ವಿಕ್ಷಿಸಿ ಶುಭ ಹಾರೈಸಿದರು. 

ಈ ಕಾರ್ಯಕ್ರಮದಲ್ಲಿ  ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಫಾದರ್ ಟಿಯೋಲ್ ಮಾಚಾದೊ, ಜಾಗೃತಿ ಕರ್ನಾಟಕದ ರಾಜ್ಯ ವ್ಯವಸ್ಥಾಪಕರಾದ ಮಲ್ಲಿಗೆ ಸಿರಿಮನೆ, ಹಿರಿಯರಾದ ಅನೀಲ ಹೊಸಮನಿ, ಚೆನ್ನು ಕಟ್ಟಿಮನಿ, ಮಹೇಶ್ವರಿ ಮಠಪತಿ, ಪ್ರಭುಗೌಡ ಪಾಟೀಲ, ಹಸಿರು ಸೇನೆ  ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ, ಅಕ್ಷಯ ಅಜಮನಿ, ಮಾದೇಶ ಚಲವಾದಿ, ಪ್ರಧಾನಿ ಮೂಲಿಮನಿ, ಮಹಾಂತೇಶ ದೊಡ್ಡಮನಿ, ವೆಂಕಟೇಶ ವಗ್ಯನವರ,  ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರು ದಲಿತ ವಿದ್ಯಾರ್ಥಿ ಪರಿಷತ್ತಿನ ನಾಯಕರು ಜಾಗೃತ ಕರ್ನಾಟಕದ ನಾಯಕರು ಇತರರು ಇದ್ದರು.