ಕಾಗಿನೆಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಕಾಗಿನೆಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ  Ambedkar Jayanti celebration in Kaginele

ಬ್ಯಾಡಗಿ 15 : ಶೋಷಿತ ಹಾಗೂ ದುರ್ಬಲ ವರ್ಗದವರಿಗೆ ಮಾನವ ಹಕ್ಕುಗಳನ್ನು ಒದಗಿಸಿದ ಶ್ರೇಯಸ್ಸು ಸಂವಿಧಾನಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಕೆಡಿಪಿ ಸದಸ್ಯೆ ಪ್ರೇಮಾ ಜೋಗುಳ ಹೇಳಿದರು.ಅವರು ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್  ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕ. ನೊಂದವರ, ದೀನದಲಿತರ ಬದುಕು ಬೆಳಗಿಸಿದ ಸೂರ್ಯ. ಶ್ರೇಷ್ಠ ಅರ್ಥಶಾಸ್ತ್ರಜ್ಞ. ಸಮಾಜ ಸುಧಾರಕ. ವಿಶ್ವರತ್ನ. ಮಹಾಮಾನವತಾ ವಾದಿ ಹಾಗೂ ಸಂವಿಧಾನ ಶಿಲ್ಪಿ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಸಮಾಜ ಸೇವಕ ಮಾಲತೇಶ ಕಟ್ಟಿಮನಿ ಮಾತನಾಡಿಮೌಡ್ಯತೆಯನ್ನು ತೊಲಗಿಸಲು ಶಿಕ್ಷಣವು ಪ್ರಬಲಅಸ್ತ್ರವಾಗಬೇಕೆಂದು ಪ್ರತಿಪಾದಿಸಿದ್ದ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ಮನುಷ್ಯ ಚಿರಂಜೀವಿಯಾಗಲಾರ. ಆದರೆ ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ. ಗಿಡಕ್ಕೆ ನೀರು ಎಷ್ಟು ಮುಖ್ಯವೋ ಅದೇ ರೀತಿಯಾಗಿ ಒಂದು ಚಿಂತನೆಯು ಸಮಾಜದಲ್ಲಿ ಪ್ರಸರಣವಾಗುವುದು ಕೂಡ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಜೀವನ, ಧ್ಯೇಯಗಳು, ಚಿಂತನೆಗಳು ನಮಗೆ ಆದರ್ಶವಾಗಬೇಕು. ಅವು ಅದಮ್ಯ ಚೇತನಗಳೂ ಆಗಿವೆ. ಇದನ್ನು ಯುವಪೀಳಿಗೆ ಅರಿತುಕೊಂಡು ಆದರ್ಶ ಪಥದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕಂಡಪ್ಪ ಪವಾರ್ ಶರಣ ಪಾಟೀಲ್ ಮೈಲಾರ​‍್ಪ ಪವಾರ್ ಮಲ್ಲಮ್ಮ ನಿಸಾರ್ ಸೇರಿದಂತೆ ಇತರರಿದ್ದರು.