ಸೂರ್ಯ ಚಂದ್ರ ಇರುವವರೆಗೆ ಅಂಬೇಡ್ಕರ್ ಅಜರಾಮರ: ಅಜಮನಿ
Ambedkar Ajaramara: Ajamani as long as there is sun and moon
ಲೋಕದರ್ಶನ ವರದಿ
ಮುದ್ದೇಬಿಹಾಳ 16 : ಶೋಷಿತರ, ಬಡವರ, ದಲಿತರ ಧ್ವನಿಯಾಗಿ ಅವರ ಏಳಿಗೆಗಾಗಿಯೇ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟು ಮೇಣ ತನ್ನನ್ನು ಸುಟ್ಟುಕೊಂಡು ಇತರರಿಗೆ ಬೆಳಕು ಕೊಟ್ಟಂತೆ ಅಂಬೇಡ್ಕರರು ತಮ್ಮ ನಾಲ್ಕು ಮಕ್ಕಳನ್ನು ದೇಶದ ಹಿತಕ್ಕಾಗಿ ಬಲಿ ಕೊಟ್ಟು ಜಗತ್ತಿಗೆ ಮಾದರಿಯಾದ ಸಂವಿಧಾನವನ್ನು ಬರೆದುಕೊಟ್ಟು ಸಂವಿಧಾನ ಶಿಲ್ಪಿಯಾದವರು. ಅವರ ತ್ಯಾಗವನ್ನು ಭಾರತೀಯರೆಲ್ಲರೂ ಎಂದೂ ಮರೆಯಬಾರದು ಎಂದು ಮುದ್ದೇಬಿಹಾಳದ ಸಾಹಿತಿ ಶಿವಪುತ್ರ ಅಜಮನಿ ಹೇಳಿದರು. ಅವರು ಇಲ್ಲಿನ ಸರಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ “ಮನೆಮನೆಗೆ ಮನಮನಕ್ಕೆ ಅಂಬೇಡ್ಕರ” ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಬಾಬಾ ಸಾಹೇಬರು ಬೆಟ್ಟದಷ್ಟು ಬಡತನವನ್ನು ಬೆನ್ನಿಗೆ ಹಚ್ಚಿಕೊಂಡು ಬಂದು ಜೀವನದುದ್ದಕ್ಕೂ ಜಾತೀಯತೆ, ಅವಮಾನ, ಅಪಮಾನ, ದೌರ್ಜನ್ಯ, ದಬ್ಬಾಳಿಕೆಗಳ ಕರಾಳ ಮುಖಗಳನ್ನು ನೋಡುತ್ತಲೇ ಬೆಳೆದವರು ಮತ್ತು ಸ್ವತಃ ಅನುಭವಿಸಿದವರು. ಕಷ್ಟಗಳನ್ನು ಮೆಟ್ಟಿಲಾಗಿ ಮಾಡಿಕೊಂಡು ಛಲದಂಕ ಮಲ್ಲನಾಗಿ ಹಗಲಿರುಳು ಅಧ್ಯಯನ ಮಾಡಿ ಹತ್ತಾರು ಪದವಿಗಳನ್ನು ಪಡೆದು ದಿನದ ಹದಿನೆಂಟು ಗಂಟೆಗಳ ಕಾಲ ಸತತ ಅಧ್ಯಯನ ಮಾಡಿ ವಿಶ್ವಜ್ಞಾನಿಯಾಗಿ ಹೊರಹೊಮ್ಮಿದವರು.
ಅಂಬೇಡ್ಕರರವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದರೆ, ದೇಶ ಅಭಿವೃದ್ಧಿಯಾಗುವದರಲ್ಲಿ ಯಾವ ಸಂದೇಹವೂ ಇಲ್ಲ. ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾಽಽಎಚ್.ಎ.ಕಟಗೂರ ಮಾತನಾಡಿ ಸಮಾಜದಲ್ಲಿ ಬೇರೂರಿರುವ ಜಾತಿಯತೆಯನ್ನು ಕಿತ್ತೊಗೆಯಲು ಎಲ್ಲರೂ ಶ್ರಮಿಸಬೇಕು. ಅಂದಾಗ ಮಾತ್ರ ಜಾತಿಯ ನಿರ್ಮೂಲನೆ ಸಾಧ್ಯ ಎಂದು ಹೇಳುತ್ತ ಅಂಬೇಡ್ಕರರ ಜೀವನ ಚರಿತ್ರೆಯ ಪುಸ್ತಕಗಳನ್ನು ಎಲ್ಲರೂ ಕೊಂಡು ಓದಬೇಕು ಎಂದು ಕರೆ ಕೊಟ್ಟರು. ಸಮಾಂಭದಲಿ ವಿದ್ಯಾರ್ಥಿಗಳಿಗಾಗಿ ಏರಿ್ಡಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾರದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ರೂಪರೇಷೆಗಳನ್ನು ಕುರಿತು ಪ್ರಾಸ್ಥಾವಿಕವಾಗಿ ಪ್ರೊ: ಪರಶುರಾಮ ದೇವಿ ಮಾತನಾಡಿದರು. ಧನಶ್ರೀ.ಡಿ, ಜ್ಯೋತಿ ಕೆ. ಅನಿತಾ ದೊಡಮನಿ, ಶಾಂತಾ ಬಂದಾಳ, ಪ್ರೋ.ಗೀರೀಶ ವಾಗಣಗೇರಿ, ಪ್ರೋ. ಮುತ್ತಣ್ಣ ಗೌಡರ್, ಡಾ.ವಾಯ್.ಎಸ್.ಗುಂಡಕರ್ಜಗಿ, ಪ್ರೋ.ಮೌನೇಶ ಸೇರಿದಂತೆ ಭಾರತ ಸ್ಕೌಟ್ಸ್ ್ಘ ಗೈಡ್ಸ್ನ ಕೆಡೆಟಗಳು ಮತ್ತು ಜಿಲ್ಲಾ ತರಬೇತಿದಾರರಾದ ಡಿ.ಬಿ.ಅತ್ತಾರ, ಹಾಗೂ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಪ್ರೋ. ಹಂಪಣ್ಣ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 