ನೊಂದವರ ಧ್ವನಿ ಅಂಬೇಡ್ಕರ

ನೊಂದವರ ಧ್ವನಿ ಅಂಬೇಡ್ಕರ  Ambedkar, the voice of the oppressed

ಬ್ಯಾಡಗಿ 15 : ಡಾ.ಬಿ.ಆರ್‌. ಅಂಬೇಡ್ಕರ್ ಅವರು ಸಮಾಜದ ಎಲ್ಲ ಶೋಷಿತ ಜಾತಿಗಳು ಮುಖ್ಯವಾಹಿನಿಗೆ ಬರಲು ಅವಕಾಶ ಕಲ್ಪಿಸಿದ್ದಾರೆ. ಈ ಕಾರಣದಿಂದಾಗಿ ಎಲ್ಲ ಜನರೂ ಅವರನ್ನು ಸ್ಮರಿಸಬೇಕಿದೆ ಎಂದು ತಾಲೂಕಾ ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದ ಸಮಿತಿ ಅಧ್ಯಕ್ಷ ಚಂದ್ರಶೇಖರ ಗದಗಕರ ಹೇಳಿದರು.ಅವರು ಮಂಗಳವಾರ ಪಟ್ಟಣದ ಸುಭಾಷ್ ನಗರದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ ಆವರಣದಲ್ಲಿ. ಡಾ ಬಾಬಾ ಸಾಹೇಬರ 135ನೇ ಜನ್ಮದಿನಾಚರಣೆ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ 119 ನೇ ಜನ್ಮದಿನಾಚರಣಾ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧ್ವನಿ ಇಲ್ಲದ ನೊಂದ ಜನರಿಗೆ ಸಂವಿಧಾನದಲ್ಲಿ ಹಕ್ಕುಗಳನ್ನು ಮೀಸಲಿರಿಸಿದ ಶ್ರೇಷ್ಠ ಕಾರ್ಯವನ್ನು ಅಂಬೇಡ್ಕರ್ ಮಾಡಿದ್ದಾರೆ. ಇಂದು ಜನರಿಗೆ ಪ್ರಶ್ನೆ ಮಾಡುವ ಧೈರ್ಯ ಬಂದಿದ್ದರೆ ಅದು ಅಂಬೇಡ್ಕರ್ ಅವರು ಕಲ್ಪಿಸಿದ ಹಕ್ಕುಗಳಿಂದ ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವಾರು ವರ್ಷ ಕಳೆದರೂ ದಲಿತರನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆದಲಿತರ ಸ್ಥಿತಿಗತಿ ಸುಧಾರಿಸ ಬಹುದು ಎನ್ನುವ ಆಶಯ ಕೈಗೂಡಿಲ್ಲ ಎಂದು ಅವರು ವಿಷಾದಿಸಿದರು.ದಲಿತರ ಅಭಿವೃದ್ಧಿಗೆ ಬೇಕಾದ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಯಾಗಿ ಜಾರಿ ಮಾಡದೆ ಶೋಷಣೆ ಮಾಡುವ ಜನರಲ್ಲಿ ಯಾವುದೇ ಬದಲಾವಣೆ ಬರದಿದ್ದಲ್ಲಿ ದಲಿತರ ಪ್ರಗತಿ ಎಂಬುದು ಮಾತಿಗೆ ಸೀಮಿತವಾಗುತ್ತದೆ.

ದಲಿತರ ಪರ ಕಾಳಜಿಯುಳ್ಳವರು ಅವರ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ  ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ,ಪ್ರಧಾನ ಕಾರ್ಯದರ್ಶಿ  ರಮೇಶ ಸುತ್ತ ಕೋಟಿ, ಇಓ ಕೆ.ಎಂ ಮಲ್ಲಿಕಾರ್ಜುನ , ಸಿಪಿಐ ಎಂ.ಡಿ.ಚಿಕ್ಕಣ್ಣನವರ,  ವಿನಯಕುಮಾರ ಹೊಳಿಯಪ್ಪಗೋಳ, ಮೆಹಬೂಬ್ ಸಾಬ್ ನದಾಫ, ಸುರೇಶ ಚಲವಾದಿ, ರಮೇಶ ಕೊಟಿಯವರ,  ಶಿವಣ್ಣ ಅಂಬಲಿ,ಸುರೇಶ ಚಲವಾದಿ,  ದುರ್ಗೇಶ ಗೋಣೆಮ್ಮನವರ, ಸುಭಾಷ್ ಮಾಳಗಿ, ವಿಜಯ ಮಾಳಗಿ, ನಾಗರಾಜ್ ಹಾವನೂರ ಸೇರಿದಂತೆ ಇತರರಿದ್ದರು.