ಅಂಬೇಡ್ಕರ್ ಚಿಂತನೆ ಯುವಜನತೆಗೆ ದಾರೀದೀಪ: ಕುಲಪತಿ

ಅಂಬೇಡ್ಕರ್ ಚಿಂತನೆ ಯುವಜನತೆಗೆ ದಾರೀದೀಪ: ಕುಲಪತಿ  Ambedkar's thought is a beacon for youth: Chancellor

ಲೋಕದರ್ಶನ ವರದಿ 

ಕಲಬುರಗಿ 5: ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಕರ್ನಾಟಕದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಹೆಜ್ಜೆಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಶಶಿಕಾಂತ್ ಎಸ್‌. ಗಡೇಕರ್ ಮಾತನಾಡಿ, ಡಾ. ಬಿ.ಆರ್‌. ಅಂಬೇಡ್ಕರ್ ಅವರ ಜ್ಞಾನ, ಚಿಂತನೆ ಮತ್ತು ಸಾಮಾಜಿಕ ಸೇವೆ ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ಹೇಳಿದರು.  

ವಿಶೇಷ ಉಪನ್ಯಾಸ ನೀಡಿದ ಬಿ.ಆರ್‌. ಬನಸೋಡೆ ಅವರು, ಅಂಬೇಡ್ಕರ್ ಅವರ ಕರ್ನಾಟಕದೊಂದಿಗೆ ಇರುವ ನಿಕಟ ಸಂಬಂಧ, ವಿಜಯಪುರ, ಧಾರವಾಡ ಸೇರಿದಂತೆ ವಿವಿಧ ಸ್ಥಳಗಳಿಗೆ ನೀಡಿದ ಭೇಟಿಗಳು ಹಾಗೂ ಅವರ ಸಾಮಾಜಿಕ ಹೋರಾಟಗಳ ಕುರಿತು ವಿವರಿಸಿದರು. ಅಂಬೇಡ್ಕರ್ ಅವರ ಚಿಂತನೆಗಳನ್ನು ಅಧ್ಯಯನ ಮಾಡುವ ಮೂಲಕ ಸಮಾನತೆ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಅರಿತುಕೊಳ್ಳಬಹುದು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಜೀವನ, ಹೋರಾಟ ಮತ್ತು ಕರ್ನಾಟಕದ ಐತಿಹಾಸಿಕ ನಂಟಿನ ಕುರಿತು ಚರ್ಚೆ ನಡೆಯಿತು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಡಾ. ರೆಹಮಾನ್ ಪಟೇಲ್ ಅವರನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.